ಭಾರತದಲ್ಲಿ 538 ದಿನಗಳಲ್ಲಿ ಅತ್ಯಂತ ಕಡಿಮೆ ಕೋವಿಡ್‌ ಪ್ರಕರಣ ದಾಖಲು, 534 ದಿನಗಳಲ್ಲಿ ಕಡಿಮೆ ಸಕ್ರಿಯ ಪ್ರಕರಣ..!

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 8,488 ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ಇದು ನಿನ್ನೆ ಪ್ರಕರಣಕ್ಕಿಂತ 19.1% ಕಡಿಮೆ. ಅಲ್ಲದೆ, ಇದು 538 ದಿನಗಳಲ್ಲಿ ಅತ್ಯಂತ ಕಡಿಮೆಯಾಗಿದೆ.
ಈ ಪ್ರಕರಣಗಳು ಸೇರಿ ರಾಷ್ಟ್ರದ ಒಟ್ಟು ಪ್ರಕರಣ 3,45,18,901ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 1,18,443 ಕುಸಿದೆ. ಇದು ಕಳೆದ 534 ದಿನಗಳಲ್ಲಿ ಕಡಿಮೆಯಾಗಿದೆ (ಒಟ್ಟು ಪ್ರಕರಣಗಳಲ್ಲಿ 1% ಕ್ಕಿಂತ ಕಡಿಮೆ, ಪ್ರಸ್ತುತ 0.34% – ಮಾರ್ಚ್ 2020 ರಿಂದ ಕಡಿಮೆ).
ಹಿಂದಿನ 24 ಗಂಟೆಗಳಲ್ಲಿ ಸೋಮವಾರ 12,510 ಚೇತರಿಸಿಕೊಂಡಿದ್ದು, ಇದೇ ಸಮಯದಲ್ಲಿ 249 ಜನರು ಮೃತಪಟ್ಟಿದ್ದಾರೆ ಹಾಗೂ ಒಟ್ಟು ಸಾವಿನ ಸಂಖ್ಯೆ 4,65,911 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
ಕೇರಳದಲ್ಲಿ 5,080 ಪ್ರಕರಣಗಳು ದಾಖಲಾಗಿದ್ದು, ತಮಿಳುನಾಡು 756 ಪ್ರಕರಣಗಳು, ಪಶ್ಚಿಮ ಬಂಗಾಳ 727 ಪ್ರಕರಣಗಳು, ಮಹಾರಾಷ್ಟ್ರ 298 ಪ್ರಕರಣಗಳು ಮತ್ತು ಕರ್ನಾಟಕ 247 ಪ್ರಕರಣಗಳೊಂದಿಗೆ ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು ರಾಜ್ಯಗಳಾಗಿವೆ. ಈ ಐದು ರಾಜ್ಯಗಳಿಂದ 83.75% ಹೊಸ ಪ್ರಕರಣಗಳು ವರದಿಯಾಗಿವೆ.
ಕೇರಳದಲ್ಲಿ (196) ಗರಿಷ್ಠ ಸಾವುನೋವುಗಳು ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ 17 ಸಾವುಗಳು ಸಂಭವಿಸಿವೆ.
ಭಾರತದ ಚೇತರಿಕೆಯ ಪ್ರಮಾಣವು ಈಗ 98.31% ರಷ್ಟಿದೆ.
ಕಳೆದ 24 ಗಂಟೆಗಳಲ್ಲಿ ಭಾರತವು ಒಟ್ಟು 32,99,337 ಡೋಸ್‌ಗಳನ್ನು ನೀಡಿದ್ದು, ಇದು ಒಟ್ಟು ಡೋಸನ್ನು 1,16,87,28,385 ಡೋಸ್‌ಗಳಿಗೆ ಒಯ್ದಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 7,83,567 ಮಾದರಿಗಳನ್ನು ಪರೀಕ್ಷಿಸಲಾಗಿದೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ