ರಷ್ಯಾ ಗಣಿ ದುರಂತ : 52 ಮಂದಿ ಸಾವು

ಮಾಸ್ಕೊ: ರಷ್ಯಾದ ಕೆಮೆರೊವೊ ಪ್ರದೇಶದ ಕಲ್ಲಿದ್ದಲು ಗಯಲ್ಲಿ ಮಿಥೇನ್ ಅನಿಲ ಸ್ಫೋಟಗೊಂಡ ಪರಿಣಾಮವಾಗಿ ಕಾರ್ಮಿಕರು, ರಕ್ಷಣಾ ತಂಡದ 6 ಸಿಬ್ಬಂದಿ ಸೇರಿ ಒಟ್ಟು 52 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಕಲ್ಲಿದ್ದಲು ಗಣಿಯ 250 ಮೀಟರ್ ಮಿಥೇನ್ ಗ್ಯಾಸ್ ಸ್ಫೋಟಗೊಂಡು 52 ಮಂದಿ ಮೃತಪಟ್ಟಿದ್ದಾರೆ. ನಿಯಮ ಉಲ್ಲಂಘನೆ ಆರೋಪದ ಮೇಲೆ ಗಯ ಹಿರಿಯ ವ್ಯವಸ್ಥಾಪಕನನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ಹೇಳಿವೆ. ಗಣಿ ದುರಂತಕ್ಕೆ ರಷ್ಯಾ ಆಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ