ಸತತ ಐದನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಬೆಂಗಳೂರು: ದೇಶಾದ್ಯಂತ ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು (Petrol, diesel prices rise), ಸತತ ಐದನೇ ದಿನವೂ ಲೀಟರ್ ಪೆಟ್ರೋಲ್ ಡೀಸೆಲ್ ಬೆಲೆ 35 ಪೈಸೆ ಹೆಚ್ಚಳವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 35 ಪೈಸೆ ಹೆಚ್ಚಳವಾಗಿದ್ದು, ಲೀಟರ್‌ ಪೆಟ್ರೋಲ್ ದರ 109.34 ರೂ.ಗಳ ತಲುಪಿದೆ . ಲೀಟರ್ ಡೀಸೆಲ್ ದರ 35 ಪೈಸೆ ಏರಿಕೆಯಾಗುವ ಮೂಲಕ ಡೀಸೆಲ್ ದರ 98.07 ರೂಗಳಿಗೆ ತಲುಪಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ‌ 113.05 ರೂ.ಗಳಿದ್ದರೆ ಮತ್ತು ಡೀಸೆಲ್ ‌ ಬೆಲೆ ರೂ .104.02 ರಷ್ಟಾಗಿದೆ. ಮುಂಬೈನಲ್ಲಿ ಪೆಟ್ರೋಲ್ ‌ 115.15 ರೂ.ಗಳು ಮತ್ತು ಡೀಸೆಲ್ ‌ದರ .106.23 ರೂ.ಗಳಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 106.04 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 101.19 ರೂಪಾಯಿ ನಿಗದಿಯಾಗಿದೆ .ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 109.79 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 101.19 ರೂಪಾಯಿಯಾಗಿದೆ .
ಸೆಪ್ಟೆಂಬರ್ ​ 24 ರಿಂದ ಪೆಟ್ರೋಲ್ ​ ಬೆಲೆಗಿಂತ ಡೀಸೆಲ್ ​ ಬೆಲೆ ಏರಿಕೆಯಾಗಿದೆ . ಪೆಟ್ರೋಲ್ ​ ಬೆಲೆ 8.05 ರೂಪಾಯಿ ಹೆಚ್ಚಳವಾಗಿದ್ದರೆ ಡೀಸೆಲ್ ​ ಬೆಲೆ ಲೀಟರ್ 8.80 ರೂಪಾಯಿ ಹೆಚ್ಚಳವಾಗಿದೆ .

ಪ್ರಮುಖ ಸುದ್ದಿ :-   ಸಿದ್ದರಾಮಯ್ಯಗೆ ಬ್ಲ್ಯಾಕ್‌ಮೇಲ್‌ ಮಾಡಲು ಸ್ಟಿಂಗ್ ಆಪರೇಷನ್.. ಇದ್ರಲ್ಲಿ ಕಾಂಗ್ರೆಸ್ಸಿನವರು ಇದ್ದಾರೆ: ಸಚಿವ ಯತೀಂದ್ರ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement