ಉಪನ್ಯಾಸಕರ ಪಾಠವು ಪ್ರೇರಣೆಯಾದಾಗ ಮಾತ್ರ ವಿದ್ಯಾಥಿಗಳಲ್ಲಿ ಜ್ಞಾನದ ಮಟ್ಟ ಹೆಚ್ಚಿಸಲು ಸಾಧ್ಯ; ಪ್ರೊ..ನಿಟ್ಟೂರ್

ಕುಮಟಾ; ವಿಷಯಗಳ ಆಳ ಜ್ಞಾನದೊಂದಿಗೆ ಕಲಾತ್ಮಕ ಬೋಧನೆಯಿಂದ ಉಪನ್ಯಾಸಕರು ಪಾಠಮಾಡಬೇಕು .ಕಲಿಸುವಿಕೆಯು ಆಕರ್ಷಕವಾಗಿ ವಿದ್ಯಾರ್ಥಿಗಳ ಮನ ಮುಟ್ಟುವಂತೆ ಇದ್ದಾಗ ಫಲಿತಾಂಶ ಗುಣಮಟ್ಟವು ಹೆಚ್ಚುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಪ್ರೊ..ಹನುಮಂತಪ್ಪ ನಿಟ್ಟೂರ್ ಹೇಳಿದರು.
ಅವರು ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಮತ್ತು ಲೆಕ್ಕ ಶಾಸ್ತ್ರದ ವಿಷಯದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಉಪನ್ಯಾಸಕರು ಸಮರ್ಪಣೆ ಭಾವ ಮತ್ತು ಬದ್ಧತೆ ಹೊಂದಿರಬೇಕು. ಉಪನ್ಯಾಸಕರ ಪಾಠವು ಪ್ರೇರಣೆಯಾದಾಗ ಮಾತ್ರ ವಿದ್ಯಾಥಿಗಳಲ್ಲಿ ಜ್ಞಾನದ ಮಟ್ಟ ಹೆಚ್ಚಿಸಲು ಸಾಧ್ಯ. ಇದರಿಂದ ನೂರಕ್ಕೆ ನೂರು ಫಲಿತಾಂಶ ಬರುತ್ತದೆ ಎಂದರು..

ನಂತರ ಅವರು ಕಾಲೇಜಿನ ವಾಣಿಜ್ಯ ಮ್ಯಾಗ್‌ಜೀನ್‌ ಬಿಡುಗಡೆ ಗೊಳಿಸಿದರು. ಉಪನ್ಯಾಸಕರು ಕಲಿಸುವ ಬಗ್ಗೆ ಆಳ ಜ್ಞಾನ ಹೊಂದಿದ್ದು ಪ್ರಶ್ನೆ ಪತ್ರಿಕೆಯ ಮುಖ್ಯ ವಿಷಯ ಹಾಗೂ ತಯಾರಿಕೆ ಬಗ್ಗೆ ವಿದ್ಯಾಥಿಗಳೊಂದಿಗೆ ಚರ್ಚಿಸಬೇಕು.ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಆತ್ಮ ಸ್ಥರ್ಯ ತುಂಬಬೇಕು ಹಾಗೂ ಪ್ರೀತಿಯಿಂದ ನೋಡಬೇಕು. ಆಗ ಎಲ್ಲ ವಿದ್ಯಾಥಿಗಳು ಜಿವನದಲ್ಲಿ ಸಾಫಲ್ಯ ಹೊಂದುವುದು ಖಚಿತ ಎಂದು ತಮ್ಮ ಉಪನ್ಯಾಸಕ ವೃತ್ತಿಯ ಅನುಭವ ಕಾರ್ಯಾಗಾರದಲ್ಲಿ ಶಿಕ್ಷಕರೊಂದಿಗೆ ಹಂಚಿಕೊಂಡರ.
ಎಲ್ಐಸಿಯಲ್ಲಿ ಉನ್ನತ ಹುದ್ದೆ ಸಿಕ್ಕಿದ್ದರೂ ಅದಕ್ಕೆ ರಾಜೀನಾಮೆ ನೀಡಿ ಹಣಕ್ಕೆ ಮಹತ್ವ ನೀಡದೆ ಅತ್ಯಂತ ಶ್ರೇಷ್ಠವಾದ ಉಪನ್ಯಾಸಕ ವೃತ್ತಿಗೆ ಬಂದಿರುವ ಉದ್ದೇಶದ ಬಗ್ಗೆ ತಿಳಿಸಿದರು.
ವಾಣಿಜ್ಯ ಉಪನ್ಯಾಸಕ ವೇದಿಕೆಯ ಜಿಲ್ಲಾ ಅಧ್ಯಕ್ಷ ಪ್ರಕಾಶ ರಾಣೆ ಮಾತನಾಡಿ ಇಂದಿನ ಶೈಕ್ಷಣಿಕ ಕ್ಷೇತ್ರದಲ್ಲಿಯ ಉಪನ್ಯಕರು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎನ್.ಜಿ. ಹೆಗಡೆ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಇರುತ್ತದೆ. ಅದನ್ನು ಉಪನ್ಯಾಸಕರು ಮತ್ತು ಆಡಳಿತ ಮಂಡಳಿಯವರು ಗುರತಿಸ ಬೇಕು. ವಿದ್ಯಾರ್ಥಿಗಳಿಗೆ ಅವರದೇ ಆದ ಗುರಿ ಇರುತ್ತದೆ. ಅವರಿಗೆ ತೊಂದರೆ ಆಗದ ರೀತಿಯ ಪರಿಸರ ರೂಪಿಸಿದಾಗ ಅಂತಹ ವಿದ್ಯಾಸಂಸ್ಥೆ ಏಳ್ಗೆ ಹೊಂದುತ್ತದೆ ಎಂದು ತಿಳಿಸಿದರು.
ಪದವಿ ಪ್ರಾಚಾರ್ಯ ಡಾ.ಎಸ್.ವಿ.ಶೇಣ್ವಿ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಯನ್ನು ಶ್ಲಾಘಿಸಿದರು.
ಕೆನರಾ ಕಾಲೇಜುಸೊಸೈಟಿಯ ಕಾರ್ಯದರ್ಶಿ ಸುಧಾಕರ ನಾಯಕ ಮಾತನಾಡಿ, ಈ ವರ್ಷದಿಂದ ಬಾಳಿಗಾ ವಿದ್ಯಾಲಯದಲ್ಲಿ ಜಾರಿಗೆ ತಂದ ಹೊಸ ಆಡಳಿತ ನೀತಿಯಿಂದ ವಿದ್ಯಾರ್ಥಿಗಳು ನಿದಿಷ್ಟವಾಗಿ ಹೆಚ್ಚಿನ ಸಮಯ ಕಾಲೇಜಿನ ಒಳಗೆ ಕಳೆಯಬೇಕು ಎನ್ನುವ ಉದ್ದೇಶ ರೂಪಿಸಿದ್ದನ್ನು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ.ವಿ.ಎನ್.ಹೆಗಡೆ, ಪ್ರೊ..ರವಿ ನಾಯ್ಕ ವಾಣಿಜ್ಯದ ಬಗ್ಗೆ ಹಾಗೂ ಪ್ರೊ. ಸಂತೋಷ ಶ್ಯಾನ ಭಾಗ ನೂತನ ಶಿಕ್ಷಣನೀತಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಡಾ.ಅರವಿಂದ ನಾಯಕ ಸ್ವಾಗತಿಸಿದರು, ಪ್ರೊ. ವಿ..ಡಿ..ಭಟ್ಟ ವಂದಿಸಿದರು. ವಿದ್ಯಾರ್ಥಿನಿಗಳಾದ ಮೇಘಾ ಭಟ್ಟ, ಶ್ರೀರಶ್ಮೀ ಭಟ್ಟ, ಪೂಜಾ ಮತ್ತು ಮಧುರಾ ಕಾರ್ಯಕ್ರಮ ನಿರ್ವಹಿಸಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

advertisement

  1. Ravi Naik

    ಸರ್ ನಿಮ್ಮ ಕನ್ನಡಿ ಪತ್ರಿಕೆಯಲ್ಲಿ ಸುದ್ದಿ ನೀಡುವುದು ಹೇಗೆ?

    ಇಂದ,
    ಎ.ಎಸ್.ಎಸ್ ಕಾಲೇಜು,
    ಗದಗ

ನಿಮ್ಮ ಕಾಮೆಂಟ್ ಬರೆಯಿರಿ