ಸ್ನೇಹಿತನ ಪೆನ್ಸಿಲ್‌ ಕದ್ದನೆಂದು ಪೊಲೀಸ್ ಠಾಣೆಗೆ ದೂರು ಕೊಡಲು ಬಂದ ಪುಟ್ಟ ವಿದ್ಯಾರ್ಥಿಗಳು..!: ವಿಡಿಯೊ ವೀಕ್ಷಿಸಿದ್ರೆ ನಕ್ಕೇ ನಗ್ತೀರಾ

ಶಾಲೆಯಲ್ಲಿ ಗಲಾಟೆಯನ್ನು ಮಕ್ಕಳು ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದನ್ನು ನೋಡಿದ್ದೀರಾ ಅಥವಾ ಕೇಳಿದ್ದೀರಾ..? ಈಗ ಇಂತಹದ್ದೊಂದು ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರಲ್ಲೂ ನಗುವಿಗೆ ಕಾರಣವಾಗಿದೆ. ಈ ಘಟನೆ ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಪುಟ್ಟ ಬಾಲಕರೆಲ್ಲ ಪೊಲೀಸ್ ಠಾಣೆಗೆ ಬಂದು ದೂರು ಹೇಳುತ್ತಿರುವುದನ್ನು ಕಂಡು ಪೊಲೀಸರೇ ಕಕ್ಕಾಬಿಕ್ಕಿಯಾಗಿದ್ದಾರೆ. ಈ ದೃಶ್ಯದ ವಿಡಿಯೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಪೊಲೀಸರು ಪ್ರಶ್ನೆ ಕೆಳುತ್ತಿದ್ದಂತೆಯೇ ಮಕ್ಕಳು ಪಟ್ಟಪಟನೆ ಉತ್ತರ ಕೊಡುತ್ತಿದ್ದಾರೆ.
ಪುಟ್ಟ ಬಾಲಕನೊಬ್ಬ ನನ್ನ ಸ್ನೇಹಿತ ಪೆನ್ಸಿಲ್ ತೆಗೆದುಕೊಂಡವನೊಬ್ಬ ಅದನ್ನು ವಾಪಸ್ ಕೊಡಲೇ ಇಲ್ಲ! ಎಂದು ದೂರು ಹೇಳುತ್ತಿದ್ದಾನೆ.. ಈ ಸಮಸ್ಯೆಯನ್ನು ಪರಿಹರಿಸುವಂತೆ ಪೊಲೀಸರ ಬಳಿ ಕೇಳಿಕೊಳ್ಳುತ್ತಿದ್ದಾನೆ. ಈ ದೃಶ್ಯದ ವಿಡಿಯೊವನ್ನು ಆಂಧ್ರಪ್ರದೇಶದ ಪೊಲೀಸರು ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತನ್ನ ಸ್ನೇಹಿತ ಪ್ರತಿದಿನ ಗೊತ್ತಿಲ್ಲದಂತೆ ಪೆನ್ಸಿಲ್ ತೆಗೆದುಕೊಳ್ಳುತ್ತಾನೆ ಎಂಬುದು ಮೂರನೇ ಕ್ಲಾಸ್ ವಿದ್ಯಾರ್ಥಿ ಕೋಪಕ್ಕೆ ಕಾರಣವಾಗಿದೆ. ಹೀಗಾಗಿ, ನ್ಯಾಯ ಕೇಳಿ ಈ ಬಾಲಕ ನೇರವಾಗಿ ಹೋಗಿದ್ದು ಪೊಲೀಸ್ ಠಾಣೆಗೆ ಹೋಗಿದ್ದಾನೆ. ಈ ಬಾಲಕ ತನ್ನ ದೂರನ್ನೆಲ್ಲಾ ಹೇಳಿ ಒಂದು ಹಂತದಲ್ಲಿ `ಕೇಸ್ ದಾಖಲಿಸಿ ಸಾರ್’ ಎಂದು ಹೇಳುತ್ತಾನೆ…! ಇದನ್ನು ಕೇಳಿ ಪೊಲೀಸರು ಒಂದು ಕ್ಷಣ ಆಶ್ಚರ್ಯದಿಂದ ಉದ್ಗರಿಸುವುದು ಈ ವಿಡಿಯೋ ಕ್ಲಿಪ್‌ನಲ್ಲಿ ಕೇಳಿಸುತ್ತದೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪೆದಕಡುಬುರು ಪೊಲೀಸ್ ಠಾಣೆಯಲ್ಲಿ ಈ ದೃಶ್ಯ ಸೆರೆಯಾಗಿದೆ. ತಮ್ಮ ಬಳಿಗೆ ಬಂದ ಮಕ್ಕಳ ಮಾತುಗಳನ್ನು ಪೊಲೀಸ್ ಅಧಿಕಾರಿ ತಾಳ್ಮೆಯಿಂದ ಆಲಿಸುತ್ತಾರೆ. ಕೊನೆಗೆ ಮಕ್ಕಳಿಗೆ ಸಮಾಧಾನ ಹೇಳಿ ಪರಸ್ಪರ ರಾಜಿ ಮಾಡುತ್ತಾರೆ. ಜೊತೆಗೆ, ಕೈಕುಲುಕುವಂತೆಯೂ ಹೇಳುತ್ತಾರೆ. ಈ ವೇಳೆ, ಎಲ್ಲಾ ಮಕ್ಕಳು ನಗುವುದನ್ನೂ ನೋಡಬಹುದಾಗಿದೆ.

ಪ್ರಮುಖ ಸುದ್ದಿ :-   ದೆಹಲಿ ಹೈಕೋರ್ಟ್ ಮರುಮೌಲ್ಯಮಾಪನದ ಅರ್ಜಿ ತಿರಸ್ಕರಿಸಿದ ನಂತರ ಕಾಂಗ್ರೆಸ್ಸಿಗೆ 1700 ಕೋಟಿ ತೆರಿಗೆ ನೋಟಿಸ್ ನೀಡಿದ ಐಟಿ : ಮೂಲಗಳು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement