ಟಿಪ್ಪು ಸಿಂಹಾಸನ ಕಳಸ 15 ಕೋಟಿಗೆ ಹರಾಜಿಗೆ ಇಟ್ಟ ಬ್ರಿಟನ್‌ ಸರ್ಕಾರ

ಲಂಡನ್: ಬ್ರಿಟನ್ನಿನ ಡಿಜಿಟಲ್, ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಇಲಾಖೆಯು ಭಾರತದಿಂದ ಕದ್ದ ಸಿಂಹಾಸನವನ್ನು £ 1.5 ಮಿಲಿಯನ್ ಅಥವಾ 14,98,64,994 ರೂಪಾಯಿಗೆ ಹರಾಜು ಮಾಡುತ್ತಿದೆ.
ಥ್ರೋನ್‌ ಫಿನಿಯಲ್‌ (Throne finial) ಎಂದು ಕರೆಯಲ್ಪಡುವ ಸಿಂಹಾಸನದ ರಫ್ತು ನಿರ್ಬಂಧ ವಿಧಿಸಲಾಗಿದೆ. ಅಂದರೆ ಇದು ಬ್ರಿಟನ್ನಿನಿಂದ ಹೊರಹೋಗುವಂತಿಲ್ಲ.
18 ನೇ ಶತಮಾನದ ಆರಂಭದಲ್ಲಿ ಮೈಸೂರು ದೊರೆ ಟಿಪ್ಪು ಸುಲ್ತಾನನ ಸಿಂಹಾಸನಕ್ಕೆ ಸೇರಿದ ಚಿನ್ನದ ಹುಲಿ ತಲೆಯನ್ನು ಬ್ರಿಟನ್ನಿಗೆ ಕಳ್ಳತನದಲ್ಲಿ ಸಾಗಿಸಲಾಗಿತ್ತು. ಈಗ ಅದಕ್ಕೆ ಖರೀದಿದಾರರನ್ನು ಬ್ರಿಟನ್ನಿನಲ್ಲೇ ಹುಡುಕಬೇಕಿದೆ. ಯಾಕೆಂದರೆ ಅದನ್ನು ತಾತ್ಕಾಲಿಕ ರಫ್ತು ನಿಷೇಧವಿದೆ. “ಮೈಸೂರು ಹುಲಿ” ಎಂದೂ ಕರೆಯಲ್ಪಡುವ ಟಿಪ್ಪುವಿನ ಸಿಂಹಾಸನವನ್ನು ಅಲಂಕರಿಸಿದ ಎಂಟು ಚಿನ್ನದ ಹುಲಿಗಳ ತಲೆಗಳಲ್ಲಿ ಫಿನಿಯಲ್ ಕೂಡ ಒಂದಾಗಿದೆ.

ಬ್ರಿಟನ್ನಿನ ಡಿಜಿಟಲ್, ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಇಲಾಖೆಯು ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ ಇದನ್ನು ಹರಾಜು ಮಾಡಿದೆ. ಮತ್ತು £1.5 ಮಿಲಿಯನ್ (ಪೌಂಡ್‌) ನಿಗದಿ ಮಾಡಿದೆ. ಮಾಣಿಕ್ಯಗಳು, ವಜ್ರಗಳು ಮತ್ತು ಪಚ್ಚೆಗಳಿಂದ ಹೊದಿಸಲಾದ ಚಿನ್ನದ ಫಿನಿಯಲ್ ಅನ್ನು 18 ನೇ ಶತಮಾನದ ದಕ್ಷಿಣ ಭಾರತದ ಅಕ್ಕಸಾಲಿಗರ ಕೆಲಸದ ಸಂಪೂರ್ಣ ದಾಖಲೀಕರಣದ ಅಪರೂಪದ ಉದಾಹರಣೆ ಎಂದು ನಿರೂಪಿಸಲಾಗಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement