ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆ ಮೇಲೆ ಐಸಿಸ್ ಉಗ್ರರ ಕಣ್ಣು?: ತಲೆಯಿಲ್ಲದ ಶಿವನ ಪ್ರತಿಮೆ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಟ

posted in: ರಾಜ್ಯ | 0

ಕಾರವಾರ: ಪ್ರಸಿದ್ಧ ಪ್ರವಾಸಿ ತಾಣ ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಉಗ್ರರ ಕಣ್ಣು ಬಿದ್ದಿದೆಯೇ ಎಂಬ ಪ್ರಶ್ನೆ ಮೂಡುವ ಮಾಹಿತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ದೇಶದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಭಟ್ಕಳ ತಾಲೂಕಿನ ಮುರ್ಡೇಶ್ವರದ ಶಿವನ ಬೃಹತ್ ಪ್ರತಿಮೆಯನ್ನು ವಿಕೃತಗೊಳಿಸಿರುವ ಫೊಟೋ ಒಂದನ್ನು ಐಸಿಸ್ ಸಂಘಟನೆಯ ಮ್ಯಾಗಜೀನ್​ನ ಕವರ್ ಪೇಜ್ ನಲ್ಲಿ ಬಳಸಿಕೊಂಡಿದ್ದಾರೆ ಎನ್ನಲಾದ ಫೋಟೋ ಸಾಮಾಜಿ ಜಾಲತಾಣದಲ್ಲಿ ಓಡಾಡುತ್ತಿರುವುದು ಈಗ ಆತಂಕ್ಕೆ ಕಾರಣವಾಗಿದೆ.
ಐಸಿಸ್ ಮುಖವಾಣಿ ಪತ್ರಿಕೆ ಎನ್ನಲಾದ ‘the VOICE OF HIND’ ಎಂಬ ಹೆಸರಿನಲ್ಲಿ ಮುರುಡೇಶ್ವರದ ಶಿವನ ಪ್ರತಿಮೆಯ ಫೋಟೋ ಹಾಕಿದ್ದು, ಅದರ ಮೇಲೆ Its time to Break False Gods’ ಎಂದು ಬರಹವಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದು ಈ ಆತಂಕಕ್ಕೆ ಕಾರಣವಾಗಿದೆ.

ಈ ಕುರಿತು ಅಂಶುಲ್ ಸಕ್ಸೇನಾ ಎಂಬ ಹೆಸರಿನ ಫೇಸ್ ಬುಕ್ ಪೇಜಿನಿಂದ ಪೋಸ್ಟ್ ಮಾಡಲಾಗಿದ್ದು, ಅವರು ಹಂಚಿಕೊಂಡ the VOICE OF HIND ಪೋಸ್ಟ್‌ನ ಫೋಟೋದಲ್ಲಿ ಶಿವನ ಪ್ರತಿಮೆಯನ್ನು ಅರ್ಧಕ್ಕೆ ಕತ್ತರಿಸಿ, ಅದರ ತುತ್ತ ತುದಿಗೆ ಐಸಿಸ್ ರೀತಿಯ ಧ್ವಜ ಹಾರಾಡುವಂತೆ ಚಿತ್ರಿಸಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಈ ಕೂಡಲೇ ಸುರಕ್ಷಾ ಕ್ರಮ ಕೈಗೊಳ್ಳಬೇಕು ಎಂದು ಅಂಶುಲ್ ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಿದ್ದಾರೆ.

ಇದನ್ನು ಕಿಡಿಗೇಡಿಗಳು ಮಾಡಿದ್ದೋ ಅಥವಾ ನಿಜವಾಘಿ ಬೆದರಿಕೆ ಇದೆಯೋ ಎಂಬುದು ಸ್ಷಟವಾಗಬೇಖಿದೆ. ಯಾಕೆಂದರೆ ಕರ್ನಾಟಕದ ಕರಾವಳಿಗೆ ಭಯೋತ್ಪಾದಕರ ದಾಳಿ ಅಪಾಯವಿದೆ ಎಂಬ ಬಗ್ಗೆ ಕೆಲ ತಿಂಗಳ ಹಿಂದೆ ಗುಪ್ತಚರ ಸಂಸ್ಥೆ ಮಾಹಿತಿ ನೀಡಿತ್ತು ಎಂಬುದು ಗಮನಾರ್ಹ

ಸದ್ಯ ಈ ಫೋಟೋ ಮತ್ತು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಿ ಇಲಾಖೆ ಕ್ರಮ ಕೈಗೊಳ್ಳಬೇಕು. ಸರ್ಕಾರ ಮುನ್ನೆಚ್ಚರಿಕೆ ವಹಿಸಿ ಇಂತಹ ದುಷ್ಕೃತ್ಯಕ್ಕೆ ಅವಕಾಶ ನೀಡಬಾರದು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ