ನವದೆಹಲಿ: ಭಾರತೀಯ ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ಕೂನೂರಿನಲ್ಲಿ ಪತನಗೊಂಡಿದ್ದು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು 11 ಸಶಸ್ತ್ರ ಪಡೆ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದ ಸ್ಥಳಕ್ಕೆ ಮೊದಲು ಧಾವಿಸಿದ ಸ್ಥಳೀಯರು ದುರಂತ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
“ನಾನು ಮೊದಲು ದೊಡ್ಡ ಶಬ್ದ ಕೇಳಿದೆ, ಏನಾಯಿತು ಎಂದು ನೋಡಲು ನಾನು ಹೊರಗೆ ಬಂದಾಗ, ಹೆಲಿಕಾಪ್ಟರ್ ಮರಕ್ಕೆ ಡಿಕ್ಕಿ ಹೊಡೆದಿರುವುದನ್ನು ನೋಡಿದೆ, ಅಲ್ಲಿ ಒಂದು ದೊಡ್ಡ ಬೆಂಕಿಯ ಚೆಂಡು ಕಾಣಿಸಿತು ಮತ್ತು ಅದು ಮತ್ತೊಂದು ಮರಕ್ಕೆ ಅಪ್ಪಳಿಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ತಮಿಳುನಾಡಿನ ಕುನೂರ್ ಬಳಿ Mi-17 ಹೆಲಿಕಾಪ್ಟರ್ ಪತನಗೊಳ್ಳುವ ಮೊದಲು ಅದರ ಅಂತಿಮ ಕ್ಷಣಗಳನ್ನು ತೋರಿಸುವ ವಿಡಿಯೊ ಹಂಚಿಕೊಳ್ಳಲಾಗಿದೆ.
ಸ್ಥಳೀಯರು ಚಿತ್ರೀಕರಿಸಿದ ವಿಡಿಯೊದಲ್ಲಿ, ಹೆಲಿಕಾಪ್ಟರ್ ಹಾರಿ ನಂತರ ಸೆಕೆಂಡುಗಳಲ್ಲಿ ಕಣ್ಮರೆಯಾಗುವುದನ್ನು ಕಾಣಬಹುದು.
ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರು: ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಬಿಪಿನ್ ರಾವತ್, ಮಧುಲಿಕಾ ರಾವತ್ (ಸಿಡಿಎಸ್ ಬಿಪಿನ್ ರಾವತ್ ಅವರ ಪತ್ನಿ), ಬ್ರಿಗ್ ಎಲ್ಎಸ್ ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಎಚ್ ಸಿಂಗ್, ಡಬ್ಲ್ಯುಜಿ ಸಿಡಿಆರ್ ಪಿಎಸ್ ಚೌಹಾನ್, ಸ್ಕ್ಎನ್ ಎಲ್ಡಿಆರ್ ಕೆ ಸಿಂಗ್, ಜೆಡಬ್ಲ್ಯೂಒ ದಾಸ್ , JWO ಪ್ರದೀಪ್ ಎ, ಹವಾಲ್ದಾರ್ ಸತ್ಪಾಲ್, ನಾಯಕ್ ಗುರ್ಸೇವಕ್ ಸಿಂಗ್, ನಾಐಕ್ ಜಿತೇಂದರ್, ಲ್ಯಾನ್ಸ್ ನಾಯಕ ವಿವೇಕ್, ಲ್ಯಾನ್ಸ್ ನಾಯಕ ಸಾಯಿ ತೇಜ


ನಿಮ್ಮ ಕಾಮೆಂಟ್ ಬರೆಯಿರಿ