ನಟ ಪುನೀತ್ ರಾಜ್‌ಕುಮಾರ್‌ಗೆ ಅಂತಿಮ ನಮನ ಸಲ್ಲಿಸಲು ಕಂಠೀರವ ಕ್ರೀಡಾಂಗಣಕ್ಕೆ ಹರಿದುಬಂದ ಜನಸಾಗರ

ಬೆಂಗಳೂರು: ಶುಕ್ರವಾರ ಸಂಜೆ ಬೆಂಗಳೂರಿನ ಶ್ರೀಕಂಠೀರವ ಸ್ಟೇಡಿಯಂನಲ್ಲಿ ಸಾವಿರಾರು ಅಭಿಮಾನಿಗಳು ಹೃದಯಾಘಾತದಿಂದ 46 ನೇ ವಯಸ್ಸಿನಲ್ಲಿ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಸಾರ್ವಜನಿಕರ ದರ್ಶನಕ್ಕಾಗಿ ಅವರ ಪಾರ್ಥಿವ ಶರೀರವನ್ನು ಕ್ರೀಡಾಂಗಣದಲ್ಲಿ ಇರಿಸಲಾಗಿದೆ.
ಕಂಠೀರವ ಸ್ಟುಡಿಯೋ(Kanteerava Studio)ದಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಪುನೀತ್ ರಾಜ್​ಕುಮಾರ್ ಅವರ ಹಠಾತ್​ ನಿಧನ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಲಕ್ಷಾಂತರ ಅಭಿಮಾನಿಗಳು(Fans) ಕಣ್ಣೀರು ಹಾಕುತ್ತಿದ್ದಾರೆ. ನಟ-ನಟಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ.ಸಾವಿರಾರು ಜನರು ಕಂಠೀರ್ವ ಸ್ಟೇಡಿಯಂಗೆ ಹರಿದುಬರುತ್ತಿದ್ದಾರೆ.

ಮಹಿಳೆಯರು, ಮಕ್ಕಳು ಸೇರಿದಂತೆ ಸ್ಟೇಡಿಯಂನತ್ತ ಅಭಿಮಾನಿಗಳು (Appu Fans) ಹರಿದು ಬರುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣಗೊಳಿಸಲು ಸ್ಥಳದಲ್ಲಿ ಲಘು ಲಾಠಿ ಪ್ರಹಾರ ಸಹ ನಡೆಸಲಾಗಿದೆ. ಸಂಜೆ ವೇಳೆಗೆ ಪುನೀತ್ ರಾಜ್ ಕುಮಾರ್ ಶವ ಆಗಮಿಸುತ್ತಿದ್ದಂತೆ ಸ್ಟುಡಿಯೋನತ್ತ ಆಗಮಿಸುತ್ತಿರುವ ಜನರು ಬ್ಯಾರಿಕೇಡ್ ತಳ್ಳಿ ಒಳ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಬ್ಯಾರಿಕೇಡ್ ಹಿಡಿದು ಪೊಲೀಸರು (Police) ನಿಂತು ಅಭಿಮಾನಿಗಳನ್ನು ನಿಯಂತ್ರಿಸುತ್ತಿದ್ದಾರೆ.

https://twitter.com/i/status/1454109720298491912

ರಾತ್ರಿಯೆಲ್ಲಾ ಅಭಿಮಾನಿಗಳಿಗೆ ಪುನೀತ್ ಪಾರ್ಥಿವ ಶರೀರಕ್ಕೆ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.  ಸುಮಾರು ಏಳು ಸಾವಿರ ಪೊಲೀಸರು ಬೆಂಗಳೂರಿನಲ್ಲಿ ನಿಯೋಜನೆ ಮಡಲಾಗಿದೆ ಎನ್ನಲಾಗಿದೆ.
ಶುಕ್ರವಾರ ಸಂಜೆ ಕ್ರೀಡಾಂಗಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇತರ ಗಣ್ಯರು ಉಪಸ್ಥಿತರಿದ್ದರು. ಭಾನುವಾರ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ತಿಳಿಸಿದ್ದಾರೆ.
ಏತನ್ಮಧ್ಯೆ, ಬೆಂಗಳೂರು ನಗರದಲ್ಲಿರುವ ಎಲ್ಲಾ ಮದ್ಯದಂಗಡಿಗಳನ್ನು “ಮುನ್ನೆಚ್ಚರಿಕೆ ಕ್ರಮವಾಗಿ” ಎರಡು ರಾತ್ರಿ ಮುಚ್ಚುವಂತೆ ಪೊಲೀಸರು ಸೂಚಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ತೀವ್ರ ಗಸ್ತು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದ ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ಚುನಾವಣೆ ಘೋಷಣೆ

ಅಭಿಮಾನಿಗಳನ್ನು ತಡೆಯುವ ಸಮಯದಲ್ಲಿ ಮಡಿವಾಳ ಠಾಣೆಯ ಪೊಲೀಸ್ ಪೇದೆ ಗಣೇಶ್ ನಾಯಕ್ ಎಂಬವರು ಕಾಲು ಮುರಿತಗೊಂಡಿದೆ. ಗಣೇಶ್ ನಾಯಕ್ ಅವರನ್ನು ಮಲ್ಯ ಸಿಗ್ನಲ್ ಗೇಟ್ ಬಳಿ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿತ್ತು. ಕೂಡಲೇ ಗಣೇಶ್ ನಾಯಕ್ ಅವರನ್ನು ಮಲ್ಯ ಆಸ್ಪತ್ರೆಗೆ ರವಾನಿಸಲಾಗಿದೆ.

ಸಂತಾಪಗಳ ಸುರಿಮಳೆ
ಲೋಕೋಪಕಾರಿ, ಗಾಯಕ, ದೂರದರ್ಶನ ನಿರೂಪಕ ಮತ್ತು ನಿರ್ಮಾಪಕರೂ ಆಗಿದ್ದ ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್‌ಗೆ ವಿವಿಧ ವಲಯಗಳಿಂದ ಸಂತಾಪಗಳ ಮಹಾಪೂರವೇ ಹರಿದುಬರುತ್ತಿದೆ.
ವಿಧಿಯ ಕ್ರೂರ ತಿರುವು ನಮ್ಮಿಂದ ಸಮೃದ್ಧ ಮತ್ತು ಪ್ರತಿಭಾವಂತ ನಟನನ್ನು ಕಿತ್ತುಕೊಂಡಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಚಿತ್ರನಟ ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿಯಿಂದ ನನಗೆ ತೀವ್ರ ಆಘಾತವಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಸೋನು ಸೂದ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ “ಹೃದಯವಿದ್ರಾವಕ. ಯಾವಾಗಲೂ ನಿನ್ನನ್ನು ಕಳೆದುಕೊಳ್ಳುತ್ತೇನೆ ನನ್ನ ಸಹೋದರ. #ಪುನೀತ್ ರಾಜ್ ಕುಮಾರ್ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಮತ್ತು ಅನಿಲ್ ಕುಂಬ್ಳೆ ಅವರು ಪುನೀತ್ ರಾಜ್‌ಕುಮಾರ್‌ಗೆ ಸಂತಾಪ ಸೂಚಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು” ಎಂದು ವೀರೇಂದ್ರ ಸೆಹ್ವಾಗ್ ಬರೆದಿದ್ದಾರೆ. ಅನಿಲ್ ಕುಂಬ್ಳೆ ಟ್ವೀಟ್ ಮಾಡಿ, “ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಆಘಾತ ಮತ್ತು ತೀವ್ರ ದುಃಖವಾಗಿದೆ” ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಪ್ರಧಾನಿ ಬಗ್ಗೆ ವಿವಾದಾತ್ಮಕ ಹೇಳಿಕೆ, ವಿದ್ಯುತ್‌ ಕಡಿತ ಬೆದರಿಕೆ: ಶಾಸಕ ರಾಜು ಕಾಗೆಗೆ ಚುನಾವಣೆ ಆಯೋಗದಿಂದ ನೋಟಿಸ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement