ದುಬೈನಲ್ಲಿ ನ್ಯೂಜಿಲ್ಯಾಂಡ್‌ ಮಣಿಸಿ ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ

ದುಬೈ: ಮಿಚೆಲ್ ಮಾರ್ಷ್ ಮತ್ತು ಡೇವಿಡ್ ವಾರ್ನರ್ ಅದ್ಭುತ ಬ್ಯಾಟಿಂಗ್‌ನಿಂದ ದುಬೈನಲ್ಲಿ ತಮ್ಮ ಚೊಚ್ಚಲ T20 ವಿಶ್ವಕಪ್ ಟ್ರೋಫಿ ಆಸ್ತ್ಟೇಲಿಯಾ ತನ್ನ ಮುಡಿಗೇರಿಸಿಕೊಂಡಿದೆ. ನ್ಯೂಜಿಲ್ಯಾಂಡ್‌ ನೀಡಿದ್ದ 172 ರನ್‌ಗಳ ಬೆನ್ನತ್ತಿದ ಆಸ್ಟ್ರೇಲಿಯಾ ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇಅಂತಿಮ ಪಂದ್ಯದಲ್ಲಿ ಗೆಲುವು ತನ್ನದಾಗಿಸಿಕೊಂಡು ಚಾಂಪಿಯನ್‌ ಆಗಿ ಹೊರಹೊಮ್ಮಿತು..
ಮಿಚೆಲ್ ಮಾರ್ಷ್ ಮತ್ತು ಡೇವಿಡ್ ವಾರ್ನರ್ 2ನೇ ವಿಕೆಟ್‌ಗೆ 92 ರನ್ ಸೇರಿಸಿ ಆಸ್ಟ್ರೇಲಿಯವನ್ನು ಗೆಲುವಿನ ದಡ ಸೇರಿಸಿದರು. ವಾರ್ನರ್ 53 ರನ್ ಗಳಿಸಿ ಔಟಾದರೆ, ಮಾರ್ಷ್ ಔಟಾಗದೆ ತಂಡವನ್ನು ಪ್ರಶಸ್ತಿಯ ಗೆಲುವಿನತ್ತ ಮುನ್ನಡೆಸಿದ ನಂತರ ಪೆವಿಲಿಯನ್‌ಗೆ ಮರಳಿದರು ಮತ್ತು ಅವರು 50 ಎಸೆತಗಳಲ್ಲಿ 77 ರನ್ ಗಳಿಸಿ ಅಜೇಯರಾಗಿ ಉಳಿದರು.
ಆರನ್ ಫಿಂಚ್ ಮತ್ತೊಮ್ಮೆ ಬೇಗನೆ ನಿರ್ಗಮಿಸಿದ ಕಾರಣ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಲಿಲ್ಲ. ಆಸೀಸ್ ನಾಯಕ ಫಿಂಚ್‌ ಅವರು ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಡೇರಿಲ್ ಮಿಚೆಲ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಆರಂಭಿಕ ವಿಕೆಟ್ ಬೇಗನೆ ಪತನವಾಗಿದ್ದು ಆಸ್ಟ್ರೇಲಿಯಾವನ್ನು ಧೃತಿಗೆಡಿಸಲಿಲ್ಲ. ನಂತರ ಬ್ಯಾಟ್ಸ್‌ಮನ್‌ಗಳಾದ ವಾರ್ನರ್ ಮತ್ತು ಮಾರ್ಷ್ 2ನೇ ವಿಕೆಟ್‌ಗೆ 92 ರನ್ ಸೇರಿಸಿದರು.
ಹಾಗೂ ರನ್‌ ರೇಟನ್ನು ಎಂದಿಗೂ ಕಡಿಮೆಯಾಗಲು ಬಿಡಲಿಲ್ಲ. ವಾರ್ನರ್ ಅಂತಿಮ ಪಂದ್ಯದಲ್ಲಿ 53 ರನ್ ಗಳಿಸಿದರು. 139.47 ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡಿದ ವಾರ್ನರ್ 3 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳನ್ನು ಹೊಡೆದರು.
ಮಾರ್ಷ್ ಇನ್ನೂ ಹೆಚ್ಚಿನ ಕೊಡುಗೆ ನೀಡಿದರು ಮತ್ತು ಅವರ 77 ರನ್ನುಗಳಲ್ಲಿ 4 ಸಿಕ್ಸರ್ ಹಾಗೂ 6 ಬೌಂಡರಿ ಸೇರಿದ್ದವು. ವಾರ್ನರ್ ಔಟಾದ ನಂತರವೂ 3ನೇ ಬ್ಯಾಟ್ಸ್‌ಮನ್ ಸ್ಕೋರಿಂಗ್ ದರವನ್ನು ಕಡಿಮೆ ಮಾಡಲು ಬಿಡಲಿಲ್ಲ.
ಟಿಮ್ ಸೌಥಿ ಎಸೆತದಲ್ಲಿ ಗೆಲುವಿನ ರನ್ ಗಳಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ (18 ಎಸೆತಗಳಲ್ಲಿ 28*) ಮಾರ್ಷ್‌ ಜೊತೆಯಲ್ಲಿ ಉತ್ತಮ ರನ್‌ ಪೇರಿಸಿದರು. ಇವರಿಬ್ಬರು 3ನೇ ವಿಕೆಟ್‌ಗೆ ಕೇವಲ 6.3 ಓವರ್‌ಗಳಲ್ಲಿ 66 ರನ್ ಸೇರಿಸಿದರು. ಮಾರ್ಷ್ ಪಂದ್ಯಶ್ರೇಷ್ಠರಾದರೆ ವಾರ್ನರ್‌ ಸರಣಿ ಶ್ರೇಷ್ಠರಾದರು.
ಆರಂಭದಲ್ಲಿ ಬ್ಯಾಟ್‌ ಮಾಡಿದ ನ್ಯೂಜಿಲ್ಯಾಂಡ್‌ ಮೊದಲ 10 ಓವರ್‌ಗಳಲ್ಲಿ 57 ರನ್‌ಗಳನ್ನು ಮಾತ್ರ ಗಳಿಸಿತು. ನ್ಯಾಜಿಲ್ಯಾಂಡ್‌ ನಾಯಕ ವಿಲಿಯಮ್ಸನ್ 11ನೇ ಓವರ್‌ನಿಂದ ರನ್‌ ಗತಿ ಹೆಚ್ಚಿಸುವುದರೊಂದಿಗೆ 2ನೇ ಅರ್ಧದಲ್ಲಿ ಸ್ಕೋರಿಂಗ್ ದರ ಹೆಚ್ಚಾಯಿತು. ವಿಲಿಯಮ್ಸನ್ 11 ನೇ ಓವರ್‌ನಿಂದ 19 ರನ್ ಗಳಿಸಿದರು. 13 ನೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಎರಡು ಬ್ಯಾಕ್-ಟು-ಬ್ಯಾಕ್ ಸಿಕ್ಸರ್‌ಗಳು ಪಂದ್ಯಾವಳಿಯ ಅವರು ತಮ್ಮ ಮೊದಲ ಅರ್ಧಶತಕವನ್ನು ಗಳಿಸಲು ಕಾರಣವಾಯಿತು.
ಆರಂಭಿಕ ಆಟಗಾರ ಗುಪ್ಟಿಲ್ ಔಟಾದ ನಂತರ, ವಿಲಿಯಮ್ಸನ್ 17 ಎಸೆತಗಳಲ್ಲಿ 18 ರನ್ ಗಳಿಸಿದ ಗ್ಲೆನ್ ಫಿಲಿಪ್ಸ್ ಅವರೊಂದಿಗೆ 3ನೇ ವಿಕೆಟ್‌ಗೆ 68 ರನ್ ಸೇರಿಸಿದರು.
ನ್ಯೂಜಿಲ್ಯಾಂಡ್‌ ನಾಯಕ ವಿಲಿಯಮ್ಸನ್ 48 ಎಸೆತಗಳಲ್ಲಿ 85 ರನ್ ಗಳಿಸಿ ಹೇಜಲ್‌ವುಡ್ ಎಸೆತದಲ್ಲಿ ಸ್ಟೀವನ್ ಸ್ಮಿತ್‌ಗೆ ಕ್ಯಾಚ್ ನೀಡಿ ಔಟಾದರು. ಹೇಝಲ್‌ವುಡ್‌ 4-0-16-3 ಬೌಲಿಂಗ್‌ನೊಂದಿಗೆ ನ್ಯೂಜಿಲ್ಯಾಂಡನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಟಿ 20 ವಿಶ್ವಕಪ್‌ ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ಈವರೆಗಿನ ಅತ್ಯಧಿಕ ಸ್ಕೋರ್ 172/4 ಗಳಿಸಿತ್ತು. ಆದರೆ ಆ ದಾಖಲೆ ಕೇವಲ 2 ಗಂಟೆಗಳಲ್ಲಿಯೇ ಆಸ್ಟ್ರೇಲಿಯಾ ಮುರಿಯುವ ಮೂಲಕ ಟಿ ೨೦ ವಿಶ್ವಕಪ್‌ ನಲ್ಲಿ ಇದೇ ಮೊದಲ ಬಾರಿಗೆ ಚಾಂಪಿಯನ್‌ ಆಯಿತು. ಕಳೆದ ವರ್ಷದ ಏಕದಿನದ ಪಂದ್ಯದಲ್ಲಿಯೂ ಪಂದ್ಯ ಟೈ ಆಗಿ ಹೆಚ್ಚುವರಿ ಓವರ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಸೋತು ರನ್ನರ್‌ ಅಪ್‌ ಆಗಿದ್ದು ನ್ಯೂಜಿಲ್ಯಾಂಡ್‌ ಇಲ್ಲಿಯೂ ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement