ಪರಾಗ್ ಅಗರವಾಲ್ ಟ್ವಿಟರ್ ಸಿಇಒ ಆದ ನಂತರ ಭಾರತೀಯ ಪ್ರತಿಭೆಯಿಂದ ಅಮೆರಿಕ ಹೆಚ್ಚು ಪ್ರಯೋಜನ ಪಡೆಯುತ್ತಿದೆ ಎಂದ ಎಲೋನ್ ಮಸ್ಕ್

ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟ್ಟರ್‌ ಸಹ-ಸಂಸ್ಥಾಪಕ ಜಾಕ್ ಡೋರ್ಸೆ ಸೋಮವಾರ ರಾಜೀನಾಮೆ ನೀಡಿದ ನಂತರ ಭಾರತೀಯ ಮೂಲದ ತಂತ್ರಜ್ಞಾನ ಕಾರ್ಯನಿರ್ವಾಹಕ ಪರಾಗ್ ಅಗರವಾಲ್ ಅವರನ್ನು ಟ್ವಿಟರ್‌ನ ಹೊಸ ಸಿಇಒ ಆಗಿ ನೇಮಿಸಲಾಗಿದೆ. ಈ ಪ್ರಕಟಣೆಯು ಭಾರತೀಯ ಟ್ವಿಟರ್ ಜಾಗದಲ್ಲಿ ಸಂತೋಷಕ್ಕೆ ಕಾರಣವಾಗಿದೆ.
ಈ ಬೆಳವಣಿಗೆ ಮಧ್ಯೆ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಂಸ್ಥಾಪಕ ಹಾಗೂ ಜಗತ್ತಿನ ನಂ.೧ ಶ್ರೀಮಂತ ಎಲೋನ್ ಮಸ್ಕ್ ಅವರು ತಂತ್ರಜ್ಞಾನ ಕ್ಷೇತ್ರಕ್ಕೆ ಭಾರತೀಯ ವಲಸಿಗರ ಕೊಡುಗೆ ಗುರುತಿಸಿ ಅಮೆರಿಕದಲ್ಲಿರುವ ಭಾರತೀಯ ಪ್ರತಿಭೆಗಳನ್ನು ಟ್ವೀಟ್‌ ಮೂಲಕ ಪ್ರಶಂಸೆ ಮಾಡಿದ್ದಾರೆ.
ಭಾರತೀಯ ಮೂಲದ ವ್ಯಕ್ತಿಗಳು ಈಗ ಮೈಕ್ರೋಸಾಫ್ಟ್, ಗೂಗಲ್ ಮತ್ತು ಐಬಿಎಂನಂತಹ ಉನ್ನತ ಟೆಕ್ ಕಂಪನಿಗಳ ಮುಖ್ಯಸ್ಥರಾಗಿರುವುದು ಹೇಗೆ ಎಂಬ ಟ್ವೀಟ್‌ನಲ್ಲಿ ಹೇಳಿರುವ ಮಸ್ಕ್ ಭಾರತದ ಪ್ರತಿಭೆಯಿಂದ ಅಮೆರಿಕ ಹೆಚ್ಚು ಪ್ರಯೋಜನ ಪಡೆಯುತ್ತಿದೆ ಎಂದು ಹೇಳಿದ್ದಾರೆ.

ಮೈಕ್ರೋಸಾಫ್ಟ್, ಗೂಗಲ್, ಐಬಿಎಂ, ಅಡೋಬ್‌e, ಪಾಲೊ ಅಲ್ಟೊ ನೆಟ್‌ವ ಮತ್ತು ಈಗ ಟ್ವಿಟ್ಟರ್‌ ಅನ್ನು ಭಾರತದಲ್ಲಿ ಬೆಳೆದ ಸಿಇಒಗಳು ನಡೆಸುತ್ತಿದ್ದಾರೆ. ತಂತ್ರಜ್ಞಾನ ಜಗತ್ತಿನಲ್ಲಿ ಭಾರತೀಯರ ಅದ್ಭುತ ಯಶಸ್ಸನ್ನು ನೋಡುವುದು ಅದ್ಭುತ ಮತ್ತು ವಲಸಿಗರಿಗೆ ಅಮೆರಿಕ ನೀಡುವ ಅವಕಾಶದ ಉತ್ತಮ ಜ್ಞಾಪನೆಯಾಗಿದೆ. (ಅಭಿನಂದನೆಗಳು, ಪರಾಗ್ ಅಗರವಾಲ್) ಎಂದು ಸ್ಟ್ರೈಪ್ ಸಿಇಒ ಪ್ಯಾಟ್ರಿಕ್ ಕಾಲಿಸನ್ ಬರೆದಿದ್ದಾರೆ. ನಂತರ ಮಸ್ಕ್ ಟ್ವೀಟ್ ಮಾಡಿ “ಭಾರತೀಯ ಪ್ರತಿಭೆಗಳಿಂದ ಅಮೆರಿಕ ಹೆಚ್ಚು ಪ್ರಯೋಜನ ಪಡೆಯುತ್ತದೆ! ಎಂದು ಬರೆದಿದ್ದಾರೆ.
ಪರಾಗ್ ಅಗರವಾಲ್ 2022 ರಲ್ಲಿ ಜ್ಯಾಕ್ ಡಾರ್ಸೆಯಿಂದ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಅಮೆರಿಕದಲ್ಲಿನ ಭಾರತೀಯ ಮೂಲದ ತಂತ್ರಜ್ಞಾನ ಕಂಪನಿಗಳ ಮುಖ್ಯಸ್ಥರಾಗಿರುವ ಸಿಇಒಗಳ ಆಯ್ದ ಗುಂಪಿಗೆ ಅಗರವಾಲ್ ಸೇರುತ್ತಾರೆ. ಅವರಲ್ಲಿ ಗೂಗಲ್ ಮತ್ತು ಅದರ ಮಾತೃಸಂಸ್ಥೆ ಆಲ್ಫಾಬೆಟ್‌ನ ಮುಖ್ಯಸ್ಥರಾದ ಸುಂದರ್ ಪಿಚೈ, ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ, ಐಬಿಎಂನ ಅರವಿಂದ್ ಕೃಷ್ಣ ಮತ್ತು ಅಡೋಬ್‌ದ ಶಾಂತನು ನಾರಾಯಣ್ ಸೇರಿದ್ದಾರೆ.
ಅಗರವಾಲ್ ಒಂದು ದಶಕಕ್ಕೂ ಹೆಚ್ಚು ಕಾಲ ಟ್ವಿಟರ್‌ನಲ್ಲಿದ್ದಾರೆ ಮತ್ತು 2017 ರಿಂದ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement