ಭಾರತದಲ್ಲಿ 10,423 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲು, ಇದು 259 ದಿನಗಳಲ್ಲಿ ಅತಿ ಕಡಿಮೆ

ನವದೆಹಲಿ: ಭಾರತದಲ್ಲಿ 10,423 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ, ಇದು 259 ದಿನಗಳಲ್ಲಿ ಅತಿ ಕಡಿಮೆ ಪ್ರಕರಣವಾಗಿದೆ
ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದಾಗಿ 443 ಸಾವುಗಳು ಸಂಭವಿಸಿವೆ. ಮಂಗಳವಾರ ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶವು ಒಟ್ಟು 15,021 ಚೇತರಿಕೆ ಕಂಡಿದೆ, ಒಟ್ಟು ಚೇತರಿಕೆಯ ದರವನ್ನು ಸುಮಾರು 98.20 ಪ್ರತಿಶತ ಮತ್ತು ಒಟ್ಟು ಚೇತರಿಕೆಯ ಪ್ರಮಾಣ 3,36,83,581 ಕ್ಕೆ ತಲುಪಿದೆ.
ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳಲ್ಲಿ 1% ಕ್ಕಿಂತ ಕಡಿಮೆಯಿವೆ, ಅವುಗಳು ಪ್ರಸ್ತುತ 0.45% ರಷ್ಟಿದ್ದರೆ, ಇದು ಮಾರ್ಚ್ 2020ಕ್ಕಿಂತ ಕಡಿಮೆಯಾಗಿದೆ.
ಭಾರತದಲ್ಲಿ ಕೋವಿಡ್‌-19 ನ ಒಟ್ಟು ಸಕ್ರಿಯ ಪ್ರಕರಣಗಳು 1,53,776 ಕ್ಕೆ ಇಳಿದಿದೆ, ಇದು 250 ದಿನಗಳಲ್ಲಿ ಅತ್ಯಂತ ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತೋರಿಸಿವೆ. ಭಾರತದಲ್ಲಿ, ಮಾರ್ಚ್ 2020 ರಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗದಿಂದ ಮೊದಲ ಸಾವು ವರದಿಯಾಗಿತ್ತು. ಈಗ ಸಾವಿನ ಸಂಖ್ಯೆ ಈಗ 4,58,880 ಆಗಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement