ವೇದಿಕೆ ಮೇಲೆ ಪ್ಯಾಂಟ್​ ಬಿಚ್ಚಿ ಅಭಿಮಾನಿ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದ ಗಾಯಕಿ…!

ಆಘಾತಕಾರಿ ಘಟನೆಯೊಂದರಲ್ಲಿ ರಾಕ್ ಗ್ರೂಪ್ ಬ್ರಾಸ್ ಎಗೇನ್ಸ್ಟ್‌ನ ಪ್ರಮುಖ ಗಾಯಕಿ ಸೋಫಿಯಾ ಉರಿಸ್ಟಾ, ಕಾರ್ಯಕ್ರಮವೊಂದರಲ್ಲಿ ಅಭಿಮಾನಿಯ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ತೋರಿ ಸುದ್ದಿಯಲ್ಲಿದ್ದಾರೆ. ಅವರು ನಂತರ ಸಾಮಾಜಿಕ ಮಾಧ್ಯಮದ ಮೂಲಕ ಘಟನೆ ಬಗ್ಗೆ ಕ್ಷಮೆಯಾಚಿಸಿದ್ದಾರೆ.
ಕಳೆದ ವಾರ ಫ್ಲೋರಿಡಾದ ಡೇಟೋನಾದಲ್ಲಿ ನಡೆದ ರಾಕ್‌ವಿಲ್ಲೆ ಮೆಟಲ್ ಫೆಸ್ಟಿವಲ್‌ನಲ್ಲಿ ವೇದಿಕೆಯ ಮೇಲೆ ಮಲಗಿದ್ದ ಅಭಿಮಾನಿಯ ಮೇಲೆ ಉರಿಸ್ಟಾ ತನ್ನ ಪ್ಯಾಂಟ್ ಕೆಳಕ್ಕೆ ಎಳೆದುಕೊಂಡು ಮೂತ್ರ ವಿಸರ್ಜಿಸುತ್ತಿರುವ ವೀಡಿಯೊ ವೈರಲ್ ಆಗಿದೆ. ಕಳೆದವಾರ ಫ್ಲೋರಿಡಾದ ಡೇಟೋನಾ ಬೀಚ್​​ನಲ್ಲಿ ರಾಕ್​ವಿಲ್ಲೆ ಮೆಟಲ್​ ಉತ್ಸವ ನಡೆದಿತ್ತು. ಈ ಉತ್ಸವದಲ್ಲಿ ಬ್ರಾಸ್​ ಅಗೇನೆಸ್ಟ್​ ರಾಕ್​ ಬ್ಯಾಂಡ್​​ನ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಸೋಫಿಯಾ ಉರಿಸ್ಟಾ ಗಾಯನವಿತ್ತು ಮತ್ತು ಇನ್ನೂ ಹಲವು ಕಲಾವಿದರು ಸಂಗೀತ ಸಾಧನಗಳನ್ನು ನುಡಿಸುತ್ತಿದ್ದರು. ಈ ಗಾಯಕಿಗೆ ಅದೇನಾಯ್ತೋ ಗೊತ್ತಿಲ್ಲ, ಗಾಯನ ಕೇಳುತ್ತಿದ್ದ ಅಭಿಮಾನಿಯೊಬ್ಬನನ್ನು ವೇದಿಕೆಗೆ ಕರೆದು ಮಲಗುವಂತೆ ಹೇಳಿದ್ದಾಳೆ.. ನಂತರ ತನ್ನ ಪ್ಯಾಂಟ್​ ಬಿಚ್ಚಿ, ಆ ಅಭಿಮಾನಿಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದಳು. ಇದನ್ನೆಲ್ಲ ಹಾಡು ಹೇಳುತ್ತಲೇ ಮಾಡಿದ್ದಾಳೆ ಈ ಗಾಯಕಿ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಈ ವರ್ತೆನೆಗೆ ತೀವ್ರ ಆಕ್ತರೋಶ ವ್ಯಕ್ತವಾಗುತ್ತಿದೆ.
ತನ್ನ ವಿರುದ್ಧ ಆಕ್ರೋಶ ಹೆಚ್ಚುತ್ತಿರುವ ಬೆನ್ನಲ್ಲೇ ಸೋಫಿಯಾ ಉರಿಸ್ಟಾ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆ ಕೇಳಿದ್ದಾರೆ. ಟ್ವೀಟ್​ ಮಾಡಿರುವ ಅವರು, ನಾನು ಯಾವುದೇ ಸಂಗೀತ ಕಾರ್ಯಕ್ರಮದಲ್ಲೂ, ವೇದಿಕೆಯ ಮೇಲೆ ಮಿತಿಯಲ್ಲೇ ಇರುತ್ತಿದ್ದೆ. ಆದರೆ ಪ್ರಸ್ತುತ ಈ ಕಾರ್ಯಕ್ರಮದಲ್ಲಿ ನನ್ನ ಮಿತಿಯನ್ನು ತುಂಬ ಮೀರಿಬಿಟ್ಟಿದ್ದೇನೆ. ನಾನು ನನ್ನ ಕುಟುಂಬವನ್ನು, ನನ್ನ ಬ್ಯಾಂಡ​​ನ್ನು, ಅಭಿಮಾನಿಗಳನ್ನು ತುಂಬ ಪ್ರೀತಿಸುತ್ತೇನೆ. ನನಗೆ ಅಭಿಮಾನಿಗಳಿಗೆ ನೋವುಂಟು ಮಾಡುವ ಉದ್ದೇಶ ಇರಲಿಲ್ಲ. ಆದರೆ ಈಗ ನನಗೆ ಗೊತ್ತಿಲ್ಲದೇ ಮಾಡಿರುವ ನೋವಿಗೆ ನಾನು ಕ್ಷಮೆ ಕೇಳುತ್ತೇನೆ. ನನ್ನ ಪಾಲಿಗೆ ಸಂಗೀತಕ್ಕೇ ಮೊದಲ ಆದ್ಯತೆ. ನನಗೆ ಬೆಂಬಲ, ಪ್ರೀತಿ ಕೊಟ್ಟ ಪ್ರತಿಯೊಬ್ಬರಿಗೂ ಕೃತಜ್ಞತೆಗಳು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement