ಸಾರಾಯಿ ಪಾರ್ಟಿ ವೇಳೆ ಹಾವನ್ನು ಕಂಡು ಹುರಿದು ತಿಂದ ಸ್ನೇಹಿತರು.. ಒಬ್ಬ ಪ್ರಜ್ಞಾಹೀನನಾಗಿ ಆಸ್ಪತ್ರೆಗೆ ದಾಖಲು ..!

ಸಾರಾಯಿ ಪಾರ್ಟಿಯಲ್ಲಿ ಕುಡುಕ ಸ್ನೇಹಿತರು ಹಾವನ್ನು ಹುರಿದು ತಿಂದಿದ್ದಾರೆ. ನಂತರ ಅವರಲ್ಲಿ ಒಬ್ಬ ಗಂಟೆಗಟ್ಟಲೆ ಪ್ರಜ್ಞಾಹೀನನಾದ ಘಟನೆ ರಾಜಸ್ಥಾನದ ಧೋಲ್‌ಪುರದಲ್ಲಿ ವರದಿಯಾಗಿದೆ.
ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಮಾದಕ ವ್ಯಸನಿಗಳು ಮಾಡಿದ್ದನ್ನು ಕೇಳಿದರೆ ಯಾರೇ ಆದರೂ ಬೆಚ್ಚಿ ಬೀಳುತ್ತಾರೆ. ಮದ್ಯದ ಪಾರ್ಟಿಯಲ್ಲಿ ಕುಡಿದ ಅಮಲಿನಲ್ಲಿ ಹಾವನ್ನು ಕಂಡ ಮೂವರು ಸ್ನೇಹಿತರು ಅದನ್ನು ಹಿಡಿದು ಮೂರು ಭಾಗಗಳಾಗಿ ಕತ್ತರಿಸಿದ್ದಾರೆ. ನಂತರ ಅದನ್ನು ಹುರಿದು ತಿಂದಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ತೀರಾ ಹದಗೆಟ್ಟಿದ್ದು, 12 ಗಂಟೆಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಎಂದು ಹೇಳಲಾಗುತ್ತಿದೆ.
ಮಾಹಿತಿ ಪ್ರಕಾರ ಪಿಪ್ರಿಪುರ ಕಾಲುವೆ ಬಳಿ ಈ ಘಟನೆ ನಡೆದಿದೆ. ಮೂವರು ಅಂತರ್ ಸಿಂಗ್, ಜೋಗಿಂದರ್ ಮತ್ತು ಶಿವರಾಮ್ ಕುಳಿತು ಸಾರಾಯಿ ಪಾರ್ಟಿ ಮಾಡುತ್ತಿದ್ದರು. ಪಕ್ಕದ ಪೊದೆಯಿಂದ ಹಾವು ಹೊರಬರುವುದನ್ನು ಕಂಡ ಅವರು ಅದನ್ನು ಹಿಡಿದು ಅದರ ಬಾಯಿ ಮತ್ತು ಬಾಲವನ್ನು ಕತ್ತರಿಸಿದರು. ನಂತರ ಅದನ್ನು ಬೆಂಕಿಯಲ್ಲಿ ಹಾಕಿ ಹುರಿದು ತಿಂದರು. ಹಾವು ತಿಂದವರಲ್ಲಿ ಒಬ್ಬನ ಆರೋಗ್ಯ ಹದಗೆಟ್ಟು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ.. ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಈ ವಿಷಯ ಬೆಳಕಿಗೆ ಬಂದಿದೆ. 12 ಗಂಟೆಗಳ ನಂತರ ಆ ವ್ಯಕ್ತಿಗೆ ಮತ್ತೆ ಪ್ರಜ್ಞೆ ಬಂತು.
ಪ್ರಜ್ಞೆ ಮರಳಿದ ನಂತರ, ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು, ಆದರೆ ಹುರಿದ ಹಾವುಗಳನ್ನು ತಿಂದ ಬಗ್ಗೆ ಚರ್ಚೆ ಮಾತ್ರ ದೂರ ದೂರದಲ್ಲಿಯೂ ನಡೆಯುತ್ತಿವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ