ಬೆಂಕಿ ಹೊತ್ತಿಕೊಂಡ ಬಸ್‌: 12 ಮಕ್ಕಳು ಸೇರಿ 45 ಪ್ರವಾಸಿಗರ ಸಜೀವ ದಹನ

ಬಲ್ಗೇರಿಯಾ : ಪಶ್ಚಿಮ ಬಲ್ಗೇರಿಯಾದ ಹೆದ್ದಾರಿಯೊಂದರಲ್ಲಿ ಮಂಗಳವಾರ ಬೆಳಗಿನ ಜಾವ ಬಸ್ ಬೆಂಕಿಗೆ ಆಹುತಿಯಾಗಿ 12 ಮಕ್ಕಳು ಸೇರಿದಂತೆ ಕನಿಷ್ಠ 45 ಜನರು ಮೃತಪಟ್ಟ ಘಟನೆ ವರದಿಯಾಗಿದೆ.
ಸೋಫಿಯಾದ ಪಶ್ಚಿಮಕ್ಕೆ ಸುಮಾರು 45 ಕಿಮೀ ದೂರದಲ್ಲಿರುವ ಸ್ಟ್ರೂಮಾ ಹೆದ್ದಾರಿಯಲ್ಲಿ ಸ್ಥಳೀಯ ಸಮಯ ಸುಮಾರು 2 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ಬಲ್ಗೇರಿಯನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿದ್ದೆಯ ಮಂಪರಿನಲ್ಲಿದ್ದ ಪ್ರವಾಸಿಗರಿಗೆ ಬಸ್ ಗೆ ಬೆಂಕಿ ಆವರಿಸಿದ್ದು ಗೊತ್ತಾಗಲಿಲ್ಲ, ಬಸ್ ನಿಂದ ಏಳು ಮಂದಿ ಜಿಗಿದಿದ್ದು ಅವರನ್ನು ಸೋಫಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಬಸ್ಸಿನಲ್ಲಿದ್ದ ದೇಹಗಳು ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಸುಟ್ಟು ಹೋಗಿದೆ. ಪಘಾತದ ಕಾರಣ ಇನ್ನೂ ಗೊತ್ತಾಗಿಲ್ಲ ಆದರೆ ಬೆಂಕಿ ಹೊತ್ತಿಕೊಳ್ಳುವ ಮೊದಲು ಅಥವಾ ನಂತರ ಬಸ್ ಹೆದ್ದಾರಿ ತಡೆಗೋಡೆಗೆ ಅಪ್ಪಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟವರಲ್ಲಿ ಹೆಚ್ಚಿನವರು ಉತ್ತರ ಮೆಸಿಡೋನಿಯಾದವರು ಎಂದು ಸೋಫಿಯಾದಲ್ಲಿನ ಉತ್ತರ ಮೆಸಿಡೋನಿಯಾ ರಾಯಭಾರ ಕಚೇರಿ ಅಧಿಕಾರಿ ತಿಳಿಸಿದ್ದಾರೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement