ಆಘಾತಕಾರಿ…ರೈಲು ಹಾಯ್ದು ಪಬ್‌ಜೀ ಆಡುತ್ತ ಮೈಮರತಿದ್ದ ಇಬ್ಬರು ಹುಡುಗರು ಸಾವು

ಮಥುರಾ:  ಆಘಾತಕಾರಿ ಘಟನೆಯಲ್ಲಿ ಜನಪ್ರಿಯ ಆನ್‌ಲೈನ್ ಗೇಮ್‌ ಆಗಿರುವ ಪಬ್‌ಜೀ (PUBG) ಆಡುತ್ತಿದ್ದ ಇಬ್ಬರು ಬಾಲಕರು ಮಥುರಾ-ಕಾಸ್‌ಗಂಜ್ ಟ್ರ್ಯಾಕ್‌ನಲ್ಲಿ ಗೂಡ್ಸ್ ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ಲಕ್ಷ್ಮಿನಗರ ಪ್ರದೇಶದಲ್ಲಿ ನಡೆದಿದೆ.
ಅಪಘಾತ ಸಂಭವಿಸಿದಾಗ ಬಾಲಕರು ನಡೆದುಕೊಂಡು ಹೋಗುತ್ತಿದ್ದರು. ಜಮುನಾಪರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಶಶಿ ಪ್ರಕಾಶ್ ಸಿಂಗ್ ಪ್ರಕಾರ, “ಅಪಘಾತ ಸಂಭವಿಸಿದಾಗ ಯಾವ ರೈಲು ಹಾದುಹೋಗಿತ್ತು ಎಂಬುದು ನಿಖರವಾಗಿ ತಿಳಿದಿಲ್ಲ.
ಇತ್ತೀಚಿನ ದಿನಗಳಲ್ಲಿ ಪಬ್‌ ಜಿ (PUBG) ಗೀಳು ಹೆಚ್ಚುತ್ತಿದೆ. ಪಬ್‌ ಜಿ ಆಡುತ್ತಾ ಕುಳಿತರೆ ಅವರಿಗೆ ತಮ್ಮ ಸುತ್ತಮುತ್ತಲೂ ಏನು ನಡೆಯುತ್ತೆ ಎನ್ನುವುದೇ ಗೊತಾಗುವುದಿಲ್ಲ. ಈ ಆಘಾತಕಾರಿ ಘಟನೆಯಲ್ಲಿ ಪಬ್‌ ಜೀ ಆಡುತ್ತಾ ರೈಲು ಹಳಿಯ ಮೇಲೆ ಕುಳಿತಿದ್ದ ಇಬ್ಬರು ಬಾಲಕರ ಮೇಲೆ ರೈಲು ಹರಿದು ಇಬ್ಬರು ಮೃತಪಟ್ಟಿದ್ದಾರೆ. ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮೃತರನ್ನು ಉತ್ತರ ಪ್ರದೇಶದ ಮಥುರಾ ಲಕ್ಷ್ಮೀ ನಗರದ ನಿವಾಸಿ ಗೌರವ್‌ ಕುಮಾರ್‌ (14 ವರ್ಷ), ಕಪಿಲ್‌ ಕುಮಾರ್‌ (14 ವರ್ಷ)ಎಂದು ಗುರುತಿಸಲಾಗಿದೆ. 10ನೇ ತರಗತಿ ವಿದ್ಯಾರ್ಥಿ ಗಳಾಗಿದ್ದ ಇಬ್ಬರು ಬಾಲಕರು ಬೆಳಗ್ಗೆ ಸುಮಾರು ೫.೧೫ರ ಸುಮಾರಿಗೆ ವಾಕಿಂಗ್‌ಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟು ಬಂದಿದ್ದರು. ಇಬ್ಬರೂ ವಾಕಿಂಗ್‌ಗೆ ತೆರಳುವ ಬದಲು ನೇರವಾಗಿ ರೈಲ್ವೆ ಹಳಿಯ ಬಳಿಗೆ ಬಂದು ಅಲ್ಲಿ ಕುಳಿತು
ಇಬ್ಬರೂ ರೈಲ್ವೆ ಹಳಿಯ ಮೇಲೆ ಕುಳಿತುಕೊಂಡು ಪಬ್‌ ಆಡಲು ಶುರು ಮಾಡಿದ್ದಾರೆ. ಆ ಸಂದರ್ಭದಲ್ಲಿ ಅವರಿಗೆ ರೈಲು ಬಂದಿದ್ದೇ ಗೊತ್ತಾಗಲಿಲ್ಲ. ರೈಲು ಹಾಯ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಾಲಕರ ಸಾವಿನಿಂದ ತಂದೆ-ತಾಯಿಗಳು ಆಘಾತಕ್ಕೊಳಗಾಗಿದ್ದಾರೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ