ಮನೆ ಬಾಗಿಲಿಗೆ ಬಂದ ಕರಡಿ.. ಬಾಗಿಲು ಹಾಕಿ ಹೋಗು ಎಂದ ಮಹಿಳೆ.. ಬಾಗಿಲು ಹಾಕಿದ ಕರಡಿ.. ವಿಡಿಯೊದಲ್ಲಿ ಸೆರೆ

ಅಮೆರಿಕದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಜನರಿಗೆ ಕರಡಿಗಳು ಕಾಣಸಿಗುವುದು ಹೊಸದೇನೂ ಅಲ್ಲ. ಮನೆಯ ಒಳಗೇ ಕರಡಿಗಳು ಬರುತ್ತವೆ. ಕಾರಿನ ಬಾಗಿಲು ತೆರೆದು ಜನರಿಗೆ ಭಯ ಉಂಟು ಮಾಡುತ್ತವೆ. ಇಂಥದ್ದೇ ಒಂದು ದೃಶ್ಯ ಅಮೆರಿಕದ ನ್ಯೂಜೆರ್ಸಿಯ ಕಾಡಂಚಿನ ಮನೆಯೊಂದರಲ್ಲಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಹಿಳೆಯೊಬ್ಬರು ಮನೆ ಬಾಗಿಲಿನ ಮನೆ ಮುಂದೆಯೇ ಕರಡಿ ಕಂಡಿದ್ದರು. ಆದರೆ, ಹೀಗೆ ಮನೆ ಎದುರು ಬಂದಿದ್ದ ಕರಡಿಯೊಂದಿಗೆ ಇವರು ಸ್ನೇಹ ಬೆಳೆಸಿದ್ದರು. ಬರೀ ಅಷ್ಟೇ ಅಲ್ಲ, ಕರಡಿಯೇ ಮನೆ ಬಾಗಿಲು ಹಾಕುವಂತೆಯೂ ಮಾಡಿದ್ದರು…! ಅಚ್ಚರಿಯಾದರೂ ಇದು ಸತ್ಯ.
ನ್ಯೂಜೆರ್ಸಿಯ ಸುಸಾನ್ ಕೆಹೋ ಅವರ ಮನೆಯಲ್ಲಿ ನಡೆದ ಘಟನೆ ಇದು. ಸುಸಾನ್ ಮನೆಯೊಳಗೆ ಇದ್ದಾಗ ಹೊರಗೆ ಏನೋ ಶಬ್ದವಾದಂತಾಗಿತ್ತು. ಹೀಗಾಗಿ, ಇವರು ಮನೆಯ ಎದುರಿನ ಬಾಗಿಲು ತೆರೆದು ನೋಡಿದ್ದರು. ಈ ವೇಳೆ ಇವರಿಗೆ ಕಂಡದ್ದು ಬೃಹತ್ ಗಾತ್ರದ ಕರಡಿ…! ಹೀಗೆ ಕರಡಿಯನ್ನು ಕಂಡ ತಕ್ಷಣ `ಮಿಸ್ಟರ್ ಬೇರ್’ ಎಂದೇ ಕರೆದು ಮಹಿಳೆ `ದಯವಿಟ್ಟು ಮುಂಬಾಗಿಲನ್ನು ಮುಚ್ಚುತ್ತೀರಾ’ ಎಂದು ಕೇಳಿಕೊಳ್ಳುತ್ತಾರೆ. ಈ ಕರಡಿ ಮಹಿಳೆ ಹೇಳಿದಂತೆಯೇ ಬಾಗಿಲು ಎಳೆದು ಅಲ್ಲಿಂದ ನಡೆದಿದೆ…!
ಕರಡಿಗಳು ತುಂಬಾ ಸ್ಮಾರ್ಟ್! ಈ ಕರಡಿ ನನ್ನ ಮನೆಯ ಮುಂಬಾಗಿಲನ್ನು ಹೇಗೆ ಮುಚ್ಚಬೇಕೆಂದು ಕಲಿತಿದೆ’ ಎಂದು ಸುಸಾನ್ ಅವರು ಕ್ಯಾಪ್ಶನ್ ಬರೆದು ಈ ವಿಡಿಯೊವನ್ನು ಯುಟ್ಯೂಬಿನಲ್ಲಿ ಶೇರ್‌ ಮಾಡಿದ್ದಾರೆ. ವಿಡಿಯೋ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಬಲು ಕುತೂಹಲದಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ. ಕೆಲವರು ಇದು ಸಾಕಿದ ಅಥವಾ ಮನುಷ್ಯರ ಸುಲಗೆ ಇರುವ ಕರಡಿ ಇರಬಹುದು ಎಂದು ಹೇಳಿದ್ದಾರೆ.

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement