ಶಿವನಮೂರ್ತಿ ಮೇಲೆ ಐಸಿಸ್‌ ಕರಿ ನೆರಳು:ಮುರುಡೇಶ್ವರ ದೇವಸ್ಥಾನಕ್ಕೆ ಬಿಗಿ ಭದ್ರತೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವಿಶ್ವ ಪ್ರಸಿದ್ದ ಧಾರ್ಮಿಕ ಮತ್ತು ಪ್ರವಾಸಿ ತಾಣವಾದ ಮುರ್ಡೇಶ್ವರದ ಮೇಲೆ ಐಸಿಸ್ (ISIS) ಉಗ್ರ ಸಂಘಟನೆ ಕಣ್ಣು ಬಿದ್ದಿರುವ ಶಂಕೆಯ ಮೇಲೆ ಮುರುಡೇಶ್ವರ ದೇಗುಲಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಪ್ರಸಿದ್ಧ ಮುರುಡೇಶ್ವರ ದೇವಸ್ಥಾನದ ಶಿವನ ಮೂರ್ತಿಯ ಚಿತ್ರವನ್ನು ವಿರೂಪಗೊಳಿಸಿ ಐಸಿಸ್‍ನ ಪತ್ರಿಕೆ ದಿ ವಾಯ್ಸ್ ಆಫ್‌ ಹಿಂದ್ … Continued

ಹೊನ್ನಾವರ ಬಂದರು ಅಭಿವೃದ್ಧಿಗೆ ಕರ್ನಾಟಕ ಹೈಕೋರ್ಟ್‌ ಸಮ್ಮತಿ

ಬೆಂಗಳೂರು: ದೇಶದ ಆರ್ಥಿಕತೆಗೆ ಮಾರಕವಾಗುವ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸಲಾಗದು” ಎಂದು ಬುಧವಾರ ಹೇಳೀರುವ ಹೈಕೋರ್ಟ್‌, ಹೊನ್ನಾವರ ಬಂದರು ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ ವಿಲೇವಾರಿ ಮಾಡಿದೆ. ಹೊನ್ನಾವರ ತಾಲ್ಲೂಕು ಹಸಿಮೀನು ವ್ಯಾಪರಸ್ಥರ ಸಂಘ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು … Continued

ಶಿರಸಿ ಗಾಂಜಾ ಪ್ರಕರಣ: 12 ಜನರು ಸೇವೆ ಮಾಡಿದ್ದು ವೈದ್ಯಕೀಯ ಪರೀಕ್ಷೆಯಿಂದ ದೃಢ..!

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ಪೊಲೀಸರು ಕಳೆದ ಎರಡು ದಿನದ ಹಿಂದೆ ನಗರದ ವಿವಿಧ ಭಾಗದಲ್ಲಿ ದಾಳಿ ನಡೆಸಿ 15 ಮಂದಿಯನ್ನು ವಶಕ್ಕೆ ಪಡೆದು ವೈದ್ಯಕೀಯ ವಿಜ್ಞಾನ ಪರೀಕ್ಷೆಗೆ ಒಳಪಡಿಸಿದ್ದರು. ಈಗ ಅದರ ವರದಿ ಬಂದಿದ್ದು, ಅವರಲ್ಲಿ 12 ಜನರು ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಿಂದ … Continued

ಹಿಂಜಾವೇ ಮುಖಂಡ ಜಗದೀಶ್ ಕಾರಂತ್ ದೂರು ದಾಖಲಿಸಿದ ಮಂಗಳೂರು ಜಿಲ್ಲಾಧಿಕಾರಿ

ಮಂಗಳೂರು: ಮಂಗಳೂರು: ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ್ ಅವರು ಜಿಲ್ಲಾಧಿಕಾರಿಗಳ ವಿರುದ್ಧ ಬೆದರಿಕೆ ಹಾಗೂ ಸರಕಾರಿ ಅಧಿಕಾರಿಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಬುಧವಾರ ದೂರು ದಾಖಲಿಸಿದ್ದಾರೆ. ನಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ನ.21ರಂದು ಕಾವಳಮುಡೂರು ಗ್ರಾಮದ ಕಾರಿಂಜ ರಥಬೀದಿಯಲ್ಲಿ … Continued

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಉಚಿತ ಪಡಿತರ ಯೋಜನೆ ಇನ್ನೂ 4 ತಿಂಗಳು ಮುಂದುವರಿಕೆ: ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರ

ನವದೆಹಲಿ: ಕೇಂದ್ರವು ತನ್ನ ಉಚಿತ ಪಡಿತರ ಯೋಜನೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (PMGKAY) ಅನ್ನು ಇನ್ನೂ ನಾಲ್ಕು ತಿಂಗಳ ವರೆಗೆ ಅಂದರೆ ಮಾರ್ಚ್ 2022ರ ವರೆಗೆ ವಿಸ್ತರಿಸಲು ನಿರ್ಧರಿಸಿದೆ. ಬುಧವಾರದ ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ. ತನ್ನ ಪ್ರಮುಖ ನಿರ್ಧಾರದಲ್ಲಿ, ಏಪ್ರಿಲ್ 2020 ರಿಂದ ಮೊದಲ ಕೋವಿಡ್‌-19 ಪರಿಹಾರ … Continued

ಮುಖೇಶ​ ಅಂಬಾನಿ ಹಿಂದಿಕ್ಕಿ ಏಷ್ಯಾದ ನಂಬರ್ 1 ಶ್ರೀಮಂತನಾದ ಗೌತಮ್ ಅದಾನಿ..!

ಮುಂಬೈ: ಶ್ರೀಮಂತಿಕೆಯಲ್ಲಿ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮುಖೇಶ ಅಂಬಾನಿ ಅವರನ್ನು ಇದೇ ಮೊದಲ ಬಾರಿಗೆ ಹಿಂದಿಕ್ಕಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಬುಧವಾರದಂದು ಅದಾನಿ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಗೌತಮ್‌ ಅದಾನಿ ಅವರು ಹಿಂದಿಕ್ಕಿ ಏಷ್ಯಾದ ಅತ್ಯಂತ … Continued

ಕರ್ನಾಟಕದಲ್ಲಿ ಗಗನಕ್ಕೇರಿದ ಟೊಮ್ಯಾಟೊ ಬೆಲೆ: ಹಲವೆಡೆ ಕೆಜಿಗೆ 120 ರೂ. ದಾಟಿದ ಬೆಲೆ..!

ಬೆಂಗಳೂರು: ಕರ್ನಾಟಕದ ಬಹುತೇಕ ಕಡೆಗಳಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಟೊಮ್ಯಾಟೊ ಪ್ರತಿ ಕೆ.ಜಿ.ಗೆ 100-130 ರೂ.ಗಳಿಗೆ ಏರಿಕೆಯಾಗಿದೆ. ಮಳೆ ಇನ್ನಷ್ಟು ದಿನ ಮುಂದುವರಿದರೆ ತರಕಾರಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಕರ್ನಾಟಕ, ತಮಿಳುನಾಡು ಹಾಗೂ ಆಂಧರಪ್ರದೇಶ ರಾಜ್ಯಗಳಲ್ಲಿ ಬೆಲೆ ಹೆಚ್ಚಾಗಿದೆ. ಅದರಲ್ಲಿಯೂ ಕರ್ನಾಟಕಕ್ಕೆ ಹೆಚ್ಚು ತರಕಾರಿ ಪೂರೈಕೆ … Continued

ಮಂಗಳೂರು: 8 ವರ್ಷದ ಬಾಲಕಿ ಮೇಲೆ ಸಾಮೂಹಿಕ‌ ಅತ್ಯಾಚಾರ, ಕೊಲೆ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

ಮಂಗಳೂರು: ನಗರ ಹೊರವಲಯದ ಉಳಾಯಿಬೆಟ್ಟು ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ ಜಾರ್ಖಂಡನ ಕುಟುಂಬದ ಎಂಟು ವರ್ಷದ ಬಾಲಕಿ ಮಗುವಿನ ಅತ್ಯಾಚಾರ ಮಾಡಿ ಕೊಲೆ‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಂತರ ಕೊಲೆಗೈದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಇಂದು ತಿಳಿಸಿದ್ದಾರೆ. ಪರಾರಿಯಾಗಿದ್ದ … Continued

ಹೆಚ್ ಡಿ ರೇವಣ್ಣ ಮಗ ಡಾ. ಸೂರಜ್ ಆಸ್ತಿ 65 ಕೋಟಿ ರೂ.

ಹಾಸನ: ವೃತ್ತಿಯಲ್ಲಿ ವೈದ್ಯರಾಗಿರುವ ಸೂರಜ್ ನಾಮಪತ್ರದೊಂದಿಗೆ ಅವರು ಸಲ್ಲಿಸಿರುವ ಆಸ್ತಿ ಕುರಿತ ಅಫಿಡವಿಟ್ ಪ್ರಕಾರ ಅವರು ತಮ್ಮ 33ನೇ ವಯಸ್ಸಿಗೆ ಸುಮಾರು 65 ಕೋಟಿ ರೂ.ಗಳಿಗೂ ಹೆಚ್ಚು ಆಸ್ತಿಗೆ ಒಡೆಯರಾಗಿದ್ದಾರೆ. ಅವರ ಹೆಸರಲ್ಲಿ 3.53 ಕೋಟಿ ರೂ. ಚರಾಸ್ತಿ ಮತ್ತು ರೂ. 61.68 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಡಾ. ಸೂರಜ್ ತಮ್ಮ ತಾತ-ಅಜ್ಜಿ, ಅತ್ತೆಯಂದಿರು, … Continued

ಕರ್ನಾಟಕದಲ್ಲಿ ನವೆಂಬರ್ 30ರ ವರೆಗೂ ಮಳೆ ಸಾಧ್ಯತೆ: ಸಚಿವ ಆರ್.ಅಶೋಕ್

ಹಾಸನ: ಕರ್ನಾಟಕದಲ್ಲಿ ನವೆಂಬರ್ 30ರ ವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ನೀಡಲಾಗಿದೆ ಎಂದು ರಾಜ್ಯದ ಕಂದಾಯ ಸಚಿವ ಆರ್ ಅಶೋಕ ತಿಳಿಸಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಗಿಮರೂರು ಗ್ರಾಮದಲ್ಲಿ ಬೆಳೆ ಹಾನಿ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರಿಂದ ರಾಜ್ಯದಲ್ಲಿ ನವಂಬರ್ 30ರ … Continued