ಕಾರವಾರ: ತಂದೆಗೆ ಅಂತ್ಯ ಸಂಸ್ಕಾರ ನೆರವೇರಿಸಿದ ಮಗಳು..!

posted in: ರಾಜ್ಯ | 0

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ತಂದೆಯ ಚಿತೆಗೆ ಮಗಳೇ ಅಗ್ನಿ ಸ್ಪರ್ಶ ಮಾಡಿದ ವಿದ್ಯಮಾನ ವರದಿಯಾಗಿದೆ.
ಕಾರವಾರ ತಾಲೂಕಿನಲ್ಲಿ ಮಹಿಳೆಯೋರ್ವಳು ತನ್ನ ತಂದೆಗೇ ತಾನೇ ಅಂತ್ಯಕ್ರಿಯೆ ವಿಧಿವಿಧಾನ ನೆರವೇರಿಸಿ ಅಗ್ನಿಸ್ಪರ್ಶ ಮಾಡಿ ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ. ತಾಲೂಕಿನ ಮುಡಗೇರಿಯಲ್ಲಿ ಇದು ನಡೆದಿದ್ದು, . ಹಿಂದೂ ಧಾರ್ಮಿಕ ವಿಧಿ-ವಿಧಾನದಂತೆ ತಂದೆಗೆ ಅಂತ್ಯಸಂಸ್ಕಾರ ಮಾಡಿದ್ದಾರೆ.
ಹಿಂದೂ ಧರ್ಮದಲ್ಲಿ ತಂದೆ ಅಥವಾ ತಾಯಿ ಮರಣ ಹೊಂದಿದಾಗ ಗಂಡು ಮಕ್ಕಳು ಚಿತೆಗೆ ಅಗ್ನಿ ಸ್ಪರ್ಶ ಮಾಡುವುದು ನಡೆದು ಬಂದ ಸಂಪ್ರದಾಯ.  ಒಂದುವೇಳೆ ಗಂಡುಮಕ್ಕಳು ಇಲ್ಲದಿದ್ದರೆ   ದೊಡ್ಡಪ್ಪ, ಚಿಕ್ಕಪ್ಪನ ಗಂಡು ಮಕ್ಕಳು  ಅಥವಾ ಕುಟುಂದವರ ಗಂಡುಮಕ್ಕಳು ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಆದರೆ ಪ್ರತಿಭಾ ನಾಯಕ್‌ ಎಂಬ ಮಹಿಳೆ ತನ್ನ ತಂದೆಗೆ ಏಕೈಕ ಸಂತಾನವಾಗಿದ್ದು, ಹೀಗಾಗಿ ತನ್ನ ತಂದೆ ಪಾರ್ಥಿಕ ಶರೀರಕ್ಕೆ ತಾನೇ ಅಂತ್ಯಸಂಸ್ಕಾರದ ವಿಧಿ-ವಿಧಾನ ನೆರವೇರಿಸಿ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಹೊಸ ಪರಂಪರೆಗೆ ಮುನ್ನುಡಿ ಬರೆದಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ