ನ್ಯೂಯಾರ್ಕ್: ದೀಪಾವಳಿ ಹಬ್ಬದ ಪ್ರಯುಕ್ತ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಶುಭಾಶಯ ಕೋರಿದ್ದಾರೆ. ಅಮೆರಿಕಾದ ವೈಟ್ ಹೌಸ್ನಲ್ಲಿ ಬೈಡೆನ್ ದಂಪತಿ ದೀಪಾವಳಿ ಆಚರಿಸಿದ್ದಾರೆ. ಕತ್ತಲೆ ಬಳಿಕ ಜ್ಞಾನ, ಬುದ್ಧಿವಂತಿಕೆ, ಸತ್ಯವಿದೆ ಎಂಬುದನ್ನು ದೀಪಾವಳಿಯ ಬೆಳಕು ನಮಗೆ ನೆನಪಿಸಲಿ. ಹತಾಶೆಯ ನಂತರ ಭರವಸೆ ಮತ್ತು ವಿವಿಧತೆಯಲ್ಲಿ ಏಕತೆ ಇದೆ ಎಂದು ತಿಳಿಯಲಿ. ದೀಪಾವಳಿ ಹಬ್ಬ ಆಚರಿಸುತ್ತಿರುವವರಿಗೆ ಶುಭಾಶಯಗಳು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶುಭಹಾರೈಸಿದ್ದಾರೆ.
ಹಿಂದೂ, ಸಿಖ್ಖ್, ಜೈನ್ ಮತ್ತು ಬೌದ್ಧ ಧರ್ಮದವರಿಗೆ, ಅಮೆರಿಕಾದಲ್ಲಿ ಹಾಗೂ ವಿಶ್ವದಾದ್ಯಂತ ದೀಪಾವಳಿ ಹಬ್ಬ ಆಚರಿಸುತ್ತಿರುವ ಎಲ್ಲರಿಗೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಜೋ ಬಿಡೆನ್ ದಂಪತಿ ಶುಭಹಾರೈಸಿದ್ದಾರೆ. ವೈಟ್ ಹೌಸ್ನಲ್ಲಿ ದೀಪ ಹಚ್ಚಿ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ವಿಡಿಯೋ ಸಂದೇಶದಲ್ಲಿ ಭಾರತದ ಎಲ್ಲರಿಗೂ ದೀಪಾವಳಿಯ ಶುಭಾಶಯ ಕೋರಿದ್ದಾರೆ.
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತದ ಎಲ್ಲರಿಗೂ ದೀಪಾವಳಿ ಶುಭಾಶಯಗಳನ್ನು ಕೋರಿದ್ದಾರೆ. ವರ್ಷದ ಈ ಸಮಯವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಒಟ್ಟಿಗೆ ಸೇರುವುದು ಮತ್ತು ಕಳೆದ ನವೆಂಬರ್‌ಗೆ ಹಿಂತಿರುಗಿ ಯೋಚಿಸಿದರೆ ನಾವು ಬಹಳ ದೂರ ಸಾಗಿದ್ದೇವೆ ಎಂಬುದರಲ್ಲಿ ಸಂದೇಹವಿಲ್ಲ” ಎಂದು ಬ್ರಿಟನ್ ಪ್ರಧಾನಿ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ದುರ್ಬಲರನ್ನು ಬೆಂಬಲಿಸಲು ಮತ್ತು ಕಳೆದ ಹದಿನೆಂಟು ತಿಂಗಳುಗಳಲ್ಲಿ ಸುರಕ್ಷಿತವಾಗಿರಲು ಸಹಾಯ ಮಾಡಲು ನೀವು ಮಾಡಿದ ಎಲ್ಲದಕ್ಕೂ ಬ್ರಿಟನ್‌ನ ಹಿಂದೂಗಳು, ಸಿಖ್ಖರು, ಜೈನರಿಗೆ ಮತ್ತೊಮ್ಮೆ ಧನ್ಯವಾದ ಹೇಳಲು ನಾನು ಬಯಸುತ್ತೇನೆ ಈ ವರ್ಷ ಲೀಸೆಸ್ಟರ್‌ನಲ್ಲಿ ಬೆಳಕಿನ ಚಕ್ರವು ಬ್ಯಾಕ್‌ಅಪ್ ಆಗಿದೆ, ದೇಶಾದ್ಯಂತ ಈವೆಂಟ್‌ಗಳು ನಡೆಯುತ್ತಿವೆ ಮತ್ತು ನೀವು ಆಚರಣೆಗಳಿಗಾಗಿ ಮತ್ತು ಬಹುಶಃ ಕೆಲವು ರುಚಿಕರವಾದ ಮಿಥಾಯ್ (ಸಿಹಿಗಳು) ಔತಣಕ್ಕಾಗಿ ಎದುರು ನೋಡುತ್ತಿರುವಾಗ, ನಾವು ಹೃದಯದಲ್ಲಿರುವ ಪ್ರಬಲ ಸಂದೇಶವನ್ನು ಪ್ರತಿಬಿಂಬಿಸಬಹುದು. ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ, ಕತ್ತಲೆಯ ಮೇಲೆ ಬೆಳಕು ಮತ್ತು ಅಜ್ಞಾನದ ಮೇಲೆ ಜ್ಞಾನದ ಈ ಹಬ್ಬ” ಎಂದು ಬ್ರಿಟನ್ ಪ್ರಧಾನಿ ಜಾನ್ಸನ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಗ್ಲಾಸ್ಗೋದಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರು ಭಾರತೀಯ ಪ್ರಧಾನಿ ಮತ್ತು ಜನರಿಗೆ ಹಿಂದಿಯಲ್ಲಿ ಶುಭಾಶಯ ಕೋರಿದ್ದಾರೆ.
ಸಿಂಗಾಪುರ ಮತ್ತು ಆಸ್ಟ್ರೇಲಿಯಾದಿಂದಲೂ ದೀಪಾವಳಿ ಸಂದೇಶಗಳು ಹರಿದು ಬಂದಿವೆ.
ನಿಮ್ಮ ಕಾಮೆಂಟ್ ಬರೆಯಿರಿ