19ನೇ ಮಹಡಿ ಬಾಲ್ಕನಿಯಿಂದ ಕೆಳಗೆಬಿದ್ದು ತಲೆಕೆಳಗಾಗಿ ನೇತಾಡಿದ 82 ವರ್ಷದ ಮಹಿಳೆ.. ಮುಂದೇನಾಯ್ತು ನೋಡಿ

ಪೂರ್ವ ಚೀನಾದಲ್ಲಿ ಕಟ್ಟಡದಲ್ಲಿ ಕ್ಯಾಮರಾದಲ್ಲಿ ಸೆರೆಹಿಡಿದ ದೃಶ್ಯದಲ್ಲಿ, ಕಟ್ಟಡದ 19 ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದ ನಂತರ 82 ವರ್ಷದ ಮಹಿಳೆ ಬಟ್ಟೆ ತೂಗು ಹಾಕುವ ರ್ಯಾಕ್‌ ಮೇಲೆ ತಲೆಕೆಳಗಾಗಿ ತ್ರಿಶಂಕು ಸ್ಥಿತಿಯಲ್ಲಿ ನೇತಾಡುತ್ತಿರುವುದು ಕಂಡುಬಂದಿದೆ. ಸ್ವಲ್ಪ ಎಚ್ಚರ ತಪ್ಪಿಸರೂ ಕೆಳಗೆ ಬಿದ್ದು ವೃದ್ಧೆ ಸಾಯುತ್ತಿದ್ದಳು. ಅವಳು ತಲೆಕೆಳಗಾಘಿ ನೇತಾಡುತ್ತ ಜೀವ ಕೈಯಲ್ಲಿ ಹಿಡಿದುಕೊಂಡಿದ್ದಳು..
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಮಹಿಳೆಯು ದಕ್ಷಿಣ ಚೀನಾದ ಜಿಯಾಂಗ್ಸು ಪ್ರಾಂತ್ಯದ ಯಾಂಗ್‌ಝೌನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನ 19ನೇ ಮಹಡಿಯ ಬಾಲ್ಕನಿಯಲ್ಲಿ ತನ್ನ ಬಟ್ಟೆಗಳನ್ನು ತೂಗು ಹಾಕುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಭಯಾನಕ ವಿಡಿಯೊದಲ್ಲಿ, ಮಹಿಳೆ ಎರಡು ಕಾಲುಗಳು 18ನೇ ಮಹಡಿಯಲ್ಲಿನ ಬಾಲ್ಕನಿಯ ಬಟ್ಟೆ ರ್ಯಾಕ್‌ಗೆ ಸಿಕ್ಕಿದ್ದರಿಂದ ಅದನ್ನೇ ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಹೀಗಾಗಿ ತ್ರಿಶಂಕು ಸ್ಥಿತಿಯಲ್ಲಿ ನೇತಾಡುತ್ತಿದ್ದಳು. 19ನೇ ಮಹಡಿಯಿಂದ ಬಿದ್ದ ಆಕೆಯ ದೇಹವು 18ನೇ ಮಹಡಿ ಬಾಲ್ಕನಿ ಮತ್ತು 17 ನೇ ಮಹಡಿ ಬಾಲ್ಕನಿಯ ಮಧ್ಯೆ ತಲೆಕೆಳಗಾಗಿ ನೇತಾಡುತ್ತಿತ್ತು.

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದಾರೆ. ರಕ್ಷಣಾ ತಂಡವು 18 ನೇ ಮಹಡಿಯಿಂದ 17 ನೇ ಮಹಡಿಗೆ ಸುರಕ್ಷತಾ ಹಗ್ಗವನ್ನು ಜೋಡಿಸಿ ಅವಳನ್ನು ಅದಕ್ಕೆ ಬಂಧಿಸಿ ಸುರಕ್ಷಿತಗೊಳಿಸಿದರು. ನಂತರ 18ನೇ ಮಹಡಿಯಲ್ಲಿದ್ದ ಸಿಬ್ಬಂದಿ ವೃದ್ಧೆಯನ್ನು ಮೇಲಕ್ಕೆ ಎಳೆದರು ಮತ್ತು ಅದೇ ಸಮಯದಲ್ಲಿ 17ನೇ ಮಹಡಿಯಲ್ಲಿದ್ದವರು ಆಕೆಯನ್ನು ಮೇಲೆತ್ತಿದರು. ಆಕೆಯನ್ನು ಸುರಕ್ಷಿತವಾಗಿ ಮರಳಿ ಕರೆತರಲಾಗಿದ್ದು, ಯಾವುದೇ ಗಾಯವಾಗಿಲ್ಲ.
ವಿಡಿಯೋ ವೈರಲ್ ಆಗಿದ್ದು, ಮಹಿಳೆಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಯನ್ನು ಜನರು ಶ್ಲಾಘಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ