ಕುಮಟಾ ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯಕ್ಕೆ ಬಿ ಪ್ಲಸ್ ನ್ಯಾಕ್ ಮಾನ್ಯತೆ

ಕುಮಟಾ; ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯಕ್ಕೆ ನವೆಂಬರ್ ೧೮ ಮತ್ತು ೧೯ ರಂದು ನ್ಯಾಕ್ ಸಮೀತಿ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದ್ದು, ಕಾಲೇಜು ಬಿ ಪ್ಲಸ್‌ ನ್ಯಾಕ್ ಶ್ರೇಣಿ ಉನ್ನತಿ ಪಡೆದುಕೊಂಡಿದೆ.
ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗಿನ ಚರ್ಚೆ, ಆಡಳಿತ ಮಂಡಳಿಯೊಂದಿಗಿನ ಸಭೆ, ಪೂರ್ವ ವಿದ್ಯಾರ್ಥಿಗಳೊಂದಿಗಿನ ಸಂಭಾಷಣೆ ನಡೆಸಿ ನ್ಯಾಕ್ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿತ್ತು. ಉಪನ್ಯಾಸಕರೊಂದಿಗಿನ ದಾಖಲೆ ಪರಿಶೀಲನೆ, ಬೋಧನಾ ಕೊಠಡಿಯಲ್ಲಿ ಪಾಠ-ಪ್ರವಚನದ ವೀಕ್ಷಣೆ ಇತ್ಯಾದಿ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದರು.
ಕಾಲೇಜಿನ ಉತ್ತಮ ಸೌಲಭ್ಯ, ಕಾಲೇಜಿನ ಗಾರ್ಡನ್, ಕ್ರೀಡಾಂಗಣ, ಕ್ರೀಡಾ ಸೌಲಭ್ಯಗಳು, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಕ್ರೀಡಾ ಸಾಧನೆಗಳು ಗುಣಮಟ್ಟಿದಲ್ಲಿ ಇರುವುದಕ್ಕೆ ಸಂತಸ ವ್ಯಕ್ತಪಡಿಸಿತು. ಈ ಹಿಂದಿನ ನ್ಯಾಕ್ ಸಮಿತಿಯು ಬಿ.ಶ್ರೇಣಿ ನೀಡಿದ್ದು ಆ ಸಂದರ್ಭದಲ್ಲಿ ಕಾಲೇಜಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲವು ಸೂಚನೆ ನೀಡಿತ್ತು. ಅದರಂತೆ ಕಾಲೇಜಿನಲ್ಲಿ ಸೋಲಾರ ಅಳವಡಿಕೆ, ಮಳೆಕೊಯ್ಲು, ಕಾಲೇಜಿನ ಸುತ್ತಲೂ ಗಿಡಗಳ ನೆಟ್ಟು ಮಾಡಿರುವ ಹಸಿರೀಕರಣ ಇತ್ಯಾದಿ ಪರಿಶೀಲಿಸಿ ಪ್ರಾಚಾರ್ಯ ಡಾ.ಎಸ್.ವಿ.ಶೇಣ್ವಿಯವರು ಕಾಲೇಜನ್ನು ಗುಣಮಟ್ಟದ ಉನ್ನತ್ ಶ್ರೇಣಿಗೆ ಮುನ್ನಡೆಸುತ್ತಿರುವ ಕಾರ್ಯಕ್ಕೆ ನ್ಯಾಕ್ ಸಮಿತಿಯವರು ಶ್ಲಾಘಿಸಿದರು.
ಕಾಲೇಜಿನ್ ಐಕ್ಯೂಎಸ್ ಕಾರ್ಯಾಧ್ಯಕ್ಷ ಪ್ರೊ. ಸಂತೋಷ ಶ್ಯಾನಭಾಗ್ ಮತ್ತು ಕರಿಯರ್ ಗೈಡ್ ಕಾರ್ಯಾಧ್ಯಕ್ಷರಾದ ಅರ್ಚನಾ ಭಟ್ಟ ಪ್ರಯತ್ನವನ್ನು ಶ್ಲಾಘಿಸಿ ಇನ್ನೂ ಹೆಚ್ಚಿನ ಸಾಧನೆಗೆ ಸಲಹೆ ನೀಡಿದರು.
ಕಾಲೇಜಿನ ಗ್ರಂಥಾಲಯದಲ್ಲಿ ಇರುವ ಇ-ಲೈಬ್ರರಿ, ಅಗತ್ಯ ವಿರುವ ಪುಸ್ತಕ, ಗ್ರಂಥಾಲಯದ ಶಿಸ್ತು, ಅಲ್ಲಿಯ ಉಪಯುಕ್ತ ಮಾಹಿತಿ ಪರಿಶೀಲಿಸಿ ಗ್ರಂಥ ಪಾಲಕರು ನ್ಯಾಕ್ ಸಮಿತಿಯ ಕೋ-ಆರ್ಡಿನೇಟರ್ ಆದ ಪ್ರೊ.ಶಿವಾನಂದ ಬೂಳ್ಳ ಅವರ ಪ್ರಯತ್ನವನ್ನು ಮೆಚ್ಚಿ ಗ್ರಂಥಾಲಯದ ಇನ್ನೂ ಹೆಚ್ಚಿನ ಪ್ರಯೋಜನಕ್ಕೆ ಸಲಹೆ ನೀಡಿದರು. ಅಲ್ಲದೆ ವಿದ್ಯಾರ್ಥಿಗಳು ಮಾಡಿದ ಯಕ್ಷಗಾನ ಹಾಗೂ ಭರತನಾಟ್ಯ ನೋಡಿ ನ್ಯಾಕ್‌ ಸಮಿತಿಯವರು ಸಂತೋಷಪಟ್ಟರು.
ನ್ಯಾಕ್ ಸಮಿತಿ ಆಗಮಿಸಿದಾಗ ಕೆನಾರಾ ಕಾಲೇಜು ಸಮಿತಿಯ ಅಧ್ಯಕ್ಷರಾದ ರಘು ಪಿಕಳೆ, ಕಾರ್ಯಾಧ್ಯಕ್ಷರಾದ ಡಿ.ಎಂ.ಕಾಮತ್, ಉಪಾಧ್ಯಕ್ಷರಾದ ಪುರುಷೋತ್ತಮ ಶ್ಯಾನಭಾಗ್‌, ಕಾರ್ಯದರ್ಶಿಗಳಾದ ಸುಧಾಕರ ನಾಯಕ,ಪದವಿ ಪುರ್ವ ಪ್ರಾಚಾರ್ಯರಾದ ಎನ್.ಜಿ.ಹೆಗಡೆ, ದೇಶಾದ್ಯಂತ ಇರುವ ಕಾಲೇಜಿಗೆ ಪೀಯರ್ ಸಮಿತಿ ಸದಸ್ಯರಾಗಿ ಪರಿವಿಕ್ಷಣೆ ಮಾಡಿರುವ ನಿರ್ವತ್ತ್ ಪ್ರಾಚಾರ್ಯ ಡಾ.ಜಿ.ಎಸ್.ಭಟ್ಟ, ಡಾ.ವಿ.ಎಂ.ಪೈ, ಡಾ.ಪ್ರಕಾಶ ಪಂಡಿತ ಮತ್ತಿತರರು ಉಪಸ್ಥಿತರಿದ್ದು ಕಾಲೇಜಿನ ಮುಂದಿನ ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

1 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ