ಭಾರತದ ಇಬ್ಬರು ಆಟಗಾರರ ಹೆಸರಿನೊಂದಿಗೆ ನ್ಯೂಜಿಲೆಂಡ್ ಕ್ರಿಕೆಟ್‌ ತಂಡದ ಪರ ಆಡುತ್ತಿರುವ ಬೆಂಗಳೂರು ಮೂಲದ ಕನ್ನಡಿಗ..!

ಬುಧವಾರ ಜೈಪುರದಲ್ಲಿ ಬುಧವಾರ ನಡೆದ ಟೀಮ್ ಇಂಡಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಕನ್ನಡಿಗ ಬೆಂಗಳೂರು ಮೂಲದ ರಚಿನ್‌ ರವಿ ಅವರು ನ್ಯೂಜಿಲೆಂಡ್ ಪರ ಆಡಿದ್ದಾರೆ..!
21 ವರ್ಷದ ಬೆಂಗಳೂರಿನ ರಚಿನ್ ರವೀಂದ್ರ ಇದೀಗ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಸದ್ಯ ನ್ಯೂಜಿಲೆಂಡ್​ನಲ್ಲಿ ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ಬೆಂಗಳೂರು ಮೂಲದ ರವಿ ಕೃಷ್ಣಮೂರ್ತಿ ಹಾಗೂ​ ​ದೀಪಾ ಕೃಷ್ಣಮೂರ್ತಿ ದಂಪತಿ ಮಗ.
ತಂದೆ ರವೀಂದ್ರ ಕೃಷ್ಣಮೂರ್ತಿ ಅವರು ಬೆಂಗಳೂರಿನಲ್ಲಿ ಸ್ಥಳೀಯ ಕ್ರಿಕೆಟ್ ಆಡಿದವರು. ಈಗ ಅವರ ಪುತ್ರ ರಚಿನ್‌ ಅವರು ತಮ್ಮ ತಂದೆಯ ಕ್ರಿಕೆಟ್‌ ಕನಸನ್ನು ನ್ಯೂಜಿಲ್ಯಾಂಡ್‌ ತಂಡವನ್ನು ಪ್ರತಿನಿಧಿಸುವ ಮೂಲಕ ನನಸು ಮಾಡುತ್ತಿದ್ದಾರೆ. ರಚಿನ್ ಅವರ ತಂದೆ ರವಿ ಅವರ ಭಾರತದ ಕ್ರಿಕೆಟ್‌ ತಂಡದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಹಾಗೂ ಕರ್ನಾಟಕದ ಕ್ರಿಕೆಟಿಗ ಜೆ. ಅರುಣ್ ಕುಮಾರ್ ಅವರ ಒಡನಾಡಿ​. ಹೀಗಾಗಿಯೇ ಬಾಲ್ಯದಿಂದಲೇ ರಚಿನ್ ಜಾವಗಲ್ ಶ್ರೀನಾಥ್ ಅವರ ಕ್ರಿಕೆಟ್ ಸಲಹೆಗಳನ್ನು ಪಡೆದು ಉತ್ತಮ ಆಟಗಾರನಾಗಿ ಮಿಂಚುತ್ತಿದ್ದಾರೆ.
1990ರಲ್ಲಿ ನ್ಯೂಜಿಲ್ಯಾಂಡ್​ಗೆ ತೆರಳಿದ್ದ ರವಿಂದ್ರ ಕೃಷ್ಣಮೂರ್ತಿ ಅವರು ಅಲ್ಲಿ ಹಟ್ ಹಾಕ್ಸ್ ಕ್ರಿಕೆಟ್ ಕ್ಲಬ್‌ ಸ್ಥಾಪಿಸಿದ್ದರು. ಇದೀಗ ಈ ಕ್ಲಬ್​ನಲ್ಲಿ ಅವರ ಮಗ ರಚಿನ್ ಕೂಡ ಆಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಕ್ಲಬ್ ಪ್ರತಿ ವರ್ಷ ಭಾರತದಲ್ಲಿ ಕ್ರಿಕೆಟ್ ಆಡುತ್ತಿದೆ..! ರಚಿನ್ ಕಳೆದ ನಾಲ್ಕು ವರ್ಷಗಳಿಂದ ಆಂಧ್ರದ ಅನಂತಪುರದ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಹಟ್ ಹಾಕ್ಸ್ ತಂಡದ ಭಾಗವಾಗಿದ್ದರು. ಅವರೊಬ್ಬ ಭರವಸೆಯ ಕ್ರಿಕೆಟಿಗ. ಯುವ ಕ್ರಿಕೆಟಿಗನಾಗಿ, ಎಡಗೈ ಬ್ಯಾಟರ್ ಮತ್ತು ಎಡಗೈ ಸ್ಪಿನ್ ಆಗಿ ಮಿಂಚುವ ಭರವಸೆ ಇದೆ ಎಂದಿದ್ದಾರೆ ಆಂಧ್ರಪ್ರದೇಶ ಕ್ರಿಕೆಟ್ ಅಕಾಡೆಮಿಯ ಕೋಚ್‌ಗಳಲ್ಲಿ ಒಬ್ಬರಾದ ಖತೀಬ್ ಸೈಯದ್ ಶಹಾಬುದ್ದೀನ್.
ರಚಿನ್‌ ಅವರ ಹೆರಿನಲ್ಲಿ ಮತ್ತೊಂದು ವಿಶೇಷತೆಯಿದೆ. ರವಿ ಕೃಷ್ಣಮೂರ್ತಿ ಮಗನಿಗೆ ರಚಿನ್ ಎಂದು ಹೆಸರಿಡಲು ಟೀಮ್ ಇಂಡಿಯಾದ ಇಬ್ಬರು ಆಟಗಾರರಾದ ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ಕಾರಣ. ಅವರಿಬ್ಬರ ಕಟ್ಟಾ ಅಭಿಮಾನಿಯಾಗಿರುವ ರವಿ ಕೃಷ್ಣಮೂರ್ತಿಯವರು ತಮ್ಮ ಮಗನಿಗೆ ಈ ರಾಹುಲ್ ದ್ರಾವಿಡ್ ಹೆಸರಿನ “ರ” ಹಾಗೂ ಸಚಿನ್ ಹೆಸರಿನ “ಚಿನ್” ಸೇರಿಸಿ ರಚಿನ್ ಎಂದು ಹೆಸರಿಟಿದ್ದಾರೆ. ಈಗ ಅದೇ ಹುಡುಗ ನ್ಯೂಜಲ್ಯಾಂಡ್‌ ಪರವಾಗಿ ಭಾರತದ ವಿರುದ್ಧ ಆಟವಾಡುತ್ತಿದ್ದಾರೆ.
T20 ಪಂದ್ಯದಲ್ಲಿ, ರಚಿನ್ ಒಟ್ಟು 27 ಪಂದ್ಯಗಳನ್ನು (ಜೈಪುರ T20 ಹೊರತುಪಡಿಸಿ) ಆಡಿದ್ದಾರೆ, 129 ಸ್ಟ್ರೈಕ್ ರೇಟ್‌ನಲ್ಲಿ 338 ರನ್ ಗಳಿಸಿದ್ದಾರೆ ಮತ್ತು ಅವರ ಇದುವರೆಗಿನ ಅತ್ಯುತ್ತಮ ಸ್ಕೋರ್ 40. ಅವರು ಎಡಗೈ ಸ್ಪಿನ್ ಬೌಲರ್ ಕೂಡ ಆಗಿದ್ದಾರೆ. ಬೌಲಿಂಗ್‌ನಲ್ಲಿ ರವೀಂದ್ರ 21.6 ಸ್ಟ್ರೈಕ್ ರೇಟ್‌ನಲ್ಲಿ 25 ವಿಕೆಟ್ ಪಡೆದರು.
ರಚಿನ್ 2016ರ ಅಂಡರ್-19 ವಿಶ್ವಕಪ್ ಹಾಗೂ 2018ರ ಅಂಡರ್-19 ಕ್ರಿಕೆಟ್ ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು ಕಿವೀಸ್‌ಗಾಗಿ ಒಟ್ಟು 6 T20I ಗಳನ್ನು ಆಡಿದ್ದಾರೆ, ಈ ವರ್ಷದ ಆರಂಭದಲ್ಲಿ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಸರಣಿಯಲ್ಲಿ ಅವರು ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಕುಮಟಾ : ಬಾಡದಲ್ಲಿ 26 ಗಂಟೆಗಳ ನಂತರ ಮನೆಗೆ ನುಗ್ಗಿದ್ದ ಚಿರತೆ ಬಂಧಿ ; ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿದರು...

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement