ಅಮೆರಿಕ ಅಧ್ಯಕ್ಷರ ಶ್ವೇತಭವನದ ಅಧ್ಯಕ್ಷೀಯ ಸಿಬ್ಬಂದಿ ಕಚೇರಿ ಮುಖ್ಯಸ್ಥರಾಗಿ ಭಾರತೀಯ ಮೂಲದ ಗೌತಮ್ ರಾಘವನ್ ನೇಮಕ

ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ತಂಡಕ್ಕೆ ಮತ್ತೋರ್ವ ಭಾರತೀಯ ಮೂಲದ ಪ್ರಜೆ ಸೇರ್ಪಡೆಯಾಗಿದ್ದಾರೆ. ಭಾರತೀಯ ಅಮೆರಿಕನ್ ಗೌತಮ್ ರಾಘವನ್ ಈಗ ಶ್ವೇತಭವನದ ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.
ಗೌತಮ್​ ರಾಘವನ್​ ಅವರ ನೇಮಕಾತಿಯನ್ನು ಅಧ್ಯಕ್ಷ ಜೋ ಬಿಡೆನ್‌​ ಪ್ರಕಟಿಸಿದ್ದಾರೆ. ಈ ಮೊದಲು ವೈಟ್​ ಹೌಸ್​ನ ಅಧ್ಯಕ್ಷೀಯ ಸಿಬ್ಬಂದಿ ಮುಖ್ಯಸ್ಥರಾಗಿದ್ದ ಕ್ಯಾಥಿ ರಸೆಲ್​​ ಅವರನ್ನು ಯುನಿಸೆಫ್​​ನ ಮುಂದಿನ ಮುಖ್ಯ ಕಾರ್ಯನಿರ್ವಾಹಕರನ್ನಾಗಿ ನೇಮಕ ಮಾಡಿ ವಿಶ್ವಸಂಸ್ಥೆ​ ಕಾರ್ಯದರ್ಶಿ ಅಂಟೋನಿಯೋ ಗುಟರಸ್​ ಅವರು ಆದೇಶ ಹೊರಡಿಸಿದ ಬೆನ್ನಲ್ಲೇ, ತೆರವಾದ ಸ್ಥಾನಕ್ಕೆ ರಾಘವನ್​ ಆಯ್ಕೆ ಆಗಿದ್ದಾರೆ.
ಗೌತಮ್ ರಾಘವನ್ ಭಾರತದಲ್ಲೇ ಜನಿಸಿದ್ದರೂ, ಅಮೆರಿಕಕ್ಕೆ ವಲಸೆ ಹೋಗಿದ್ದಾರೆ. ಸಿಯಾಟಲ್ಲಿನಲ್ಲಿ ಬೆಳೆದು ಸ್ಟ್ಯಾನ್‌ ಫೋರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.
ಗೌತಮ್ ರಾಘವನ್‌ ಅವರು 2021 ರಿಂದ ಅಧ್ಯಕ್ಷರ ಉಪ ಸಹಾಯಕರಾಗಿ ಮತ್ತು ಶ್ವೇತಭವನದ ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಈ ಹಿಂದೆ, ಬಿಡೆನ್-ಹ್ಯಾರಿಸ್ ಪರಿವರ್ತನಾ ತಂಡದ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಮೊದಲ ಉದ್ಯೋಗಿ ಕೂಡ ಆಗಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement