ಅಯ್ಯೋ ರಾಮಾ.. :ಬರ್ತ್‌ಡೇ ಕೇಕ್‌ ಕ್ಯಾಂಡಲ್ ಆರಿಸುವಾಗ ಹೀಗೂ ಆಗ್ಬಹುದು ಹುಷಾರ್‌..ವೀಕ್ಷಿಸಿ

ಬರ್ತ್‌ಡೇ ಸಂಭ್ರಮದಲ್ಲಿ ಮೈಮರೆಯುವವರು ನೋಡಲೇಬೇಕಾದ ವಿಡಿಯೊ ಇದು. ಈ ದೃಶ್ಯ ನೋಡಿದರೆ ಎದೆ ಒಮ್ಮೆ ದಸ್‌ ಎನ್ನುತ್ತದೆ..!
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಈ ವಿಡಿಯೋ ಎಲ್ಲರಿಗೂ ಒಂದು ಪಾಠದಂತೆಯೇ ಇದೆ. ಸ್ವಲ್ಪ ಎಚ್ಚರ ತಪ್ಪಿದರೂ ಏನಾಗುತ್ತದೆ ಎಂಬುದಕ್ಕೆ ಒಂದು ನಿದರ್ಶನವಾಗಿದೆ.
ಮಹಿಳೆಯೊಬ್ಬರು ಬರ್ತ್‌ಡೇಯಲ್ಲಿ ಕೇಕ್‌ನಲ್ಲಿದ್ದ ಕ್ಯಾಂಡಲ್ ನಂದಿಸುವಾಗ ಸಣ್ಣ ಯಡವಟ್ಟಿನಿಂದ ಅವರ ತಲೆ ಕೂದಲಿಗೆ ಬೆಂಕಿ ಹೊತ್ತಿಕೊಳ್ಳುತ್ತದೆ…! ಯು ಟ್ಯೂಬ್ ನಲ್ಲಿ ಹಂಚಿಕೊಂಡ ಕ್ಲಿಪ್‌ ನಲ್ಲಿ ಮಹಿಳೆಯೊಬ್ಬರು ತನ್ನ ಮಕ್ಕಳೊಂದಿಗೆ ಸೇರಿ ತನ್ನ ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಕಾಣುತ್ತದೆ. ಕೇಕ್‌ನಲ್ಲಿ ಕ್ಯಾಂಡಲ್ ಉರಿಸಿ ಅಲ್ಲಿದ್ದವರು ಸಂಭ್ರಮಿಸುತ್ತಾರೆ. ಮಕ್ಕಳು, ಸಂಬಂಧಿಕರು, ಪತಿ ಈಕೆಗೆ ಜನ್ಮದಿನದ ಶುಭಾಶಯದ ಹಾಡು ಹೇಳುತ್ತಾರೆ. ಇದಾದ ಬಳಿಕ ಈಕೆ ಕೇಕ್‌ ಮೇಲಿದ್ದ ಕ್ಯಾಂಡಲ್ ಆರಿಸಲು ಮುಂದಾಗುತ್ತಾರೆ. ಆದರೆ, ಈ ವೇಳೆ ಮಹಿಳೆ ಕೇಕ್ ಅನ್ನು ಮುಖಕ್ಕೆ ಹತ್ತಿರ ಹಿಡಿಯುತ್ತಾರೆ. ಈ ವೇಳೆ ಆಕಸ್ಮಾತ್‌ ಆಗಿ ಬೆಂಕಿ ಇವರ ತಲೆಕೂದಲಿಗೆ ಹೊತ್ತಿಕೊಳ್ಳುತ್ತದೆ. ಈ ದೃಶ್ಯ ಕಂಡು ಎಲ್ಲರೂ ಭಯದಲ್ಲಿ ಕಿರುಚಾಡುವುದನ್ನು ಕೇಳಬಹುದಾಗಿದೆ.
ಈ ಭಯಾನಕ ಪರಿಸ್ಥಿತಿ ಎದುರಿಸಿದವರು ಅನಾ ಮತ್ತು ಅವರ ಏಳು ವರ್ಷದ ಮಗ. ಅವರಿಬ್ಬರ ಜನ್ಮದಿನ ಒಂದೇ ದಿನವಾಗಿದೆ. ಹೀಗಾಗಿ, ಇಬ್ಬರೂ ಜತೆಯಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು.

ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅನಾ ಅವರ ತಲೆಕೂದಲು, ರೆಪ್ಪೆಗೂದಲಿಗೆ ಹಾನಿಯಾಗಿದ್ದು ಮತ್ತು ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿದೆ, ಇ ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ದೊಡ್ಡ ಹಾನಿಯಾಗಿಲ್ಲ. ಬೆಂಕಿ ತಗುಲಿದ ತಕ್ಷಣ ಅನಾ ಕುಟುಂಬದ ಸದಸ್ಯರು ತಕ್ಷಣ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಈ ಹಿಂದೆ ಕೂಡಾ ಇಂತಹ ಘಟನೆಗಳು ನಡೆದಿದ್ದವು. ಹೀಗಾಗಿ ಈ ಬಗ್ಗೆ ಎಚ್ಚರಿಕೆ ಅಗತ್ಯ.

3 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement