ಕಾರ್‌ ಡ್ರೈವಿಂಗ್ ಲೈಸೆನ್ಸ್ ಪಡೆದ ಭಾರತದ ಮೊದಲ ಕುಬ್ಜ ..ಎತ್ತರ ಕೇವಲ ಮೂರಡಿ..! ಈತನ ಕಾರು ಡ್ರೈವಿಂಗ್‌ ವೀಕ್ಷಿಸಿ

ಹೈದರಾಬಾದ್: ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಮಾತು ನಿಜವೆಂದು ಸಾಬೀತುಪಡಿಸುವ ಮೂಲಕ ಹೈದರಾಬಾದ್‌ನ 42 ವರ್ಷದ ಗಟ್ಟಿಪಲ್ಲಿ ಶಿವಪಾಲ್ ಡ್ರೈವಿಂಗ್ ಲೈಸೆನ್ಸ್ ಗಳಿಸಿದ ಭಾರತದ ಮೊದಲ ಕುಬ್ಜ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೇವಲ ಮೂರು ಅಡಿ ಎತ್ತರದ 42 ವರ್ಷದ ಶಿವಪಾಲ ಪದವಿ ಪೂರ್ಣಗೊಳಿಸಿದ ಅವರ ಜಿಲ್ಲೆಯ ಮೊದಲ ಅಂಗವಿಕಲ ವ್ಯಕ್ತಿ ಎನಿಸಿಕೊಂಡಿದ್ದಾರೆ. ಶಿವಪಾಲ್ 2004 ರಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು.ತನ್ನ ಎತ್ತರದ ಕಾರಣದಿಂದ ಸಾರ್ವಜನಿಕ ಸಾರಿಗೆ ಬಳಸುವುದು ಹೆಚ್ಚು ಕಠಿಣವಾಗುತ್ತಿರುವುದರಿಂದ ಪ್ರಯಾಣಿಸಲು ತಾನು ಸ್ವಾವಲಂಬಿಯಾಗಬೇಕು ಎಂದು ಭಾವಿಸಿದರು. ಅದಕ್ಕಾಘಿ ಪ್ರಯತ್ನಿಸಿ ಚಾಲನಾ ಪರವಾನಗಿ ಪಡೆದಿದ್ದಾರೆ.
ನಾನು ಕುಟುಂಬದಲ್ಲಿ ಏಕೈಕ ಕುಬ್ಜ. ನನ್ನ ಎತ್ತರದ ಕಾರಣದಿಂದ ಜನರು ನನ್ನನ್ನು ಚುಡಾಯಿಸುತ್ತಿದ್ದರು ಮತ್ತು ಇಂದು ನಾನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನಾಮನಿರ್ದೇಶನಗೊಂಡಿದ್ದೇನೆ. ಚಾಲನಾ ತರಬೇತಿಗಾಗಿ ಅನೇಕ ಕುಳ್ಳರು ನನ್ನನ್ನು ಸಂಪರ್ಕಿಸುತ್ತಿದ್ದಾರೆ. ದೈಹಿಕ ವಿಕಲಚೇತನರಿಗಾಗಿ ಮುಂದಿನ ವರ್ಷ ಡ್ರೈವಿಂಗ್ ಶಾಲೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದೇನೆ ಎಂದು ಶಿವಪಾಲ ಹೇಳಿದ್ದಾರೆ.
ಶಿವಪಾಲ್ ಪ್ರಸ್ತುತ ಇಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ನಗರದಲ್ಲಿ ಬದುಕಲು ಉದ್ಯೋಗವನ್ನು ಹುಡುಕುವುದರೊಂದಿಗೆ ತನ್ನ ಹೋರಾಟವನ್ನು ವಿವರಿಸಿದ ಶಿವಪಾಲ್, ನಾನು ಆರಂಭದಲ್ಲಿ ಚಲನಚಿತ್ರ ಮತ್ತು ದೈನಂದಿನ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ ಉದ್ಯಮದಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ನಾನು ಕುಬ್ಜನಾಗಿದ್ದ ಕಾರಣ ನನಗೆ ಕೆಲಸ ನೀಡಲು ಜನರು ಸಿದ್ಧರಿರಲಿಲ್ಲ. ಸ್ನೇಹಿತರೊಬ್ಬರ ಮೂಲಕ ಖಾಸಗಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಈಗ ಕಳೆದ 20 ವರ್ಷಗಳಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದೇನೆ ಎಂದರು. “ಪ್ರಯಾಣಕ್ಕಾಗಿ, ನಾನು ನನ್ನ ಹೆಂಡತಿಯೊಂದಿಗೆ ಹೊರಗೆ ಹೋದಾಗ, ಜನರು ಕೆಟ್ಟದಾಗಿ ಕಾಮೆಂಟ್‌ ಮಾಡುತ್ತಿದ್ದರು. ಆಗ ನಾನು ಕಾರನ್ನು ಹೊಂದಲು ಮತ್ತು ಚಾಲನೆ ಮಾಡಲು ನಿರ್ಧರಿಸಿದೆ, ”ಎಂದು ಅವರು ಹೇಳುತ್ತಾರೆ.
ಶಿವಪಾಲ್ ಇಂಟರ್‌ನೆಟ್‌ನಲ್ಲಿ ಸರ್ಚ್ ಮಾಡಿದಾಗ ಅವರಿಗೆ ಅಮೆರಿಕದ ವ್ಯಕ್ತಿಯೊಬ್ಬರು ಅಪ್‌ಲೋಡ್ ಮಾಡಿದ ವೀಡಿಯೊ ನೋಡಿದ್ದಾರೆ. ಆಸನ ಮತ್ತು ಇತರ ಸಲಕರಣೆಗಳನ್ನು ತನ್ನ ಎತ್ತರಕ್ಕೆ ತಕ್ಕಂತೆ ಕಾರಿನಲ್ಲಿ ಬೇಕಾದ ಮಾರ್ಪಾಡುಗಳನ್ನು ಅದು ಶಿವಪಾಲ್‌ ಅವರಿಗೆ ಈ ವಿಡಿಯೊದಲ್ಲಿ ಸಿಕ್ಕಿದೆ. ಅವರು ಅದರಂತೆ ಕಾರನ್ನು ಮಾರ್ಪಡಿಸಿದ ನಂತರ, ಶಿವಪಾಲ್ ಸ್ನೇಹಿತನಿಂದ ಕಾರ್ ಚಾಲನೆ ಕಲಿತಿದ್ದಾರೆ.

ಕಾರಿನ ವಿನ್ಯಾಸದ ಬಗ್ಗೆ ವಿವರಗಳನ್ನು ನೀಡಿದ ಶಿವಪಾಲ್, ತನ್ನ ಕಾಲುಗಳು ಸುಲಭವಾಗಿ ತಲುಪಲು ಕಾರಿನ ಪೆಡಲ್‌ಗಳನ್ನು ಎತ್ತರದಲ್ಲಿ ಹೆಚ್ಚಿಸುವ ಕುರಿತು ಮಾಹಿತಿ ನೀಡಿದರು. ಆದರೆ, ಶಿವಪಾಲ್ ತನ್ನ ಡ್ರೈವಿಂಗ್ ಲೈಸೆನ್ಸ್ ಗಳಿಸಲು ಕಾರನ್ನು ಹೇಗೆ ವಿನ್ಯಾಸಗೊಳಿಸಬೇಕು ಎಂದು ತಿಳಿದುಕೊಳ್ಳುವುದು ಸಾಕಾಗಲಿಲ್ಲ ಹೀಗಾಗಿ ಅವರು ಕಲಿಯಲು ಹೈದರಾಬಾದ್‌ನ ಸುಮಾರು 120 ಡ್ರೈವಿಂಗ್ ಶಾಲೆಗಳನ್ನು ಸಂಪರ್ಕಿಸಿದರು ಆದರೆ ಅವರೆಲ್ಲರೂ ವಿವಿಧ ಕಾರಣಗಳನ್ನು ಉಲ್ಲೇಖಿಸಿ ಅವರಿಗೆ ಕಲಿಸಲು ನಿರಾಕರಿಸಿದರು. ಆದಾಗ್ಯೂ, ಅವರ ಸ್ನೇಹಿತ ಇಸ್ಮಾಯಿಲ್ ಅವರ ಸಹಾಯದಿಂದ, ಅವರು ಅಂತಿಮವಾಗಿ ಕಾರ್ ವಿನ್ಯಾಸಗಿಳಿಸಿದರು, ಕಾರು ಚಾಲನೆ ಮಾಡುವುದನ್ನು ಕಲಿತರು.
ಆದರೆ, ಅವರ ಹೋರಾಟ ಇಲ್ಲಿಗೆ ಮುಗಿಯಲಿಲ್ಲ, ಸಾರಿಗೆ ಇಲಾಖೆ ಎತ್ತರಕ್ಕೆ ಕೆಲವು ಮಾರ್ಗಸೂಚಿಗಳನ್ನು ಹೊಂದಿದ್ದರಿಂದ ಪರವಾನಗಿ ಪಡೆಯುವುದು ಮತ್ತೊಂದು ಸವಾಲಾಗಿ ಪರಿಣಮಿಸಿತು.
ಅಧಿಕಾರಿಗಳಿಗೆ ಮನವಿ ಮಾಡಿದ ನಂತರ ಮೂರು ತಿಂಗಳ ಕಾಲ ಕಲಿಕಾ ಪರವಾನಿಗೆ ಪಡೆದು, ಪಕ್ಕದಲ್ಲಿ ಕುಳಿತ ಅಧಿಕಾರಿಯೊಂದಿಗೆ ಸರಿಯಾದ ಚಾಲನಾ ಪರೀಕ್ಷೆ ನಡೆಸಿ ಚಾಲಕ ಪರವಾನಗಿ ಪಡೆದಿದ್ದೇನೆ ಎಂದು ಶಿವಪಾಲ್ ಹೇಳುತ್ತಾರೆ. “ಪ್ರತಿಯೊಬ್ಬರಲ್ಲಿ ಕೆಲವು ದೋಷಗಳಿರುತ್ತವೆ. ಆದರೆ ನಿಮ್ಮ ಗುಪ್ತ ಪ್ರತಿಭೆಯನ್ನು ಕಂಡುಹಿಡಿಯುವುದು ಮತ್ತು ಅವುಗಳನ್ನು ಸಾಧಿಸುವುದು ಮುಖ್ಯ ಎಂದು ಅವರು ಹೇಳುತ್ತಾರೆ.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement