ನಾಳೆಯಿಂದ ರಾಜ್ಯದ ಹೊಟೇಲುಗಳಲ್ಲಿ ಊಟ-ತಿನಿಸುಗಳ ದರ ಏರಿಕೆ…!

ಬೆಂಗಳೂರು: ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರಗಳು ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಹೋಟೆಲ್‍ಗಳಲ್ಲಿ ಕಾಫಿ, ತಿಂಡಿ, ಊಟಗಳ ದರ ಹೆಚ್ಚಿಸಲು ರಾಜ್ಯ ಹೋಟೆಲ್‍ ಅಸೋಸಿಯೇಷನ್ ನಿರ್ಧರಿಸಿದೆ.
ಪ್ರತಿಯೊಂದು ಆಹಾರ ಉತ್ಪನ್ನದ ಮೇಲೆ ಕನಿಷ್ಠ 10%ರಷ್ಟು ಹೆಚ್ಚಳ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಎಲ್ಲ ತಿಂಡಿ, ತಿನಿಸು, ಊಟದ ಮೇಲೆ ಶೇ.10 ರಿಂದ 20ರಷ್ಟು ದರ ಏರಿಕೆಗೆ ರಾಜ್ಯ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ಹೋಟೆಲ್ ಆಹಾರ ಬೆಲೆ ಏರಿಕೆ ರಾಜ್ಯಾದ್ಯಂತ ಅನ್ವಯವಾಗಲಿದೆಈ ಸಂಬಂಧ ಇತ್ತೀಚಿಗೆ ಹೋಟೆಲ್ ಮಾಲೀಕರ ಸಂಘದ ಸಭೆ ನಡೆದಿತ್ತು. ಈಗ ನಾಳೆಯಿಂದ ಹಂತ ಹಂತವಾಗಿ ತಿಂಡಿ-ತಿನಿಸುಗಳ ದರ ಏರಿಕೆ ಮಾಡಲು ಹೋಟೆಲ್ ಅಸೋಸಿಯೇಷನ್ ತೀರ್ಮಾನಿಸಿದೆ. ಕೆಲವು ಹೋಟೆಲ್ ಗಳು ನ.15ರ ನಂತರ ದರ ಏರಿಕೆಗೆ ನಿರ್ಧರಿಸಿದೆ.
ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಕಡಿತಗೊಳಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು 35% ರಿಂದ 25.9%ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 24% ರಿಂದ 14.34%ಕ್ಕೆ ಇಳಿಸಿ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಆದರೆ ಗ್ಯಾಸ್ ದರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್‍ಗಳಿಗೆ ದೊಡ್ಡ ಹೊಡೆತ ಬಿದ್ದಿದೆ ಹಾಗಾಗಿ ಹೋಟೆಲ್ ಆಹಾರಗಳ ದರ ಹೆಚ್ಚಾಗಿದೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement