ಸೇನೆಗೆ ಮತ್ತಷ್ಟು ಬಲ..ರಷ್ಯಾದಿಂದ ಭಾರತಕ್ಕೆ S-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಪೂರೈಕೆ ಆರಂಭ: ಎಸ್​-400 ಸಾಮರ್ಥ್ಯದ ಮಾಹಿತಿ ಇಲ್ಲಿದೆ

ನವದೆಹಲಿ: ಶತ್ರುದೇಶಗಳಿಂದ ಬರುವ ಯುದ್ಧವಿಮಾನಗಳು ಮತ್ತು ಕ್ರೂಸ್​ ಕ್ಷಿಪಣಿಗಳನ್ನು ಮುಂಚಿತವಾಗಿಯೇ ಗುರುತಿಸಿ ಹೊಡೆದುರುಳಿಸಬಲ್ಲ ಭೂಮಿಯಿಂದ ಆಗಸಕ್ಕೆ ಹಾರುವ ಎಸ್​-400 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಈ ಮೊದಲಿನ ಒಪ್ಪಂದದಂತೆಯೇ ಭಾರತಕ್ಕೆ ರಷ್ಯಾ ಪೂರೈಸುತ್ತಿದೆ. ಮೊದಲ ಹಂತದ ಉಪಕರಣಗಳು ಭಾರತ ತಲುಪಿವೆ ಎಂದು ಮಿಲಿಟರಿ ಟೆಕ್ನಿಕಲ್ ಕೊಆಪರೇಷನ್ ಸಂಸ್ಥೆಯ ನಿರ್ದೇಶಕ ಡ್ಮಿತ್ರಿ ಶುಗೇವ್ ದುಬೈ ಏರ್​ಶೋನಲ್ಲಿ ಹೇಳಿದ್ದಾರೆ.
ಶತ್ರುದೇಶಗಳಿಂದ ಬರುವ ಯುದ್ಧವಿಮಾನಗಳು ಮತ್ತು ಕ್ರೂಸ್​ ಕ್ಷಿಪಣಿಗಳನ್ನು ಮುಂಚಿತವಾಗಿಯೇ ಗುರುತಿಸಿ ಇದು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಈ ಕ್ಷಿಪಣಿ ನಿರೋಧಕ ವ್ಯವಸ್ಥೆ ಭಾರತದ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದರೆ ಎಂದು ನಿರೀಕ್ಷಿಸಲಾಗಿದೆ. ಲಡಾಖ್ ವಲಯದಲ್ಲಿ ಚೀನಾದೊಂದಿಗೆ ಸಂಘರ್ಷ ಪರಿಸ್ಥಿತಿ ನೆಲೆಗೊಂಡಿರುವ ಸಮಯದಲ್ಲಿಯೇ ಭಾರತೀಯ ವಾಯುಪಡೆಯು ಮೊದಲ ಎಸ್​-400 ವ್ಯವಸ್ಥೆಯನ್ನು ಅಳವಡಿಸಲು ಮುಂದಾಗಿದೆ.
ಚೀನಾ ಎಸ್​-400 ತುಕಡಿಗಳನ್ನು ಲಡಾಖ್ ಸುತ್ತುವರಿಯುವ ಟಿಬೆಟ್ ಮತ್ತು ಅರುಣಾಚಲ ಪ್ರದೇಶದ ಗಡಿಯಲ್ಲಿ ನೆಲೆಗೊಳಿಸಿದೆ. ರಷ್ಯಾದಿಂದ ಖರೀದಿಸಿರುವ ವಾಯುದಾಳಿ ನಿರೋಧಕ ವ್ಯವಸ್ಥೆಯು ಈಗಾಗಲೇ ಭಾರತ ತಲುಪಿದೆ. ಈ ಘಟಕಗಳನ್ನು ಮೊದಲು ಪಶ್ಚಿಮ ವಲಯದಲ್ಲಿ ಸ್ಥಾಪಿಸಲು ರಕ್ಷಣಾ ಇಲಾಖೆ ಉದ್ದೇಶಿಸಿದೆ. ಚೀನಾ ಮತ್ತು ಪಾಕಿಸ್ತಾನದಿಂದ ಇರುವ ಬೆದರಿಕೆಯನ್ನು ಏಕಕಾಲಕ್ಕೆ ಎದುರಿಸಲು ಸಾಧ್ಯವಿರುವ ಆಯಕಟ್ಟಿನ ಪ್ರದೇಶದಲ್ಲಿ ಈ ಘಟಕಗಳನ್ನು ನೆಲೆಗೊಳಿಸಲು ಭಾರತ ಸರ್ಕಾರ ಉದ್ದೇಶಿಸಿದೆ ಎಂದು ಮೂಲಗಳನ್ನು ಉದ್ದೇಶಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಎಸ್-400 ವಾಯುದಾಳಿ ನಿರೋಧಕ ಖರೀದಿಗಾಗಿ ಭಾರತ ಸರ್ಕಾರವು ಸುಮಾರು ₹ 35,000 ಕೋಟಿ ಮೊತ್ತದ ಒಪ್ಪಂದವನ್ನು ರಷ್ಯಾದೊಂದಿಗೆ ಮಾಡಿಕೊಂಡಿದೆ. ಐದು ಎಸ್​-400 ತುಕಡಿಗಳನ್ನು ರೂಪಿಸಿ, ನೆಲೆಗೊಳಿಸಲು ಭಾರತ ಯೋಜನೆ ರೂಪಿಸಿದೆ.
ವಾಯು ಮತ್ತು ಸಮುದ್ರ ಮಾರ್ಗಗಳಿಂದ ಎಸ್​-400 ಘಟಕಗಳನ್ನು ಭಾರತಕ್ಕೆ ತರಲಾಗಿದೆ. ಈ ವರ್ಷದ ಅಂತ್ಯದಲ್ಲಿ ಮೊದಲ ಘಟಕವನ್ನು ಪೂರ್ಣ ಪ್ರಮಾಣದಲ್ಲಿ ಭಾರತಕ್ಕೆ ರಷ್ಯಾ ತಲುಪಿಸಲಿದೆ. ಶತ್ರುದೇಶದಿಂದ ಹಾರಿಬರುವ ವಿಮಾನಗಳು ಮತ್ತು ಕ್ರೂಸ್ ಕ್ಷಿಪಣಿಗಳನ್ನು 400 ಕಿಮೀ ದೂರದಲ್ಲಿ ಗುರುತಿಸಿ ದಾಳಿ ಮಾಡುವ ಸಾಮರ್ಥ್ಯಹೊಂದಿದೆ.
ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆಯಲ್ಲಿ ನಾಲ್ಕು ವಿಧದ ಕ್ಷಿಪಣಿಗಳಿರುತ್ತವೆ. ಶತ್ರುದೇಶಗಳ ವಿಮಾನಗಳು, ಖಂಡಾಂತರ ಕ್ಷಿಪಣಿಗಳು, ವೈಮಾನಿಕ ದಾಳಿ ಮುನ್ಸೂಚನೆ ನೀಡುವ ವಿಮಾನಗಳನ್ನು ಇವು ಹೊಡೆದುರುಳಿಸಬಲ್ಲವು. ದೂರಗಾಮಿ ಕ್ಷಿಪಣಿಗಳನ್ನು 400ಕಿಮೀ ದೂರ ಹಾಗೂ 250ಕಿಮೀ ದೂರ, ಮಧ್ಯಮ ಹಂತದ ಕ್ಷಿಪಣಿಗಳನ್ನು 120 ಕಿಮೀ ದೂರ ಮತ್ತು ಕಡಿಮೆ ಅಂತರದ ಕ್ಷಿಪಣಿಗಳನ್ನು 40 ಕಿಮೀ ದೂರದಲ್ಲಿ ಹೊಡೆದುರುಳಿಸಬಲ್ಲದು. ವೈಮಾನಿಕ ರಕ್ಷಣಾ ವ್ಯವಸ್ಥೆಯು ದಕ್ಷಿಣ ಏಷ್ಯಾದ ಆಕಾಶದಲ್ಲಿ ಭಾರತಕ್ಕೆ ಹೆಚ್ಚು ಬಲ ನೀಡುತ್ತದೆ ಏಕೆಂದರೆ ಶತ್ರು ವಿಮಾನಗಳು ಮತ್ತು ಕ್ರೂಸ್ ಕ್ಷಿಪಣಿಗಳನ್ನು 400 ಕಿಮೀ ದೂರದಿಂದಲೇ ಹೊಡೆದುರುಳಿಸಲು ಸಾಧ್ಯವಾಗುತ್ತದೆ.
ಎಸ್​-400 ಬಳಕೆಗಾಗಿ ರಷ್ಯಾದಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಮೊದಲ ತುಕಡಿಯನ್ನು ನಿಯೋಜಿಸಿದ ನಂತರ ಪೂರ್ವದ ಗಡಿಗಳಲ್ಲಿ ಹೆಚ್ಚುವರಿ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಎಎನ್​ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅಕ್ಟೋಬರ್ 2018ರಲ್ಲಿ ಭಾರತವು ಎಸ್​-400 ಕ್ಷಿಪಣಿ ವ್ಯವಸ್ಥೆಯ ಸ್ಥಾಪನೆಗೆ ₹ 5.43 ಶತಕೋಟಿ ಡಾಲರ್​ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದವಾದ ಐದು ವರ್ಷಗಳ ಒಳಗೆ ಘಟಕಗಳ ಪೂರೈಕೆ ಆಗುತ್ತದೆ ಎಂದು ರಷ್ಯಾ ತಿಳಿಸಿದೆ.
ಬಹಳ ಚೌಕಾಶಿ ಮತ್ತು ಮಾತುಕತೆಗಳಿಂದಾಗಿ, ಭಾರತವು S-400 ಬೆಲೆಯನ್ನು ಸುಮಾರು ಒಂದು ಶತಕೋಟಿ ಡಾಲರ್‌ಗಳಷ್ಟು ಇಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement