ದಕ್ಷಿಣ ಆಫ್ರಿಕಾ ಸೇರಿ 10 ದೇಶಗಳಲ್ಲಿ ಕೋವಿಡ್‌ ರೂಪಾಂತರ ಓಮಿಕ್ರಾನ್ ವೈರಸ್‌ ಪತ್ತೆ..!

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಮೊದಲು ಬೆಳಕಿಗೆ ಬಂದ ಕೋವಿಡ್‌ ರೂಪಾಂತರ ಓಮಿಕ್ರಾನ್ ವೈರಸ್‌ ನಿಧಾನವಾಗಿ ಬೇರೆಬೇರೆ ದೇಶಗಳಿಗೂ ವ್ಯಾಪಿಸುತ್ತಿದೆ.
ಈಗ ಅದು ಈಗ ದಕ್ಷಿಣ ಆಫ್ರಿಕಾ ಹೊರತಪಡಿಸಿ ಒಂಭತ್ತು ದೇಶಗಳಿಲ್ಲಿ ಕಂಡುಬಂದಿದೆ. ಆಸ್ಟ್ರೇಲಿಯಾ, ಬ್ರಿಟನ್‍ನಲ್ಲಿಯೂ ಹೊಸದಾಗಿ ತಲಾ ಎರಡು ಕೇಸ್ ಬೆಳಕಿಗೆ ಬಂದಿದೆ.
ಆಸ್ಟ್ರೇಲಿಯಾ, ಇಟಲಿ, ಜರ್ಮನಿ, ನೆದರ್ಲ್ಯಾಂಡ್ , ಬ್ರಿಟನ್, ಇಸ್ರೇಲ್, ಹಾಂಗ್ ಕಾಂಗ್, ಬೋಟ್ಸ್ವಾನ, ಬೆಲ್ಜಿಯಂ ಹೀಗೆ 9 ದೇಶಗಳಲ್ಲಿ ಸೋಂಕು ಪತ್ತೆಯಾಗಿದೆ. ಓಮಿಕ್ರಾನ್ ವೈರಸ್‍ಗೆ ಡೆಲ್ಟಾ ವೈರಸ್‍ಗಿಂತ ಶೇಕಡಾ 40ರಷ್ಟು ವೇಗದಲ್ಲಿ ಹಬ್ಬುವ ಶಕ್ತಿ ಇದೆ ಎನ್ನಲಾಗಿದೆ. ಹೀಗಾಗಿ ಜಗತ್ತಿನ ಬಹುತೇಕ ದೇಶಗಳು ಈಗ ಕಟ್ಟೆಚ್ಚರ ವಹಿಸಿವೆ.
ವಿಶ್ವ ಆರೋಗ್ಯ ಸಂಸ್ಥೆಯು ಓಮಿಕ್ರಾನ್ ಅನ್ನು ‘ಕಳವಳಿಕೆಯ ರೂಪಾಂತರ’ ಎಂದು ಪಟ್ಟಿ ಮಾಡಿದೆ ಮತ್ತು ಕೋವಿಡ್ ಲಸಿಕೆಗಳು, ಪರೀಕ್ಷೆಗಳು ಮತ್ತು ಚಿಕಿತ್ಸೆಗಳಿಗೆ ಹರಡುವಿಕೆ, ತೀವ್ರತೆ ಅಥವಾ ಪರಿಣಾಮಗಳಲ್ಲಿ ಗಮನಾರ್ಹ ಬದಲಾವಣೆಗಳಿವೆಯೇ ಎಂದು ತಿಳಿಯಲು ಹಲವಾರು ವಾರಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಿದೆ.
ಈಗಾಗಲೇ ಅಮೆರಿಕಾ, ರಷ್ಯಾ, ಬ್ರಿಟನ್, ಫ್ರಾನ್ಸ್, ಜಪಾನ್ ಸೇರಿ ಹಲವು ದೇಶಗಳು ದಕ್ಷಿಣ ಆಫ್ರಿಕಾ ಜೊತೆಗಿನ ವೈಮಾನಿಕ ಸಂಪರ್ಕವನ್ನು ತಾತ್ಕಾಲಿಕವಾಗಿ ರದ್ದು ಮಾಡಿವೆ. ಭಾರತ ಕೂಡ ತುರ್ತುಸಭೆ ನಡೆಸಿ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಕೋವಿಡ್ ತಜ್ಞರು ಈಗಲೂ ಹೇಳುತ್ತಿರುವುದು ಒಂದೇ ಮಾತು. ಮಾಸ್ಕ್ ಧರಿಸಿ. ಲಸಿಕೆ ಹಾಕಿಸಿಕೊಳ್ಳಿ ಎಂದು ಸಲಹೆ ನೀಡುತ್ತಿದ್ದಾರೆ.
ಈವರೆಗೆ, ಭಾರತವು ಓಮಿಕ್ರಾನ್ ರೂಪಾಂತರದ ಯಾವುದೇ ಪ್ರಕರಣವನ್ನು ವರದಿ ಮಾಡಿಲ್ಲ. ನಿನ್ನೆ, ಇಬ್ಬರು ದಕ್ಷಿಣ ಆಫ್ರಿಕಾದ ಪ್ರಜೆಗಳು ಬೆಂಗಳೂರಲ್ಲಿ ಧನಾತ್ಮಕ ಪರೀಕ್ಷೆ ನಡೆಸಿದರೂ ಅವರು ಡೆಲ್ಟಾ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಕಂಡುಬಂದಿದೆ.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement