ಅಫ್ಘಾನಿಸ್ತಾನದಲ್ಲಿ ಮನಕಲಕುವ ಘಟನೆಗಳು..: ಕುಟುಂಬ ನಿರ್ವಹಿಸಲು ಮುದುಕನಿಗೆ 9 ವರ್ಷದ ಹೆಣ್ಣು ಮಗು ಮಾರಾಟ ಮಾಡಿದ ತಂದೆ..!

ಕಾಬೂಲ್‌: ತಾಲಿಬಾನ್ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕುತ್ತಿದ್ದಂತೆ ನಿಷೇಧಿತ ಪ್ರಾಕ್ಟೀಸ್‌ಗಳು ಅನೇಕ ಭಾಗಗಳಲ್ಲಿ ತನ್ನ ತನ್ನ ಕರಾಳ ರೂಪವನ್ನು ತೋರಿಸಲು ಆರಂಭಿಸಿವೆ. ಹಣಕಾಸು ಮುಗ್ಗಟ್ಟಿನಿಂದ ಈಗ ಅಫ್ಘಾನಿಸ್ತಾನದಲ್ಲಿ ಈಗ ಎಂಟ್ಹತ್ತು ವರ್ಷದ ಹೆಣ್ಣು ಮಕ್ಕಳನ್ನು ಮಾರಾಟ ಮಾಡಲಾಗುತ್ತಿದೆ…! ಯುವತಿಯರನ್ನು ಮದುವೆಗಾಗಿ ಮಾರಾಟ ಮಾಡಲಾಗುತ್ತಿದೆ…!!
ಇತ್ತೀಚಿನ ತಿಂಗಳುಗಳಲ್ಲಿ, ಬಡತನ ಮತ್ತು ಹಸಿವಿನಿಂದ ಹೋರಾಡುತ್ತಿರುವ ಅನೇಕ ಸ್ಥಳಾಂತರಗೊಂಡ ಅಫಘಾನ್ ಕುಟುಂಬಗಳು ತಾವು ಬದುಕುಳಿಯುವ ಸಲುವಾಗಿ ಬೇಕಾದ ಹಣ ಮತ್ತು ಪೋಷಣೆಗೆ ತಮ್ಮ ಕೇವಲ ಹದಿಹರೆಯದ ಹೆಣ್ಣುಮಕ್ಕಳನ್ನು ಮದುವೆಯಾಗಬಯಸುವ ವಯಸ್ಸಾದವರಿಗೆ ಮಾರಾಟ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಅಂತಹ ಹೃದಯ ವಿದ್ರಾವಕ ಕಥೆ ಒಂಬತ್ತು ವರ್ಷದ ಪರ್ವಾನಾ ಮಲಿಕ್ ಅವರದ್ದು, ಅವರ ಕುಟುಂಬವು ಕಳೆದ ತಿಂಗಳು ಅವಳನ್ನು 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಹಾನಿಗೊಳಗಾದ ದೇಶದ ಬದ್ಘಿಸ್ ಪ್ರಾಂತ್ಯದಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ಜನರ ಶಿಬಿರದಲ್ಲಿ ವಾಸಿಸುತ್ತಿರುವ ಪರ್ವಾನಾ ಅವರ ಎಂಟು ಜನರ ಕುಟುಂಬವು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಉದ್ಯೋಗವೂ ಇಲ್ಲದೆ ಮತ್ತು ವಿದೇಶಿ ನೆರವು ಸಿಗದೆ ಸಂಸಾರ ನಿಭಾಯಿಸಲು ಹೆಣಗಾಡುತ್ತಿವೆ.
ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ, ಪರ್ವಾನಾ ತಂದೆ ಅಬ್ದುಲ್ ಮಲಿಕ್ ಅವರು ತಮ್ಮ 12 ವರ್ಷದ ಮಗಳನ್ನು ಒಂದೆರಡು ತಿಂಗಳ ಹಿಂದೆ ಮಾರಾಟ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು. ಈಗ, “ಇತರ ಕುಟುಂಬದ ಸದಸ್ಯರನ್ನು ಜೀವಂತವಾಗಿಡಲು” ಅವರು ತಮ್ಮ ಇನ್ನೊಬ್ಬ ಮಗಳಾದ ಒಂಬತ್ತು ವರ್ಷದ ಪರ್ವಾನಾ ಮಲಿಕ್ ಅವಳನ್ನು 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ತಂದೊಡ್ಡಿತು. ತನ್ನ ಈ ಕೃತ್ಯ ನಿ ಅಪರಾಧ ಎಂಬುದು ಗೊತ್ತಿದ್ದರೂ ಕುಟುಂಬದ ಅನಿವಾರ್ಯತೆ ಈ ಪರಿಸ್ಥಿತಿ ತಂದೊಡ್ಡಿದೆ. ತಾನು ಅವಮಾನ ಮತ್ತು ಪಶ್ಚಾತ್ತಾಪದಿಂದ ಕುಂದಿದ್ದೇನೆ ಎಂದು ಅವರು ಹೇಳಿದ್ದಾರೆ.
ತನ್ನ ಮಗಳು ಪರ್ವಾನಾ ಓದಿ ಶಿಕ್ಷಕಿಯಾಗಲು ಬಯಸಿದ್ದಳು. ಆದರೆ ಆಕೆಯ ಕುಟುಂಬದ ಸಂಕಷ್ಟದ ಆರ್ಥಿಕ ಪರಿಸ್ಥಿತಿ ಆಕೆಗೆ ಈ ಬಾಗಿಲನ್ನು ಮುಚ್ಚಿದೆ. ಆಕೆಯ ಮುಂಬರುವ “ಮದುವೆ” ಬಗ್ಗೆ ಕೇಳಿದಾಗ, “ಮುದುಕ” ತನ್ನನ್ನು ಹೊಡೆಯುತ್ತಾನೆ ಮತ್ತು ತನ್ನ ಮನೆಯಲ್ಲಿ ಕೆಲಸ ಮಾಡಲು ಒತ್ತಾಯಿಸುತ್ತಾನೆ ಎಂದು ಅವಳು ಭಯಪಡುತ್ತಾಳೆ.
ಎರಡು ದಿನಗಳ ನಂತರ, ಖರೀದಿದಾರ ಮಲಿಕ್ ಕುಟುಂಬದ ಮನೆಗೆ ಆಗಮಿಸಿದರು, 2,00,000 ಅಫ್ಘಾನಿಗಳನ್ನು (ಸುಮಾರು $2,200) ಕುರಿ, ಭೂಮಿ ಮತ್ತು ನಗದು ರೂಪದಲ್ಲಿ ಪರ್ವಾನಾ ತಂದೆಗೆ ಪಾವತಿಸಿ ಹುಡುಗಿಯೊಂದಿಗೆ ಹೊರಟ.
ಅಬ್ದುಲ್ ಮಲಿಕ್ ತನ್ನ ಮಗಳ ಹೊಸ ಮಾಲೀಕರಿಗೆ ಇದು ನಿಮ್ಮ ವಧು. ದಯವಿಟ್ಟು ಅವಳನ್ನು ನೋಡಿಕೊಳ್ಳಿ … ದಯವಿಟ್ಟು ಅವಳನ್ನು ಹೊಡೆಯಬೇಡಿ ಎಂದು ವಿನಂತಿಸಿದ. ಪ್ರತಿಕ್ರಿಯೆಯಾಗಿ, ಈ ವ್ಯಕ್ತಿ ಅಳುತ್ತಿರುವ ತಂದೆಗೆ ಪರ್ವಾನಾಗೆ ದಯೆ ತೋರಿಸುವೆ ಮತ್ತು ಅವಳನ್ನು ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ.
ನೆರೆಯ ಘೋರ್ ಪ್ರಾಂತ್ಯದಲ್ಲಿ, 10 ವರ್ಷದ ಮಾಗುಲ್ ತನ್ನ ಕುಟುಂಬವು ಹಣ ಪಾವತಿಸಬೇಕಿರುವ 70 ವರ್ಷದ ವ್ಯಕ್ತಿಯನ್ನು ಮದುವೆಯಾಗಬೇಖು ಎಂದುವಿಚಲಿತಳಾಗಿದ್ದಾಳೆ. “ನಾನು ನನ್ನ ಹೆತ್ತವರನ್ನು ಬಿಟ್ಟು ಹೋಗಲು ಬಯಸುವುದಿಲ್ಲ. ಅವರು ನನ್ನನ್ನು ಹೋಗುವಂತೆ ಒತ್ತಾಯ ಮಾಡಿದರೆ, ನಾನು ನನ್ನನ್ನು ಕೊಂದುಕೊಳ್ಳುತ್ತೇನೆ ಎಂದು ಸಮಾಧಾನಿಸಲಾಗದ ಸ್ಥಿತಿಯಲ್ಲಿದ್ದ ಮಗಲ್ ಸಿಎನ್‌ಎನ್‌ಗೆ ತಿಳಿಸಿದರು.
ಪರ್ವಾನಾ ಮತ್ತು ಮಾಗುಲ್‌ರಂತೆ, ಅಫ್ಘಾನ್ ಹುಡುಗಿಯರ ಭವಿಷ್ಯವು ಅನಿಶ್ಚಿತತೆಯಿಂದ ಮುಚ್ಚಲ್ಪಟ್ಟಿದೆ. ತಾಲಿಬಾನ್‌ಗಳು ಮಹಿಳೆಯರನ್ನು ಮಾಧ್ಯಮಿಕ ಶಿಕ್ಷಣದಿಂದ ನಿರ್ಬಂಧಿಸುವುದರೊಂದಿಗೆ ಮತ್ತು ಬಡತನ ಹೆಚ್ಚುತ್ತಿರುವಾಗ, ಹೆಚ್ಚು ಹೆಚ್ಚು ಹುಡುಗಿಯರು ಇಂಥ ಮದುವೆ ಮಾರುಕಟ್ಟೆಗೆ ತಳ್ಳಲ್ಪಡುತ್ತಿದ್ದಾರೆ.
“ಒಬ್ಬ ಹುಡುಗಿ ಶಾಲೆಯಲ್ಲಿ ಇರುವವರೆಗೂ, ಅವಳ ಕುಟುಂಬವು ಅವಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತದೆ. “ಒಬ್ಬ ಹುಡುಗಿ ಶಿಕ್ಷಣದಿಂದ ಹೊರಗುಳಿದ ತಕ್ಷಣ, ಇದ್ದಕ್ಕಿದ್ದಂತೆ ಅವಳು ಮದುವೆಯಾಗುವ ಸಾಧ್ಯತೆ ಹೆಚ್ಚು ಎಂದು ಹ್ಯೂಮನ್ ರೈಟ್ಸ್ ವಾಚ್‌ನ ಹೀದರ್ ಬಾರ್ ಹೇಳುತ್ತಾರೆ. ಬಹುಶಃ ಇನ್ನೆಷ್ಟೋ ಧ್ವನಿಯಿಲ್ಲದ ಎಷ್ಟೋ ಎಳೆಯ ವಯಸ್ಸಿನ ಹುಡುಗಿಯರು ಯಾರ್ಯಾರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬುದಕ್ಕೆ ಲೆಕ್ಕವಿಲ್ಲ.

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement