ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಇಟಲಿಯಲ್ಲಿ ಪ್ರಧಾನಿ ಮೋದಿಗೆ ಸಂಸ್ಕೃತ ಮಂತ್ರ ಪಠಿಸಿ ಸ್ವಾಗತ

ನವದೆಹಲಿ: ಜಿ-20 ಶೃಂಗಸಭೆ ಮತ್ತು 26ನೇ ಕಾನ್ಫರೆನ್ಸ್ ಆಫ್ ಪಾರ್ಟೀಸ್‌ನಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಟಲಿಯನ್ನು ತಲುಪಿದ್ದಾರೆ.
ಅಲ್ಲಿ ಅವರಿಗೆ ಸಂಸ್ಕೃತ ಮಂತ್ರಗಳನ್ನು ಪಠಿಸುವ ಮೂಲಕ ಅವರ ಅಭಿಮಾನಿಗಳು ಸ್ವಾಗತ ಕೋರಿದ್ದಾರೆ. ವಿಶೇಷ ವಿಮಾನದ ಮೂಲಕ ಇಟಲಿಗೆ ತೆರಳಿರುವ ಪ್ರಧಾನಿ ಮೋದಿ, ರೋಮ್‌ನಲ್ಲಿ ನಡೆಯಲಿರುವ 16ನೇ ಜಿ-20 ರಾಷ್ಟ್ರಗಳ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಟಲಿ ಪ್ರಧಾನಿ ಮಾರಿಯೊ ಡ್ರಘಿ ಅವರ ಆಹ್ವಾನದ ಮೇರೆಗೆ ಮೋದಿ ಅದಲ್ಲಿಗೆ ತೆರಳಿದ್ದಾರೆ.
ರೋಮ್‌ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ವ್ಯಾಟಿಕನ್ ಸಿಟಿಯಲ್ಲಿ ಪೋಪ್‌ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ರೋಮ್‌ ತಲುಪುತ್ತಿದ್ದಂತೆಯೇ ಅಲ್ಲಿ ಇರುವ ಗಾಂಧಿ ಪ್ರತಿಮೆಗೆ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ, ಅಲ್ಲಿ ನೆರೆದಿದ್ದ ನೂರಾರು ಭಾರತೀಯ ಮೂಲದವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೂಡ ಅಲ್ಲಿ ಸಂಸ್ಕೃತ ಮಂತ್ರ ಪಠಿಸಲಾಯಿತು.

ಪ್ರಮುಖ ಸುದ್ದಿ :-   ಕೈಗೂಡದ ಸಂಖ್ಯಾಬಲದ ಲೆಕ್ಕಾಚಾರ, ಬೆಂಬಲದ ಭರವಸೆ ಹುಸಿ, ʼಅಪ್ರಾಮಾಣಿಕ' ನಾಯಕ: 1999ರ ಸರ್ಕಾರ ರಚನೆ ಪ್ರಯತ್ನದ ಕುರಿತು ಸೋನಿಯಾ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement