ಭೀಕರ ಮಳೆಗೆ ನಲುಗಿದ ಆಂಧ್ರದ ರಾಯಲಸೀಮೆ; 17 ಮಂದಿ ಸಾವು, 100ಕ್ಕೂ ಅಧಿಕ ಜನರು ನಾಪತ್ತೆ

ಆಂಧ್ರ ಪ್ರದೇಶದ ರಾಯಲಸೀಮೆ ಪ್ರಾಂತ್ಯ ಮಳೆ ಆರ್ಭಟಕ್ಕೆ ನಲುಗಿದ್ದು, ಚಿತ್ತೂರು, ಕಡಪ, ಕರ್ನೂಲು, ಅನಂತಪುರ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಪ್ರಕರಣಗಳಲ್ಲಿ ಇದುವರೆಗೆ 17 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, 100 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹದಿಂದಾಗಿ ಕಡಪ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಮೂರು ಬಸ್​ಗಳು ಸಿಲುಕಿಕೊಂಡಿದ್ದು, ಇದರಿಂದಾಗಿ ಕನಿಷ್ಠ 12 ಜನರು ದುರ್ಮರಣಕ್ಕೀಡಾಗಿದ್ದಾರೆ. 18 ಜನ ನಾಪತ್ತೆಯಾಗಿದ್ದು, ಹುಡುಕಾಟ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ರಾಜಾಂಪೇಟ್ ಪ್ರದೇಶದಲ್ಲಿ ಪರಿಹಾರ ಕಾರ್ಯಾವಚರಣೆ ನಡೆಯುತ್ತಿದ್ದು, ಇದುವರೆಗೆ 12 ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಮಂದಪಲ್ಲೆ, ಅಕೆಪಡು ಹಾಗೂ ನಂದಲೂರ್ ಗ್ರಾಮದಲ್ಲಿ ಬಸ್​ಗಳು ಸಿಲುಕಿಕೊಂಡಿದ್ದವು. ಚಾಲಕರು, ನಿರ್ವಾಹಕರು ಮತ್ತು ಪ್ರಯಾಣಿಕರು ಬಸ್​ನ ಟಾಪ್ ಮೇಲೆ ಹತ್ತಿ ಜೀವ ಉಳಿಸಿಕೊಳ್ಳು ಪ್ರಯತ್ನಿಸಿದ್ದಾರೆ. ಪ್ರವಾಹಕ್ಕೆ ಕೊಚ್ಚಿಹೋದವರಲ್ಲಿ ಕೆಲವರನ್ನು ಸ್ಥಳೀಯರ ಸಹಾಯದಿಂದ ರಕ್ಷಿಸಲಾಗಿದೆ. ಅದಾಗ್ಯೂ ಮೂವತ್ತಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಚೆಯ್ಯೇರು ನದಿ ಉಕ್ಕಿ ಹರಿಯುತ್ತಿದ್ದು, ಇದರಿಂದಾಗಿ ಅಣ್ಣಮಯ್ಯ ಅಣೆಕಟ್ಟು ಭರ್ತಿಯಾಗಿ ನೀರನ್ನು ಹೊರಬಿಡಲಾಗುತ್ತಿದೆ. ಸಮೀಪದ ಗ್ರಾಮಗಳಾದ ಗುಂಡ್ಲೂರು, ಶೇಷಮಂಬಾಪುರಮ್, ಮಂದಪಲ್ಲಿ, ನಂದಲೂರ್, ರಾಜಂಪೇಟ್ ಮತ್ತು ಇತರ ಸ್ಥಳಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

ಮತ್ತೊಂದು ಘಟನೆಯಲ್ಲಿ ಅನಂತಪುರ ಜಿಲ್ಲೆಯ ವೆಲ್ದುರ್ತಿ ಗ್ರಾಮದಲ್ಲಿ ಚಿತ್ರಾವತಿ ನದಿಯ ಪ್ರವಾಹದಿಂದ ಸಿಲುಕಿಕೊಂಡಿದ್ದ 10 ಮಂದಿಯನ್ನು ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್​​ಗಳ ಮುಖಾಂತರ ರಕ್ಷಿಸಲಾಗಿದೆ. ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್, ಅಗ್ನಿ ಶಾಮಕ ದಳ ಸೇರಿದಂತೆ ಇತರ ಇಲಾಖೆಗಳೂ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ.
ತಿರುಪತಿಯಲ್ಲೂ ಮಳೆಯಿಂದಾಗಿ ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದು, ಘಾಟ್​ಗಳು ಬಂದ್‌ ಆಗಿವೆ. ಮಳೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು 15,000 ಯಾತ್ರಾರ್ಥಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ಉಚಿತ ಆಹಾರ ಮತ್ತು ವಸತಿ ನೀಡುತ್ತಿದೆ. ಇಂದು ಸಹ ದೇವಸ್ಥಾನವನ್ನು ದರ್ಶನಕ್ಕೆ ಬಂದ್‌ ಮಾಡಲಾಗಿದ್ದು, ನಾಳೆ ತೆರೆಯುವ ನಿರೀಕ್ಷೆ ಇದೆ.

ಪ್ರಮುಖ ಸುದ್ದಿ :-   2 ಕ್ಷೇತ್ರಗಳಲ್ಲಿ ಒಂದೇ ಪಕ್ಷದ ತಲಾ ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ;ತಾವೇ ಅಧಿಕೃತ ಅಭ್ಯರ್ಥಿಗಳೆಂದು ಹಕ್ಕು ಮಂಡನೆ...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement