ಟಿ20 ವಿಶ್ವಕಪ್ ಗೆದ್ದ ಸಂತೋಷಕ್ಕೆ ಬೂಟ್‍ನಲ್ಲಿ ಬಿಯರ್ ಹಾಕಿಕೊಂಡು ಕುಡಿದ ಆಸ್ಟ್ರೇಲಿಯಾ ಆಟಗಾರರು..! ವೀಕ್ಷಿಸಿ

ದುಬೈ: ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಆಟಗಾರರು ಭರ್ಜರಿ ಸಂಭ್ರಮಾಚರಣೆ ಮಾಡಿದ್ದಾರೆ. ಆದರೆ ಇಬ್ಬರು ಆಸ್ಟ್ರೇಲಿಯಾ ತಂಡದ ಆಟಗಾರರು ಬೂಟ್‍ನಲ್ಲಿ ಬಿಯರ್ ಕುಡಿದು ಸಂಭ್ರಮಿಸಿದ ವಿಡಿಯೊ ಈಗ ಭಾರೀ ವೈರಲ್‌ ಆಗುತ್ತಿದೆ.
ದುಬೈನಲ್ಲಿ ನಡೆದ ಅಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ನಾಯಕ ಕೇನ್ ವಿಲಿಯಮ್ಸನ್ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದ ನಂತರ 172-4 ರನ್ನುಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಆರಂಭಿಕ ಹಿಮ್ಮೆಟ್ಟುವಿಕೆಯ ನಂತರ ಮಿಚೆಲ್ ಮಾರ್ಷ್ ಮತ್ತು ಡೇವಿಡ್ ವಾರ್ನರ್ 92 ರನ್ ಗಳ ಜೊತೆಯಾಟ ನೀಡಿತು. ನಂತರ ಮಿಚೆಲ್‌ ಮಾರ್ಷ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರು ಗೆಲುವಿನತ್ತ ಕೊಂಡೊಯ್ದರು. ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್‍ಗಳಿಂದ ಸೋಲಿಸಿ ಚೊಚ್ಚಲ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡು ಸಂಭ್ರಮಿಸಿತ್ತು. ಆಸೀಸ್ ವಿಶ್ವಕಪ್ ಟ್ರೋಫಿ ಜೊತೆಗೆ 1.6 ಮಿಲಿಯನ್ ಡಾಲರ್, ಅಂದರೆ 12 ಕೋಟಿ ರೂಪಾಯಿಗಳ ನಗದು ಬಹುಮಾನ ಕೂಡ ಗೆದ್ದರು.

ಭಾನುವಾರ ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿರುವ ಆಸ್ಟ್ರೇಲಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿ ತಡರಾತ್ರಿಯವರೆಗೂ ಸಂಭ್ರಮಾಚರಣೆ ನಡೆಯಿತು. ಈಗ ವೈರಲ್ ಆಗಿರುವ ಐಸಿಸಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ, ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ಮತ್ತು ಆಲ್ ರೌಂಡರ್ ಮಾರ್ಕಸ್ ಸ್ಟೊಯಿನಿಸ್ ತಮ್ಮ ಶೂಗಳಿಗೆ ಬಿಯರ್ ಸುರಿದು ಕುಡಿಯುವುದನ್ನು ಕಾಣಬಹುದು.
ಗೆಲುವಿನ ಬಳಿಕ ಆಸ್ಟ್ರೇಲಿಯಾ ಆಟಗಾರರಾದ ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್ ಸ್ಟೋಯಿನಸ್ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಂ ನಲ್ಲಿ ನಡೆದ ಆಟಗಾರರ ಸಂಭ್ರಮಾಚರಣೆಯಲ್ಲಿ ತಮ್ಮ ಕಾಲಿನ ಶೂ ಬಿಚ್ಚಿ ಅದಕ್ಕೆ ಬಿಯರ್ ಸುರಿದುಕೊಂಡು ಕುಡಿದಿದ್ದಾರೆ. ಮೊದಲು ವೇಡ್‌ ನಂತರ ಸ್ಟೋಯಿನಿಸ್ಶೂನಲ್ಲಿ ಬಿಯರ್‌ ಹಾಕಿಕೊಂಡು ಕುಡಿದು ಸಂಭ್ರಮಸಿದ್ದಾರೆ.

ಪ್ರಮುಖ ಸುದ್ದಿ :-   ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆಗಿನ ಭಿನ್ನಾಭಿಪ್ರಾಯದ ನಂತರ ಹೊಸ ಪಕ್ಷ ಘೋಷಿಸಿದ ಎಲೋನ್‌ ಮಸ್ಕ್‌...

ಸ್ಟೊಯಿನಿಸ್ ಸಿಪ್ ತೆಗೆದುಕೊಳ್ಳುವ ಮೊದಲು ಶೂ ಅನ್ನು ಬಿಯರ್‌ನಲ್ಲಿ ತೊಳೆದು ನಂತರ ಅದರಲ್ಲಿ ಬಿಯರ್‌ ಸುರುವಿ ನಂತರ ಕುಡಿದಿದ್ದಾರೆ.  ಹೀಗೆ ಆಸೀಸ್ ಆಟಗಾರರು ಶೂ ನಲ್ಲಿ ಬಿಯರ್ ಕುಡಿಯುತ್ತಿರುವ ವಿಡಿಯೋವನ್ನು ಐಸಿಸಿ ಪೋಸ್ಟ್ ಮಾಡಿದ್ದು, ಈಗ ಈ ವೀಡಿಯೋ ವೈರಲ್ ಆಗುತ್ತಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement