ದೋಣಿ ಆಗಸದಲ್ಲಿ ತೇಲುತ್ತಿದೆಯೋ…? ನದಿಯಲ್ಲಿ ತೇಲುತ್ತಿದೆಯೋ…ಈ ಫೋಟೊಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿಯೋ ಅಚ್ಚರಿ..!

ನವದೆಹಲಿ: ಭಾರತದಲ್ಲಿ ಹೆಚ್ಚಿನ ನದಿಗಳು ಮಲೀನಗೊಳ್ಳುತ್ತಿವೆ. ಯಮುನಾ ನದಿಯಂತೂ ವಿಷವನ್ನೇ ತುಂಬಿಕೊಂಡು ಈಗ ನೊರೆ ಕಾರಲು ಆರಂಭಿಸಿದೆ.
ಇತ್ತೀಚಿಗೆ ಯಮುನಾ ನದಿ ಮಲಿನಗೊಂಡು, ಅದರ ಮೇಲೆ ವಿಷಕಾರಿ ನೊರೆ ತೇಲುತ್ತಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಇದರ ಬೆನ್ನಲ್ಲೇ ಈಗ ಮೇಘಾಲಯದ ಸ್ಫಟಿಕದಷ್ಟು ಶುಭ್ರವಾಗಿರುವ ನದಿಯೊಂದರ ಶುಭ್ರತೆಯ ನಿರ್ದಶಣದ ಫೋಟೊವೊಂದು ವೈರಲ್ ಆಗಿದೆ.
ಇದು ನೋಡಿದರೆ ಫೋಟೊ ಶಾಪ್‌ನಲ್ಲಿ ಕೈಚಳ ಮಾಡಿದಂತೆ ಅನಿಸುತ್ತದೆ, ಆದರೆ ಈ ನೈಜ ಚಿತ್ರವನ್ನು ಕೇಂದ್ರದ ಜಲ ಶಕ್ತಿ ಸಚಿವಾಲಯ ಟ್ವಿಟರ್ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದೆ. ಶಿಲ್ಲಾಂಗ್​ನ ಉಮ್ನ್​ಗೋಟ್ ನದಿಯ ಚಿತ್ರವನ್ನು ಸಚಿವಾಲಯ ಶೇರ್ ಮಾಡಿದ್ದು, ಅದರಲ್ಲಿ ಸ್ಫಟಿಕದಷ್ಟು ಶುಭ್ರವಾದ ನೀರಿನ ಮೇಲೆ ದೋಣಿಯೊಂದರಲ್ಲಿ ಸ್ಥಳೀಯರು ಸಂಚರಿಸುತ್ತಿದ್ದಾರೆ. ಫೋಟದೊದಲ್ಲಿ ನದಿ ನೀರಿನ ಶುಭ್ರತೆ ಹೇಗೆ ಕಂಡುಬಂದಿದೆಯೆಂದರೆ ಆಗಸದ ಮೇಲಯೇ ದೊಣಿ ಹೋದತಂತೆ ನೋಡುಗರಿಗೆ ಭಾಸವಾಗುತ್ತದೆ. ಇದಲ್ಲದೆ ಈ ಚಿತ್ರ

ಈ ಹೋಲಿಕೆ ನೆಟ್ಟಿಗರಿಗೆ ಇಷ್ಟವಾಗಿದೆ. ಚಿತ್ರವನ್ನು ಹಂಚಿಕೊಂಡ ಸಚಿವಾಲಯವು, ‘‘ಇದು ವಿಶ್ವದಲ್ಲೇ ಅತ್ಯಂತ ಶುದ್ಧವಾದ ನದಿಗಳಲ್ಲೊಂದು. ಈ ನದಿಯು ಮೇಘಾಲಯದ ಶಿಲ್ಲಾಂಗ್​ನಿಂದ 100 ಕಿಮೀ ದೂರದಲ್ಲಿರುವ ಉಮ್ನ್​ಗೋಟ್ ಎಂಬಲ್ಲಿದೆ. ನದಿ ನೀರು ಎಷ್ಟು ಶುಭ್ರವಾಗಿದೆಯೆಂದರೆ, ಬೋಟ್ ಆಗಸದಲ್ಲಿರುವಂತೆ ಭಾಸವಾಗುತ್ತದೆ.

ಪ್ರಮುಖ ಸುದ್ದಿ :-   ರಾಜ್ ಠಾಕ್ರೆ ಸಂಕಲ್ಪ, ಉದ್ಧವರಿಂದ ದೊಡ್ಡ ಸುಳಿವು : 20 ವರ್ಷಗಳ ನಂತರ ಠಾಕ್ರೆ ಸಹೋದರರ ಪುನರ್ಮಿಲನ

ನಮ್ಮೆಲ್ಲಾ ನದಿಗಳು ಹೀಗೇ ಇರಲಿ ಎಂದು ಬಯಸುತ್ತೇವೆ. ಇಂತಹ ನದಿಯನ್ನು ಕಾಪಾಡಿಕೊಂಡಿದ್ದಕ್ಕೆ ಮೇಘಾಲಯದ ಜನರಿಗೆ ಧನ್ಯವಾದಗಳು’’ ಎಂದು ಜಲ ಸಚಿವಾಲಯವು ಟ್ವೀಟ್‌ನಲ್ಲಿ ಬರೆದಿದೆ.

 

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement