ಮಯೂರ್‌ಭಂಜ್‌ನಲ್ಲಿ ಬಾವಿಗೆ ಬಿದ್ದ 12 ಅಡಿ ಉದ್ದದ ಬೃಹತ್‌ ಕಾಳಿಂಗ ಸರ್ಪ ರಕ್ಷಿಸಿದ ಅರಣ್ಯ ಇಲಾಖೆ.. ವೀಕ್ಷಿಸಿ

ಒಡಿಶಾದ ಅರಣ್ಯ ಇಲಾಖೆಯು ಪಾಳುಬಿದ್ದ ಬಾವಿಯೊಳಗೆ ಪತ್ತೆಯಾದ 12 ಅಡಿ ಉದ್ದದ ಬೃಹತ್‌ ಕಾಳಿಂಗ ಸರ್ಪವನ್ನು ರಕ್ಷಿಸಿದೆ.
ಮಂಗಳವಾರ ಮಯೂರ್‌ಭಂಜ್ ಜಿಲ್ಲೆಯ ಖುಂಟಾ ಪ್ರದೇಶದಲ್ಲಿ ಈ ಕಾಳಿಂಗ ಸರ್ಪ ಬಾವಿಯಲ್ಲಿ ಪತ್ತೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಚಿತ್ರವು ಹಾವು ತನ್ನ ರಕ್ಷಿಸಿದವನೊಂದಿಗೆ ಮುಖಾಮುಖಿಯಾಗಿರುವುದನ್ನು ತೋರಿಸುತ್ತದೆ.
ಹಾವನ್ನು ರಕ್ಷಿಸಿದ್ದಕ್ಕಾಗಿ ಕೆಲವರು ಅರಣ್ಯ ಇಲಾಖೆಯನ್ನು ಶ್ಲಾಘಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ವೀಡಿಯೊದಲ್ಲಿ, ಕುತೂಹಲಕಾರಿ ಪ್ರೇಕ್ಷಕರು ನೋಡುತ್ತಿರುವಂತೆ ಹಾವು ಹಿಡಿಯುವವನು ಕಾಳಿಂಗ ಸರ್ಪವನ್ನು ಹಿಡಿದಿರುವುದು ಕಂಡುಬರುತ್ತದೆ. ರಕ್ಷಣೆ ಕಾರ್ಯದಲ್ಲಿ ತೊಡಗಿದ್ದ ಅರಣ್ಯ ಅಧಿಕಾರಿಯ ಪ್ರಕಾರ, ಕಾಳಿಂಗ ಸರ್ಪವನ್ನು ಮತ್ತೆ ಕಾಡಿಗೆ ಬಿಡುವ ಮೊದಲು ಅದರ ಆರೋಗ್ಯವನ್ನು ಪರೀಕ್ಷಿಸಲಾಯಿತು. ರಕ್ಷಣಾ ಕಾರ್ಯ ಸವಾಲಿನದಾಗಿತ್ತು. ಯಾಕೆಂದರೆ ಕಾಳಿಂಗ ಅದು 12 ಅಡಿ ಉದ್ದದ ಬೃಹತ್‌ ಕಾಳಿಂಗ ಸರ್ಪವಾಗಿತ್ತು. ಜೊತೆಗೆ ಬಹಳ ವಿಷಕಾರಿ ಪ್ರಾಣಿ. ಹೀಗಾಗಿ ತಂಡವು ರಕ್ಷಣಾ ಕಾರ್ಯವನ್ನು ಬಹು ಎಚ್ಚರಿಕೆಯಿಂದ ನಡೆಸಿ ಅದನ್ನು ಬಾವಿಯಿಂದ ಮೇಲಕ್ಕೆ ತರಲಾಯಿತು ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಇದೇ ರೀತಿಯ ಘಟನೆಯಲ್ಲಿ ಒಡಿಶಾದ ಗಂಜಾಂ ಜಿಲ್ಲೆಯ ಬುರುಜಾರಿ ಗ್ರಾಮದ ಪಾಳುಬಿದ್ದ ಬಾವಿಯಲ್ಲಿ ಕಾಳಿಂಗ ಸರ್ಪ ಪತ್ತೆಯಾಗಿತ್ತು.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement