ಮಹಿಳೆ ತಬ್ಬಿಹಿಡಿದ ದೈತ್ಯಾಕಾರದ ಮೊಸಳೆ: ಆಮೇಲೇನಾಯ್ತು?.. ವೀಕ್ಷಿಸಿ

ಮೊಸಳೆ ಕಂಡರ ಎಂಥವರೂ ಹೆದರುತ್ತಾರೆ. ಆದರೆ ಇಲ್ಲಿ ಯುವತಿಯನ್ನು ಮೊಸಳೆ ಬಿಗಿಯಾಗಿ ತಬ್ಬಿಕೊಂಡಿದೆ…!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೊದಲ್ಲಿ ಕೇರ್‌ ಟೇಕರ್‌​ ಅವರು, ಡಾರ್ತ್ ಗೇಟರ್ ಎಂಬ ಹೆಸರಿನ ಮೊಸಳೆಗೆ ಸ್ವಲ್ಪವೂ ಹೆದರಿಯೇ ಇಲ್ಲ. ಈ ಮೊಸಳೆ (Alligator)ತನ್ನ ಉತ್ತಮ ಸ್ನೇಹಿತ ಎಂದು ಹೇಳಿಕೊಂಡಿದ್ದಾರೆ. ವಿಡಿಯೊದಲ್ಲಿ ಕೇರ್ ಟೇಕರ್ ಮಹಿಳೆಯನ್ನು ಮೊಸಳೆ ತಬ್ಬಿ ಹಿಡಿದಿದೆ. ಕೇರ್‌ ಟೇಕರ್‌ ಮೈಮೇಲೆ ಮಲಗಿದೆ. ನಮಗೆ ಭಯವಾಗುತ್ತದೆ. ಆದರೆ ಕೇರ್‌ ಟೇಕರ್‌ ಮೇಲೆ ಮೊಸಳೆ ಬಿದ್ದುಕೊಂಡಿರುವನದನು ನೋಡಿದರೆ ಭಯವಾಗುವುದಂತೂ ಹೌದು.

ನಾನು, ಡಾರ್ತ್ ಗೇಟರ್ ಹೆಸರಿನ ಮೊಸಳೆಯನ್ನು ತಬ್ಬಿಕೊಳ್ಳಲು ಹೋದಾಗ ಬೇಡ ಬೇಡ ಅನ್ನುತ್ತಾನೆ. ನನ್ನ ಬದಿಯಲ್ಲಿ ತೆವಳುತ್ತಾನೆ ಎಂದು ಕೇರ್ಟೇಕರ್​ ವಿಡಿಯೊ ಶೀರ್ಷಿಕೆಯಲ್ಲಿ ಹೇಳಿದ್ದಾರೆ. ಮಹಿಳೆಯನ್ನು ತಬ್ಬಿಹಿಡಿದ ಮೊಸಳೆಯ ದೃಶ್ಯ ನೋಡಿದಾಕ್ಷಣ ಭಯವಾಗುತ್ತದೆ. ಯುವತಿಯು ಧರಿಸಿದ್ದ ಉಡುಗೆಯ ಮೇಲೆ ಮೊಸಳೆ ಮೂತ್ರವಿಜರ್ಜಿಸಿ ಅದನ್ನು ನೋಡಿದ ಯುವತಿ ಮೇಲೆದ್ದುಕೊಂಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಫುಲ್ ವೈರಲ್ ಆಗಿದೆ. ನಾನಾ ರೀತಿಯ ಅಭಿಪ್ರಾಯಗಳನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

4 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement