ಲಕ್ನೋ: ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ 1.16 ಕೋಟಿ ರೂ.ಗಳ ವೆಚ್ಚದಲ್ಲಿ ಮರುನಿರ್ಮಾಣಗೊಂಡ 7 ಕಿಮೀ ರಸ್ತೆಯನ್ನು ಉದ್ಘಾಟಿಸಲು ಬಿಜೆಪಿ ಶಾಸಕರೊಬ್ಬರು ತೆಂಗಿನಕಾಯಿ ಒಡೆದ ನಂತರದಲ್ಲಿ ತೆಂಗಿನಕಾಯಿ ಬದಲು ರಸ್ತೆಯೇ ಒಡೆದು ಚೂರಾದ ಅಚ್ಚರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ..!
ಬಿಜ್ನೋರ್ ಸದರ್ ಕ್ಷೇತ್ರದ ಶಾಸಕರಾದ ಮೌಸಮ್ ಚೌಧರಿ ಅವರು ರಸ್ತೆ ಉದ್ಘಾಟನೆಗೆಂದು ತೆಂಗಿನಕಾಯಿ ಯನ್ನು ರಸ್ತೆಗೆ ಬಲವಾಗಿ ಬಡಿದಿದ್ದಾರೆ.ಆ ಸಂದರ್ಭದಲ್ಲಿ ತೆಂಗಿನಕಾಯಿ ಒಡೆಯುವ ಬದಲು ರಸ್ತೆಯೇ ಬಿರುಕು ಬಿಟ್ಟಿದೆ..!!
ರಸ್ತೆಯ ಕಳಪೆತನ ನೋಡಿ ಕೆಂಡಾಮಂಡಲವಾದ ಅವರು ರಸ್ತೆ ಮಾದರಿ ಪರೀಕ್ಷೆಗೆ ಅಧಿಕಾರಿಗಳ ತಂಡವು ಆಗಮಿಸುವವ ವರೆಗೆ ಸ್ಥಳದಲ್ಲೇ ಗಂಟೆಗಳ ಕಾಲ ಕಾದರು. ಅಧಿಕಾರಿಗಳ ತಂಡವು ಆಗಮಿಸಿ ರಸ್ತೆಯ ಮಾದರಿಗಳನ್ನು ತೆಗೆದುಕೊಂಡು ತನಿಖೆಗೆ ಮುಂದಾಗಿದೆ.
ಅವರು ಇದಕ್ಕೆ ಹೊಣೆಗಾರರ ವಿರುದ್ಧ ಕಠಿಣ ಕ್ರಮವನ್ನು ಭರವಸೆ ನೀಡಿದರು ಮತ್ತು ಡಾಂಬರು ಮಾದರಿಯನ್ನು ಸಂಗ್ರಹಿಸಲು ಸ್ಥಳದಲ್ಲಿ ಗುದ್ದಲಿಯಿಂದ ರಸ್ತೆಯನ್ನು ತಾವೇ ಅಗೆದರು.
ನೀರಾವರಿ ಇಲಾಖೆ ₹ 1.16 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸುತ್ತಿತ್ತು. 7.5 ಕಿ.ಮೀ. ರಸ್ತೆ ಉದ್ಘಾಟನೆ ಮಾಡುವಂತೆ ಹೇಳಿದರು. ತಾವು ಅಲ್ಲಿಗೆ ಬಂದು ತೆಂಗಿನಕಾಯಿ ಒಡೆಯಲು ಯತ್ನಿಸಿದಾಗ ತೆಂಗಿನಕಾಯಿ ಒಡೆಯಲಿಲ್ಲ, ಬದಲಾಗಿ ರಸ್ತೆಯೇ ರಸ್ತೆಯೇ ಬಿರುಕುಬಿಟ್ಟಿದೆ ಎಂದು ಶಾಸಕಿ ಚೌಧರಿ ಸುದ್ದಿಗಾರರಿಗೆ ತಿಳಿಸಿದರು.
“ನಾನು ಅದನ್ನು ಪರಿಶೀಲಿಸಿದ್ದೇನೆ ಮತ್ತು ನಿರ್ಮಾಣದಲ್ಲಿ ಲೋಪ ಕಂಡುಬಂದಿದೆ. ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ನಾವು ಉದ್ಘಾಟನೆಯನ್ನು ನಿಲ್ಲಿಸಿದ್ದೇವೆ. ನಾನು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅವರು ಮೂರು ಸದಸ್ಯರ ತಂಡವನ್ನು ರಚಿಸಿದ್ದಾರೆ. ವಸ್ತುವನ್ನು ಮಾದರಿಗಾಗಿ ಕಳುಹಿಸಲಾಗಿದೆ ಮತ್ತು ನಾವು ಅಲ್ಲಿ ಸುಮಾರು ಮೂರು ಗಂಟೆಗಳ ಕಾಲ ಇದ್ದೆವು ಎಂದು ಅವರು ಹೇಳಿದರು.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು… ಅವರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ರಸ್ತೆಯನ್ನು ಪುನಃ ನಿರ್ಮಿಸಲಾಗುವುದು ಎಂದು ಜಿಲ್ಲಾಧಿಕಾರಿ ನನಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಬಿಜ್ನೋರ್‌ನ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ವಿಕಾಸ್ ಅಗರ್‌ವಾಲ್ ಅವರು ಯಾವುದೇ ಭ್ರಷ್ಟಾಚಾರವನ್ನು ಅಲ್ಲಗಳೆದಿದ್ದು, ಯಾವುದೇ ತಪ್ಪು ಕಲ್ಪನೆಗಳು ಉಂಟಾಗದಂತೆ ನಾವು ತನಿಖೆ ನಡೆಸುವಂತೆ ನಾವು ಜಿಲ್ಲಾಧಿಕಾರಿಗಳನ್ನು ಕೇಳಿದ್ದೇವೆ” ಎಂದು ಹೇಳಿದರು. ಉತ್ತರ ಪ್ರದೇಶ ಚುನಾವಣೆಗಳಿಗೆ ಮೂರು ತಿಂಗಳ ಮುಂಚೆ ನಡೆದ ಈ ವಿದ್ಯಮಾನ ನಡೆದಿರುವುದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವವದ ಬಿಜೆಪಿ ಸರ್ಕಾರಕ್ಕೆ ಮುಜುಗರಕ್ಕೆ ಕಾರಣವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ