ಬಾಗಲಕೋಟೆ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಸ್ವಕ್ಷೇತ್ರ ಬದಾಮಿಯಲ್ಲಿ ಪ್ರಚಾರ ನಡೆಸಿದರು.
ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತವಾಯಿತು. ಸಿದ್ದರಾಮಯ್ಯಗಾಗಿ ಕ್ಷೇತ್ರ ಬಿಟ್ಟು ಕೊಟ್ಟ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಮಾತಿನಿಂದ ಇಡೀ ಸಭೆ ಗೊಂದಲಕ್ಕೀಡಾಯಿತು. ವಸಿದ್ದರಾಮಯ್ಯ ಅವರು ವರುಣಾ ಬಿಟ್ಟು ಬಂದು ಬದಾಮಿಗೆ ಬಂದು ಸ್ಪಧೆ೯ ಮಾಡಿರುವ ಬಗ್ಗೆ ಚಿಮ್ಮನಕಟ್ಟಿ ಪ್ರಸ್ತಾಪಿಸಿದರು. ವರುಣಾ ಬಿಟ್ಟು ಬಾದಾಮಿಗೆ ಬಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಚಿಮ್ಮನಕಟ್ಟಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು. ವರುಣಾ ಬಿಟ್ಟು ಬದಾಮಿಗೆ ಯಾಕೆ ಬಂದ್ರಿ ಎಂದು ಪ್ರಶ್ನಿಸಿದರು. ಈ ಮಾತಿಗೆ ಚಿಮ್ಮನಕಟ್ಟಿ ಬೆಂಬಲಿಗರು ಜೈಕಾರ ಕೂಗಿದರೆ, ಸಿದ್ದರಾಮಯ್ಯ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು.
ಚಿಮ್ಮನಕಟ್ಟಿ ಭಾಷಣ ಆರಂಭಿಸುತ್ತಲೇ ಹೌದು ಹುಲಿಯಾ ಎಂದು ಬೆಂಬಲಿಗರು ಕೂಗಿದರು,ಆಗ ಮುಂದುವರಿಸಿದ ಚಿಮ್ಮನಕಟ್ಟಿ ಹೌದು,ನಾನು ಹುಲಿಯಾನೇ, ಆದರೆ ಈಗ ಇಲಿ ಆಗಿದ್ದೇನೆ. ನೀವು ಮಾಡಿದರೆ ಹುಲಿಯಾನೂ ಆಗ್ತೇನೆ, ಮುಖ್ಯಮಂತ್ರಿನೂ ಆಗ್ತೀನಿ. ನೀವು ಮಾಡಿದ್ರೆ ಎಲ್ಲವೂ ಆಗುತ್ತದೆ ಎಂದು ಬೆಂಬಲಿಗರಿಗೆ ಹೇಳಿದರು.
ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ತಮಗೆ ಮೈಸೂರಿನ ವರುಣಾ ಮತ್ತು ಚಾಮುಂಡಿ ಎರಡು ಕ್ಷೇತ್ರಗಳಲ್ಲಿ ಅವರಿಗೆ ಅವಕಾಶವಿದೆ. ಆದರೆ ನನಗೆ ಈ ಕ್ಷೇತ್ರ ಬಿಟ್ರೆ ಯಾವುದೇ ಅವಕಾಶ ಇಲ್ಲ. ಸಿದ್ದರಾಮಯ್ಯ ಅವರಿಗಾಗಿ ನಾನು ಕ್ಷೇತ್ರ ತ್ಯಾಗ ಮಾಡಿದ್ದೀನಿ. ಅವರ ಕ್ಷೇತ್ರದಲ್ಲಿ ಅವರು ಗೆದ್ರೆ ಅವರಿಗೆ ವರ್ಚಸ್ಸು ಹೆಚ್ಚುತ್ತದೆ ಎಂದುಹೇಳುವ ಮೂಲಕ ಮತತೆ ಬದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಚಿಮ್ಮನಕಟ್ಟಿ ಅವರನ್ನು ಸಮಾಧಾನಪಡಿಸಲು ಪ್ರಯತ್ನ
ವೇದಿಕೆಯಲ್ಲಿದ್ದ ಸಿದ್ದರಾಮಯ್ಯಗೆ ಚಿಮ್ಮನಕಟ್ಟಿ ಮಾತ ಮುಜುಗರಕ್ಕೆ ಒಳಗಾಗುವಂತೆ ಮಾಡಿತು. ಚಿಮ್ಮನಕಟ್ಟಿ ಅವರನ್ನು ಸಮಾಧಾನಪಡಿಸಲು ಹರಸಾಹಸ ಪಟ್ಟರು. ಚಿಮ್ಮನಕಟ್ಟಿ ಭಾಷಣ ನಿಲ್ಲಿಸಲು ಕೆಲ ಮುಖಂಡರು ಕೆಲ ಸಮಯ ಮೈಕ್ ಬಂದ್ ಮಾಡಿ ಚಿಮ್ಮನಕಟ್ಟಿಗೆ ಅವರನ್ನು ಸಮಾಧಾನ ಮಾಡಲು ಯತ್ನಿಸಿದರು. ಇಡೀ ಸಭೆ ಗೊಂದಲ ಮಯವಾಗುತ್ತಿದ್ದಂತೆ ವೇದಿಕೆ ಮುಂದೆ ಜಮಾಯಿಸಿದ ಜನರನ್ನ ನಿಯಂತ್ರಿಸಲು ಪೊಲೀಸರು ಮುಂದಾದರು.


ನಿಮ್ಮ ಕಾಮೆಂಟ್ ಬರೆಯಿರಿ