ದೈತ್ಯಾಕಾರದ ಹೆಬ್ಬಾವಿನ ಜೊತೆ ಆಟವಾಡುವ ಪುಟ್ಟ ಹುಡುಗಿ..ನೋಡಿದ್ರೆ ಬೆಚ್ಚಿ ಬೀಳ್ತೀರಿ..! ವೀಕ್ಷಿಸಿ

ಚಿಕ್ಕ ಹುಡುಗಿಯೊಬ್ಬಳು ದೈತ್ಯಾಕಾರದ ಹಾವಿನ ಆಟವಾಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣ ಯು-ಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅದೇರೀತಿ snake._.world’ ಎಂಬ ಬಳಕೆದಾರರಿಂದ ಈ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ (Instagram) ಹಂಚಿಕೊಳ್ಳಲಾಗಿದೆ. ಇದು ಈಗ ಲಕ್ಷ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.
ವಿಡಿಯೊದಲ್ಲಿ, ಕೆಂಪು ಟಿ-ಶರ್ಟ್, ಪ್ಯಾಂಟ್ ಮತ್ತು ನೀಲಿ ಚಪ್ಪಲಿಗಳನ್ನು ಧರಿಸಿರುವ ಮುದ್ದಾದ ಪುಟ್ಟ ಹುಡುಗಿ ಮನೆಯ ಹೊರಗೆ ತಣ್ಣಗಾಗುತ್ತಿರುವುದನ್ನು ಕಾಣಬಹುದು. ನಂತರ, ವಿಡಿಯೊದಲ್ಲಿ ಹೆಬ್ಬಾವು ಕಾಣಿಸಿಕೊಳ್ಳುತ್ತದೆ.
ಕ್ಯಾಮೆರಾವು ಹಾವಿನ ನೈಜ ಗಾತ್ರವನ್ನು ದೂರದಿಂದ ತೋರಿಸುತ್ತದೆ. ಹೆಬ್ಬಾವು ಎಷ್ಟು ದೊಡ್ಡದಾಗಿದೆ ಎಂದು ನಂತರ ತೋರಿಸುತ್ತದೆ. ಮತ್ತು ಹುಡುಗಿ ಶಾಂತವಾಗಿ ಅದರೊಂದಿಗೆ ಆಟವಾಡುತ್ತಾಳೆ. ನಂತರ ಅವಳು ಹೆಬ್ಬಾವಿನ ಬೃಹತ್ ದೇಹದ ಮೇಲೆ ಮಲಗುತ್ತಾಳೆ ಮತ್ತು ಅದನ್ನು ಮುದ್ದಾಡುತ್ತಾಳೆ. ಹಾವು ಹುಡುಗಿ ಮೇಲೆ ತೋರಿಸಿದ ಪ್ರೀತಿ ನೋಡಿದರೆ ಹೆಬ್ಬಾವು ಚೆನ್ನಾಗಿ ತರಬೇತಿ ಪಡೆದಿದೆ ಎಂದು ತೋರುತ್ತದೆ. ಆದರೆ ದೈತ್ಯ ಹೆಬ್ಬಾವನ್ನು ನೋಡಿದರೇ ಮೈ ಜುಂ ಎನ್ನುತ್ತದೆ. ಅಂಥದ್ದರಲ್ಲಿ ಅಂಥ ದೈತ್ಯ ಹೆಬ್ಬಾವಿನ ಮೇಲೆ ಆರಾಮವಾಗಿ ಮಲಗುತ್ತಾಳೆ, ಆಟವಾಡುತ್ತಾಳೆ..!

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement