ಪುಟ್ಟ ಕಂದಮ್ಮಗೆ ತೆವಳಿಕೊಂಡು ಮುಂದೆ ಸಾಗಲು ಕಲಿಸುವ ಈ ಬುದ್ಧಿವಂತ ನಾಯಿ: ಹೃದಯ ಮುಟ್ಟುವ ವಿಡಿಯೊ ವೀಕ್ಷಿಸಿ

ಬುದ್ಧಿವಂತ ಹಾಗೂ ಹೃದಯವಂತ ನಾಯಿಯ ಅದ್ಭುತ ನಿದರ್ಶನಕ್ಕೆ ಸಾಕ್ಷಿ ಇಲ್ಲಿದೆ. ಜೊತೆಗೆ ಅದು ಪುಟ್ಟ ಮಗುವಿನ ಮೇಲೆ ತೋರುವ ಕಳಕಳಿಗೆ ನಿಮ್ಮ ಮನಮಿಡಿಯಲೇಬೇಕು, ಹಾಗಿದೆ ಈ ಪುಟ್ಟ ನಾಯಿಯ ವರ್ತನೆ.
ಇಂಥ ಅದ್ಭುತ ದೃಶ್ಯದ ವಿಡಿಯೊ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ. ಈ ವಿಡಿಯೊದಲ್ಲಿ ಶ್ವಾನವೊಂದು ಮುದ್ದು ಕಂದನಿಗೆ ಹೊರಳುತ್ತಾ ಮುಂದೆ ಸಾಗಲು ಕಲಿಸುವ ಅಪೂರ್ವ ದೃಶ್ಯವಿದೆ, ಇದನ್ನು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ (ಐಎಫ್‌ಎಸ್‌) ಅಧಿಕಾರಿ ಸುಸಾಂತ ನಂದಾ ಅವರು ತಮ್ಮ ಟ್ವಿಟ್ಟರ್‌ ಕಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೊದಲ್ಲಿ ಪುಟ್ಟ ಕಂದಮ್ಮನನ್ನು ನಾಯಿಯು ಎಷ್ಟು ಪ್ರೀತಿ ಹಾಗೂ ಕಾಳಜಿಯಿಂದ ನೋಡಿಕೊಳ್ಳುತ್ತದೆ ಎಂಬುದಕ್ಕೆ ಅತ್ಯುತ್ತಮ ನಿದರ್ಶಣದಲ್ಲಿ ಇದು ಒಂದು ಎಂದೇ ಹೇಳಬಹುದು. ಮುದ್ದು ಕಂದ ಮತ್ತು ಮುದ್ದು ಶ್ವಾನ ಇರುವ ದೃಶ್ಯದ ಮೂಲಕ ವಿಡಿಯೋ ಶುರುವಾಗುತ್ತದೆ. ಬಳಿಕ ಶ್ವಾನ ಪುಟ್ಟ ಮಗುವನ್ನು ನೋಡುತ್ತ ತಾನು ತೆವಳುತ್ತಾ ಮುಂದೆ ಸಾಗು ಆ ಕಂದನಿಗೆ ನೀನು ತಾನು ಮಾಡಿದಂತೆಯೇ ತೆವಳಿ ಮುಂದೆ ಸಾಗು ಎಂದು ಪ್ರೇರೇಪಿಸುತ್ತದೆ. ಇದನ್ನು ನೋಡಿ ಆ ಮಗು ತನ್ನ ಆಟದ ಗೆಳೆಯಾನದ ಮುದ್ದಿನ ನಾಯಿ ತೋರಿಸಿದಂತೆ ಮುಂದೆ ಸಾಗಲು ಪ್ರಯತ್ನಿಸುವುದನ್ನೂ ನೋಡಬಹುದು.

ಪುಟ್ಟ ಮಗುವಿಗೆ ಅದು ಸಾಧ್ಯವಾಗದಿದ್ದಾಗ ಮತ್ತೆ ಮಗುವಿನ ಬಳಿ ಬರುವ ನಾಯಿ ಮತ್ತೊಮ್ಮೆ ತವಳಿಕೊಂಡು ಹೇಗೆ ಮುಂದೆ ಸಾಗಬೇಕು ಎಂಬುದನ್ನು ತೋರಿಸಿಕೊಡುತ್ತದೆ. ಪ್ರಾಣಿ ಪ್ರೀತಿ ಹಾಗೂ ಕಳಕಳಿಯ ಈ ಅದ್ಭುತ ವಿಡಿಯೊ ನೆಟ್ಟಿಗರ ಅಪಾರ ಮೆಚ್ಚುಗೆ ಗಳಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ