ನ್ಯೂಜಿಲೆಂಡ್ ಸಂಸದೆ (ಎಂಪಿ) ತನ್ನ ಮಗುವಿನ ಹೆರಿಗೆಗಾಗಿ ಆಸ್ಪತ್ರೆಗೆ ಸೈಕಲ್ ನಲ್ಲಿ ಆಗಮಿಸಿ ಗಮನ ಸೆಳೆದಿದ್ದಾರೆ. ಸಂಸದೆ ಜೂಲಿ ಅನ್ನೆ ಜೆಂಟರ್ ಈ ಹಿಂದೆ ತನ್ನ ಮೊದಲ ಮಗು, ಮಗನ ಜನನದ ಸಮಯದಲ್ಲಿ ಅದೇ ರೀತಿ ಮಾಡಿದ್ದರು.
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಇತ್ತೀಚಿನ ಪೋಸ್ಟ್ನಲ್ಲಿ, ಜೆಂಟರ್ ಭಾನುವಾರ ಮುಂಜಾನೆ 3 ಗಂಟೆಗೆ ತನ್ನ ಹೆರಿಗೆ ನೋವಿನ (ಲೇಬರ್ ಪೇನ್ ) ಸಮಯದಲ್ಲಿ ಆಸ್ಪತ್ರೆಗೆ ಸೈಕ್ಲಿಂಗ್ ಮಾಡಿದ ಕಥೆಯನ್ನು ಹಂಚಿಕೊಂಡಿದ್ದಾರೆ.
ಜೆಂಟರ್ ಸುಂದರ ಸಂದೇಶದೊಂದಿಗೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇಂದು ಮುಂಜಾನೆ 3.04 ಗಂಟೆಗೆ ನಾವು ನಮ್ಮ ಕುಟುಂಬದ ಹೊಸ ಸದಸ್ಯನನ್ನು ಸ್ವಾಗತಿಸಿದೆವು. ನಾನು ನಿಜವಾಗಿಯೂ ಲೇಬರ್ ಪೇನ್ನಲ್ಲಿ ಸೈಕಲ್ ಓಡಿಸಲು ಯೋಜಿಸಿರಲಿಲ್ಲ, ಆದರೆ ಅದು ಸಂಭವಿಸಿದೆ. ನಾವು ಆಸ್ಪತ್ರೆಗೆ ಹೋಗಲು 2 ಗಂಟೆಗೆ ಹೊರಟಾಗ ನನ್ನ ಹೆರಿಗೆ ನೋವು ಅಷ್ಟು ಕೆಟ್ಟದಾಗಿರಲಿಲ್ಲ – ನಾವು 10 ನಿಮಿಷಗಳ ನಂತರ ಆಸ್ಪತ್ರೆಗೆ ಬರುವ ಹೊತ್ತಿಗೆ ಅದು ತೀವ್ರತೆ ಪಡೆದುಕೊಳ್ಳುತ್ತವೆ. ಮತ್ತು ಆಶ್ಚರ್ಯಕರವಾಗಿ ಈಗ ನಾವು ಆರೋಗ್ಯವಂತ ಮಗುವನ್ನು ಹೊಂದಿದ್ದೇವೆ, ಉತ್ತಮ ತಂಡದಿಂದ ಅತ್ಯುತ್ತಮವಾದ ಕಾಳಜಿ ಮತ್ತು ಬೆಂಬಲವನ್ನು ಪಡೆದಿದ್ದಕ್ಕಾಗಿ ಈ ಮಗು ಆಶೀರ್ವದಿಸಲ್ಪಟ್ಟಿದೆ ಎಂದು ಸಂಸದೆ ಬರೆದಿದ್ದಾರೆ.
ಜೆಂಟರ್ ಅವರ ಪೋಸ್ಟ್ ನೆಟಿಜನ್ಗಳಿಂದ ಪ್ರೀತಿ ಮತ್ತು ಶುಭ ಹಾರೈಕೆಗಳ ಮಳೆಯನ್ನೇ ಸುರಿಸಿದೆ.
ಹೆರಿಗೆ ಮಾಡಲು ಜೆಂಟರ್ ಆಸ್ಪತ್ರೆಗೆ ಸೈಕಲ್ ತುಳಿಯುತ್ತಿರುವುದು ಇದೇ ಮೊದಲಲ್ಲ. ಮೂರು ವರ್ಷಗಳ ಹಿಂದೆ, ಅವರು ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಲು ಆಕ್ಲೆಂಡ್ ಆಸ್ಪತ್ರೆಗೆ ಸೈಕಲ್ನಲ್ಲಿ ಹೋಗಿದ್ದರು.
ನ್ಯೂಜಿಲೆಂಡ್ನ ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್ ಅವರು 2018 ರಲ್ಲಿ ತಮ್ಮ ಮಗುವಿಗೆ ಇನ್ನೂ ಹಾಲುಣಿಸುತ್ತಿರುವ ಕಾರಣ ತನ್ನ ಮೂರು ತಿಂಗಳ ಮಗುವನ್ನು ವಿಶ್ವಸಂಸ್ಥೆ ಸಭೆಗೆ ಕರೆತಂದಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ