ಆಂಧ್ರದಲ್ಲಿ ಭೀಕರ ಮಳೆ..:ತಿರುಪತಿ ಬಳಿ ನೋಡುತ್ತಲೇ ಕುಸಿದುಬಿದ್ದ ಬೃಹತ್‌ ಮನೆ..ರಾಂಪುರ ಬಳಿ ಜೀವ ಉಳಿಸಿಕೊಳ್ಳಲು ಬಸ್‌ ಟಾಪ್‌ ಮೇಲೆ ಕುಳಿತ ಜನ..! ವೀಕ್ಷಿಸಿ

ಭಾರೀ ಮಳೆಯಿಂದ ಉಂಟಾದ ಪ್ರವಾಹದ ಪರಿಣಾಮ ಆಂಧ್ರಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಶುಕ್ರವಾರ, ನವೆಂಬರ್ 19 ರಂದು ಮುಂದುವರೆರಿದಿದೆ. , ಅನೇಕ ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಪ್ರಖ್ಯಾತ ಯಾತ್ರಾ ಸ್ಥಳ ತಿರುಪತಿ ಸಮೀಪದ ತಿರುಚನೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಎರಡು ಅಂತಸ್ತಿನ ಕಟ್ಟಡ ಕುಸಿದು ಬೀಳುವ ಆಘಾತಕಾರಿ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ.
ವಸುಂಧರಾ ನಗರದಲ್ಲಿ ಶುಕ್ರವಾರ ಬೆಳಗ್ಗೆ ಕಟ್ಟಡ ಕುಸಿದಿದೆ ಎಂದು ತಿರುಚಾನೂರು ಪೊಲೀಸರು ತಿಳಿಸಿದ್ದಾರೆ. ಕಡಪ ಜಿಲ್ಲೆಯ ರಾಜಂಪೇಟೆಯಲ್ಲಿ, ರಾಮಪುರಂ ಬಳಿ ಎರಡು ಬಸ್‌ಗಳು ಸಿಲುಕಿಕೊಂಡಿದ್ದು, 20 ಕ್ಕೂ ಹೆಚ್ಚು ಪ್ರಯಾಣಿಕರು ಬಸ್‌ನ ಮೇಲೆ ಸಿಲುಕಿಕೊಂಡಿದ್ದರು, ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಅವರನ್ನು ರಕ್ಷಿಸಿದ್ದಾರೆ.

ಕಡಪ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಮತ್ತು ಇನ್ನೂ ಕೆಲವರು ಕೊಚ್ಚಿಹೋಗಿದ್ದಾರೆ. ಅಣ್ಣಮಯ್ಯ ಯೋಜನೆಯ ಬಂಡ್‌ ಚೆಯ್ಯೆರು ನದಿಯಲ್ಲಿ ಹಠಾತ್ ಪ್ರವಾಹಕ್ಕೆ ಕಾರಣವಾಯಿತು, ಅದು ಹರಿಯವ ಮಾರ್ಗದಲ್ಲಿರುವ ಕೆಲವು ಹಳ್ಳಿಗಳು ಜಲಾವೃತಗೊಂಡಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಾರ್ತಿಕ ಪೌರ್ಣಮಿಯಂದು ಶಿವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಭಕ್ತರ ಗುಂಪೊಂದು ಏಕಾಏಕಿ ಪ್ರವಾಹಕ್ಕೆ ಸಿಲುಕಿ ರಾಜಂಪೇಟೆ ಪ್ರದೇಶದಲ್ಲಿ ಕೊಚ್ಚಿ ಹೋಗಿದೆ. ಬಳಿಕ ನಂದಲೂರು ಬಳಿ ಮೂರು ಮೃತದೇಹಗಳು ಪತ್ತೆಯಾಗಿದ್ದು, ಉಳಿದವರ ಪತ್ತೆಗೆ ಪ್ರಯತ್ನ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

ರಾಯಲಸೀಮೆಯ ಚಿತ್ತೂರು ಮತ್ತು ಕಡಪಾ ಜಿಲ್ಲೆಗಳು ಭೀಕರವಾದ ಪ್ರವಾಹಕ್ಕೆ ಸಾಕ್ಷಿಯಾಗಿದ್ದು, ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ನೆಲ್ಲೂರು ಜಿಲ್ಲೆ ಕೂಡ ಭಾರೀ ಮಳೆಗೆ ತತ್ತರಿಸಿದೆ. ಸೋಮಶಿಲಾ ಅಣೆಕಟ್ಟಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹದ ನೀರು ಬಿಡುವ ಮುನ್ನ ಮುನ್ನೆಚ್ಚರಿಕೆ ವಹಿಸುವಂತೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

NDRF ಮತ್ತು SDRF ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕ್ರಮ ಕೈಗೊಂಡಿವೆ. ತಿರುಪತಿ ವಿಭಾಗದಲ್ಲಿ, ತಿರುಪತಿ ನಗರ ಮತ್ತು ಗ್ರಾಮಾಂತರ, ಪಿಚ್ಚತೂರು, ಶ್ರೀಕಾಳಹಸ್ತಿ, ರೇಣಿಗುಂಟಾ, ಚಂದ್ರಗಿರಿ, ಪುಲಿಚೆರ್ಲಾ ಮತ್ತು ಕೆವಿಬಿ ಪುರಂ ಮಂಡಲಗಳಲ್ಲಿ 4,489 ಜನರಿಗೆ ಪರಿಹಾರ ಒದಗಿಸಲು 41 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಸಾವಿನ ನಿಖರ ಸಂಖ್ಯೆ ಇನ್ನೂ ತಿಳಿದಿಲ್ಲ, ನಗರದ ಅಬ್ಬಣ್ಣ ಕಾಲೋನಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಒಬ್ಬರು ಮೃತಪಟ್ಟಿದ್ದಾರೆ ಎಂದು ತಿರುಪತಿ ನಗರ ಪೊಲೀಸರು ತಿಳಿಸಿದ್ದಾರೆ. ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ ಕುಟುಂಬಗಳಿಗೆ ತಲಾ 2000 ರೂಪಾಯಿ ಹಾಗೂ ಪ್ರಾಣ ಕಳೆದುಕೊಂಡವರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಜಗನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆಂಧ್ರಪ್ರದೇಶ ಸರ್ಕಾರವು ಮೂರು ಮಳೆ ಪೀಡಿತ ಜಿಲ್ಲೆಗಳಾದ ಕಡಪ, ಚಿತ್ತೂರು ಮತ್ತು ನೆಲ್ಲೂರುಗಳಿಗೆ ವಿಶೇಷ ಅಧಿಕಾರಿಗಳನ್ನು ನೇಮಿಸಿದೆ. ನವೆಂಬರ್ 19 ರಂದು ಮೂರು ಸಂತ್ರಸ್ತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು, ಕೆಲವು ಸ್ಥಳಗಳಲ್ಲಿ ಕೆರೆಗಳು ಒತ್ತುವರಿಯಾಗಿ ಪ್ರವಾಹಕ್ಕೆ ಕಾರಣವಾಗಿವೆ ಎಂದು ಹೇಳಿದರು. ತಿರುಪತಿಯಲ್ಲಿ ನಗರಸಭೆ ಹೊರತುಪಡಿಸಿ ಇತರೆ ಇಲಾಖೆಗಳ ಸಿಬ್ಬಂದಿಯನ್ನು ನೇಮಿಸಿ, ಅಗತ್ಯಬಿದ್ದರೆ ಅಕ್ಕಪಕ್ಕದ ಪುರಸಭೆಗಳ ಸಿಬ್ಬಂದಿಯನ್ನು ಕರೆತರುವ ಮೂಲಕ ನೈರ್ಮಲ್ಯ ಕಾಮಗಾರಿಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಜಗನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ