ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ಯೋಜನೆ ಯಶಸ್ಸಿನ ಹಿಂದೆ ದಕ್ಷಿಣ ಕಾಶಿ ಖ್ಯಾತಿಯ ಗೋಕರ್ಣ ಮೂಲದ ವ್ಯಕ್ತಿ…!

ವಾರಾಣಸಿಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ದೊಡ್ಡ ಮಟ್ಟದಲ್ಲಿ ಉತ್ತೇಜಿಸುವ ನಿಟ್ಟಿನಲ್ಲಿ ಬೃಹತ್ ಯೋಜನೆಯಾದ ಕಾಶಿ ವಿಶ್ವನಾಥ್ ಧಾಮ್ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅನಾವರಣಗೊಳಿಸಿದ್ದಾರೆ.
339 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಕಾಶಿ ವಿಶ್ವನಾಥ ಕಾರಿಡಾರ್‌ ಯೋಜನೆಯು ಐತಿಹಾಸಿಕ ಕಾಶಿ ವಿಶ್ವನಾಥ ದೇವಾಲಯ ಹಾಗೂ ಐತಿಹಾಸಿಕ ದಶಾಶ್ವಮೇಧ ಘಾಟ್ ವರೆಗೂ ಸುತ್ತುವರೆದಿದೆ. ಈ ಕಾರಿಡಾರ್ ವಾರಣಾಸಿಯ ಪುರಾತನ ಕಾಶಿ ವಿಶ್ವನಾಥ ದೇವಸ್ಥಾನವನ್ನು ನೇರವಾಗಿ ಗಂಗಾ ಘಾಟ್‍ನೊಂದಿಗೆ ಸಂಪರ್ಕಿಸುತ್ತದೆ. 23 ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ ಮತ್ತು ಯೋಜನೆಯಿಂದಾಗಿ 3000 ಚದರ ಅಡಿ ಇದ್ದ ದೇವಾಲಯದ ಪ್ರದೇಶವು ಈಗ ಐದು ಲಕ್ಷ ಚದರ ಅಡಿಗಳಲ್ಲಿ ಹರಡಿದೆ. ಇದು ದೇವಾಲಯದ ಆವರಣವನ್ನು ಗಂಗಾ ನದಿಗೆ ಸಂಪರ್ಕಿಸುತ್ತದೆ ಮತ್ತು ಭಕ್ತರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತದೆ. ಈಗ 50,000-75,000 ಭಕ್ತರು ದೇವಾಲಯದ ಆವರಣಕ್ಕೆ ಬರಬಹುದಾಗಿದೆ. ಅಷ್ಟೇ ಏಕೆ ವಿಕಲಚೇತನರು ಹಾಗೂ ವಯೋವೃದ್ಧರು ಸಹ ಯಾವುದೇ ಅಡತಡೆ ಇಲ್ಲದೆ ಸುಲಭವಾಗಿ ಹೋಗಬಹುದಾಗಿದೆ ಎಂದು ಹೇಳಲಾಗಿದೆ. ಈ ಯೋಜನೆ ಕೆಲಸ ಕಾರ್ಯಗಳಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಈ ಯೋಜನೆ ಕೆಲವೇ ವರ್ಷದಲ್ಲಿ ಕಾರ್ಯರೂಪಕ್ಕೆ ಬಂದಿದೆ.
ಈ ಯೋಜನೆ ರೂವಾರಿ ಕುಟುಂಬ ಮೂಲತಃ ಕರ್ನಾಟಕದ ಕರಾವಳಿ ಭಾಗದ ಕುಟುಂಬ. ಉತ್ತರ ಕನ್ನಡ ಜಿಲ್ಲೆಯ ದಕ್ಷಿಣ ಕಾಶೀ ಎಂದೇ ಹೆಸರಾದ ಗೋಕರ್ಣ ಮೂಲದ ನಿತಿನ್ ರಮೇಶ ಗೋಕರ್ಣ. ನಿತಿನ್ ಅವರ ಅಜ್ಜ ಮುಂಬೈನಲ್ಲಿ ರೈಲ್ವೆ ಉದ್ಯೋಗಿಯಾಗಿದ್ದರು. ಹಾಗಾಗಿ ಅವರ ಕುಟುಂಬ ಗೋಕರ್ಣದಿಂದ ಮುಂಬೈಗೆ ಸ್ಥಳಾಂತರಗೊಂಡಿತ್ತು. ನಿತಿನ್ ತಂದೆ ಮುಂಬೈನಲ್ಲೇ ಜನಿಸಿ ಅಲ್ಲಿಯೇ ನೆಲೆಸಿದ್ದರು. ನಿತಿನ್ ಅವರೂ ಮುಂಬೈನಲ್ಲಿ ಜನಿಸಿ, ಉನ್ನತ ಶಿಕ್ಷಣ ಪೂರೈಸಿದ ನಂತರ ಯುಪಿಎಸ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. 1990ರ ಬ್ಯಾಚ್‍ನ ಉತ್ತರ ಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ. ವಾರಾಣಸಿ ಜಿಲ್ಲಾಧಿಕಾರಿಯಾಗಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಈ ಯೋಜನೆಯ ಸಂಪೂರ್ಣ ರೂಪರೇಷೆ ಸಿದ್ಧಪಡಿಸುವ ಹೊಣೆಗಾರಿಕೆ ಇವರ ಹೆಗಲ ಮೇಲೆ ಬಿತ್ತು. ಇವರ ನೇತೃತದಲ್ಲಿಯೇ ಈಗ ವಿಶ್ವದ ಗಮನ ಸೆಳೆಯುತ್ತಿರುವ ಈ ಬೃಹತ್‌ ಕಾಶಿ ವಿಶ್ವನಾಥ ಧಾಮ ಕಾರಿಡಾರ್‌ ಯೋಜನೆ ರೂಪರೇಷೆ ಸಿದ್ಧವಾಯಿತು ಹಾಗೂ ಈ ಯೋಜನೆ ಇಷ್ಟೊಂದು ತ್ವರಿತವಾಗಿ ಆಗಲು ಇವರ ನೇತೃತ್ವದ ತಂಡದ ಶ್ರಮವೇ ಪ್ರಮುಖ ಕಾರಣ.
ಇವರು ಗೋಕರ್ಣದ ಅಭಿವೃದ್ಧಿ ಕನಸನ್ನೂ ಕಂಡಿದ್ದಾರೆ. ಕೆಲವು ತಿಂಗಳ ಅನಿವಾಸಿ ಗೋಕರ್ಣದವರ ಸಮ್ಮೇಳನಕ್ಕೆ ಅವರು ಆಗಮಿಸಿದ್ದರು.
ನಿತಿನ್‌ ಗೋಕರ್ಣ ಅವರ ಕುಟುಂಬದವರು ಮೂಲತಃ ಗೋಕರ್ಣದ ಬಿಜ್ಜೂರಿನವರು. ನಿತಿನ್ ಅವರ ಅಜ್ಜ ಮುಂಬೈನಲ್ಲಿ ರೈಲ್ವೆ ಉದ್ಯೋಗಿಯಾಗಿದ್ದರು. ಹಾಗಾಗಿ ಅವರ ಕುಟುಂಬ ಗೋಕರ್ಣದಿಂದ ಮುಂಬೈಗೆ ಸ್ಥಳಾಂತರಗೊಂಡಿತ್ತು. ನಿತಿನ್ ಅವರ ತಂದೆ ಮುಂಬೈನಲ್ಲೇ ಜನಿಸಿ ಅಲ್ಲಿಯೇ ನೆಲೆಸಿದ್ದರು. ನಿತಿನ್ ಅವರೂ ಮುಂಬೈನಲ್ಲಿ ಜನಿಸಿ, ಉನ್ನತ ಶಿಕ್ಷಣ ಪೂರೈಸಿದ ನಂತರ ಯುಪಿಎಸ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಅವರು 1990ರ ಬ್ಯಾಚ್‍ನ ಐಎಎಸ್ ಅಧಿಕಾರಿ. ದೂರದ ಊರಿಗೆ ಸ್ಥಳಾಂತರಗೊಂಡರೂ ಅವರ ಕುಟುಂಬ ಗೋಕರ್ಣದೊಂದಿಗೆ ಈಗಲೂ ನಂಟು ಹೊಂದಿದೆ. ಮದುವೆ, ಧಾರ್ಮಿಕ ಕಾರ್ಯಕ್ರಮಗಳು ಇದ್ದರೆ ಗೋಕರ್ಣಕ್ಕೆ ಬರುತ್ತಾರೆ.
ನಿತನ್ ಮೊದಲು ಐಪಿಎಸ್ ಉತ್ತೀರ್ಣರಾಗಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು, ನಂತರ ಅವರ ಕುಟುಂಬದವರ ಒತ್ತಾಯಕ್ಕೆ ಮತ್ತೆ ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜಿಲ್ಲಾಧಿಕಾರಿಯಾದರು. ಪ್ರಸ್ತುತ ಉತ್ತರ ಪ್ರದೇಶ ಸರ್ಕಾರದ ಪ್ರಿನ್ಸಿಪಾಲ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
. ವಾರಣಾಸಿಯ ಸಂಸದರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ, ಅಧಿಕಾರ ಸ್ವೀಕರಿಸಿದ ನಂತರ ನಿತಿನ್ ಅವರನ್ನು ಜಿಲ್ಲಾಧಿಕಾರಿಯನ್ನಾಗಿ ನೇಮಿಸಿದರು. ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ದೊಡ್ಡ ಸವಾಲಿನ ಬಹುದೊಡ್ಡ ಜವಾಬ್ದಾರಿ ಅವರ ಹೆಗಲಿಗೆ ಬಿತ್ತು. ನಿತಿನ್ ಅವರು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಏರಿದ ನಂತರ ಬೃಹತ್‌ ಹಾಗೂ ಧಾರ್ಮಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ವಿಶ್ವದ ಗಮನ ಸೆಳೆಯುವ ಕಾಶಿ ವಿಶ್ವನಾಥ್ ಧಾಮ್ ಕಾರಿಡಾರ್ಯೋಜನೆ ಹೊಣೆ ಇವರ ಹೆಗಲಿಗೆ ಬಿತ್ತು. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯೂ ಹೌದು. ಇದು ಭಾರತದ ಸನಾತನ ಸಂಸ್ಕೃತಿಯ ಪ್ರತೀಕ ಹಾಗೂ ಅಧ್ಯಾತ್ಮಿಕ ಆತ್ಮದ ಸಂಕೇತವಾಗಬೇಕು ಜೊತೆಗೆ ಇದು ಭಾರತದ ಪ್ರಾಚೀನತೆ ಮತ್ತು ಸಂಪ್ರದಾಯಗಳ ಉಳಿಸಿಕೊಂಡು ಆಧುನಿಕತೆಯೊಂದಿಗೆ ನಿರ್ಮಾಣವಾಗಬೇಕು ಎಂಬುದು ಪ್ರಧಾನಿ ಮೋದಿಯವರ ಇಚ್ಛೆಯಾಗಿತ್ತು.
ಇದನ್ನು ನಿತಿನ್‌ ಗೋಕರ್ಣ ನೇತೃತ್ವದ ತಂಡ ಅತ್ಯಂತ ಸಮರ್ಪಕವಾಗಿ ಹಾಗೂ ಅತ್ಯಂತ ವೇಗವಾಗಿ ಪೂರ್ಣಗೊಳಿಸಿತು.
ವಿಶೇಷವೆಂದರೆ `ದಕ್ಷಿಣ ಕಾಶಿ’ ಎನಿಸಿಕೊಂಡಿರುವ ಗೋಕರ್ಣ ಮೂಲದವರೇ ಕಾಶಿ ವಿಶ್ವನಾಥ ದೇವಸ್ಥಾದ ಪುನರ್ ನಿರ್ಮಾಣ ಈ ಬೃಹತ್‌ ಯೋಜನೆಯ ರೂವಾರಿಯಾಗಿರುವುದು ಕಾಕತಾಳೀಯವಾದರೂ ನಿತಿನ್‌ ಗೋಕರ್ಣ ಅವರ ಅದ್ಭುತ ಕೆಲಸ ಕರ್ನಾಟಕ ರಾಜ್ಯ ಹಾಗೂ ಉತ್ತರ ಕನ್ನಡ ಜಿಲ್ಲೆ ಹೆಮ್ಮೆ ತರುತ್ತದೆ.
ಆದರೆ ಇಷ್ಟೊಂದು ಬೃಹತ್‌ ಯೋಜನೆ ಹೊಣೆ ಹೊತ್ತು ಅದನ್ನು ಯಶಸ್ವಿಯಾಗಿ ನಿಭಾಯಿಸಿದ ನಿತಿನ್‌ ಗೋಕರ್ಣ ಅವರಿಗೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಕಾರಣ ಈ ಮೊದಲೇ ಇದೇ ದಿನ ಅವರ ಮಗಳ ಮದುವೇ ನಿಶ್ಚಯವಾಗಿತ್ತು. ಹೀಗಾಗಿ ಅವರು ಬೆಂಗಳೂರಿಗೆ ಆಗಮಿಸಿದ್ದರು..!

ಪ್ರಮುಖ ಸುದ್ದಿ :-   ಶಾಸಕ ಸ್ಥಾನದಿಂದ ಅನರ್ಹಗೊಂಡ ಜನಾರ್ದನ ರೆಡ್ಡಿ

5 / 5. 4

ನಿಮ್ಮ ಕಾಮೆಂಟ್ ಬರೆಯಿರಿ

advertisement