ಕೋವಿಡ್‌ ಲಸಿಕೆ ನಿರಾಕರಿಸಿ ಮನೆ ಏರಿದ ವ್ಯಕ್ತಿ, ದೇವರು ಮೈಮೇಲೆ ಬಂದಂತೆ ವರ್ತಿಸಿದ ಮತ್ತೊಬ್ಬ

ಕೊಪ್ಪಳ:ರಾಜ್ಯದಲ್ಲಿ ಕೋವಿಡ್‌ ಲಸಿಕೆ ಪಡೆಯಲು ಜನ ನಿರಾಕರಿಸುತ್ತಿದ್ದಾರೆ. ಕೊಪ್ಪಳದಲ್ಲಿ ಅಧಿಕಾರಿಗಳು ವಿವಿಧ ರೀತಿಯ ಸವಾಲು ಎದುರಿಸುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದಗುಂಪಾದಲ್ಲಿ ಹುಚ್ಚಪ್ಪ ಛಲವಾದಿ ಎಂಬ ವ್ಯಕ್ತಿ ಲಸಿಕೆಗೆ ಹೆದರಿ ಮನೆಯ ಮೇಲೆ ಏರಿದ್ದಾರೆ…! ಮತ್ತೊಂದೆಡೆ ಕೊರೊನಾ ಲಸಿಕೆ ಹಾಕಲು ಹೋಗುತ್ತಿದ್ದಂತೆ ವ್ಯಕ್ತಿಯೊಬ್ಬ ದೇವರು ಬಂದಂತೆ ವಿಲಕ್ಷಣ ವರ್ತನೆ ತೋರಿದ್ದಾರೆ. ಇನ್ನೊಂದು ಕಡೆ ನಾನು ಸತ್ತರೆ ಸಾಯುತ್ತೀನಿ. ಆದರೆ ಲಸಿಕೆ ಮಾತ್ರ ಹಾಕಿಸಿಕೊಳ್ಳುವುದಿಲ್ಲ ಎಂದು ಅಜ್ಜಿ ಹಠ ಮಾಡಿದ್ದಾಳೆ.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದಗುಂಪಾದಲ್ಲಿ ಹುಚ್ಚಪ್ಪ ಛಲವಾದಿ ಎಂಬ ವ್ಯಕ್ತಿ ಲಸಿಕೆಗೆ ಹೆದರಿ ಮನೆಯ ಮೇಲೆ ಏರಿದ್ದಾರೆ. ಆರೋಗ್ಯ ಇಲಾಖೆಯವರು ಮನೆ ಮನೆಗೆ ಹೋಗಿ ಲಸಿಕೆ ಹಾಕುವ ಅಭಿಯಾನ ನಡೆಸುತ್ತಿದ್ದಾರೆ. ಆದರೆ ಲಸಿಕೆ ಹಾಕಿಸಿಕೊಳ್ಳಲು ಹಿಂದೆ ಸರಿಯುತ್ತಿದ್ದಾರೆ. ಲಸಿಕೆ ಪಡೆಯಲು ನಿರಾಕರಿಸಿ ಮಾಳಿಗೆ ಏರಿದ ವ್ಯಕ್ತಿಯನ್ನು ಮನವೊಲಿಸಲು ಆರೋಗ್ಯ ಇಲಾಖೆಯವರು ಸಹ ಮನೆ ಮಾಳಿಗೆ ಏರಿದ್ದಾರೆ. ನಂತರ ಸಿಬ್ಬಂದಿ ಮನವೊಲಿಕೆಯಿಂದ ಹುಚ್ಚಪ್ಪ ಲಸಿಕೆ ಹಾಕಿಸಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಖಾಪುರದಲ್ಲಿ ಮತ್ತೊಂದು ಘಟನೆ ನಡೆದಿದೆ. ಆರೋಗ್ಯ ಕೇಂದ್ರದ ಸಿಬ್ಬಂದಿ ಲಸಿಕೆ ಹಾಕಲು ಹೋದಾಗ ವ್ಯಕ್ತಿಯೊಬ್ಬರು ದೇವರು ಬಂದಂತೆ ವರ್ತಿಸಿದ್ದಾರೆ. ಲಸಿಕಾ ಸಿಬ್ಬಂದಿ ಮನೆ ಬಳಿ ಹೋಗುತ್ತಿದ್ದಂತೆ ಕುದುರೆ, ಕುದುರೆ ಬೇಕು ಎಂದು ವಿಚಿತ್ರವಾಗಿ ವರ್ತಿಸಿದ್ದಾರೆಈ ವ್ಯಕ್ತಿಗೆ ಆರೋಗ್ಯ ಇಲಾಖೆ ಲಸಿಕೆ ಹಾಕಿಸಿಕೊಳ್ಳುವಂತೆ ಎಷ್ಟೇ ಮನವೊಲಿಸಲು ಯತ್ನಿಸಿದರೂ ವಿಫಲವಾಗಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement