ಡೆಲ್ಟಾ, ಮತ್ತು ಮೂಲ ಕೋವಿಡ್-19 ವೈರಸ್‌ 70 ಪಟ್ಟು ಹೆಚ್ಚು ವೇಗವಾಗಿ ಓಮಿಕ್ರಾನ್ ವೈರಸ್‌ ಸೋಂಕು ತಗುಲುತ್ತದೆ: ಅಧ್ಯಯನ…!

ಬೀಜಿಂಗ್; ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿ ವಿಶ್ವದ ಹಲವು ದೇಶಗಳಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮಿಕ್ರಾನ್, ಡೆಲ್ಟಾಗಿಂತಲೂ 70 ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ, ಆದರೆ, ರೋಗದ ತೀವ್ರತೆ ಅತ್ಯಂತ ಕಡಿಮೆ ಇದ್ದಂತೆ ತೋರುತ್ತಿದೆ ಎಂದು ಹಾಂಗ್‌ಕಾಂಗ್‌ನ ಹೊಸ ಅಧ್ಯಯನವೊಂದು ಹೇಳಿದೆ.
ಡೆಲ್ಟಾ ರೂಪಾಂತರ ತಳಿ ಮತ್ತು ಮೂಲ ವೈರಸ್ ಸಾರ್ಸ್-ಕೋವ್-2ಕ್ಕೆ ಹೋಲಿಸಿದರೆ ಓಮೈಕ್ರಾನ್ ತಳಿಯು ಮಾನವನ ಶ್ವಾಸನಾಳಕ್ಕೆ 70 ಪಟ್ಟು ಹೆಚ್ಚು ಹರಡುವ ಸಾಮರ್ಥ್ಯ ಹೊಂದಿದೆ.
ಆದರೆ ಮೂಲ ವೈರಸ್‌ಗೆ ಹೋಲಿಸಿದರೆ ಓಮಿಕ್ರಾನ್‌ ತೀವ್ರತೆ ಅತ್ಯಂತ ಕಡಿಮೆ ಇರುತ್ತದೆ ಎಂದು ಹಾಂಗ್‌ಕಾಂಗ್ ಸಂಶೋಧಕರ ತಂಡ ಹೇಳಿದೆ.
ಸಾರ್ಸ್‌-ಕೋವ್-2ರ ಇತರೆ ರೂಪಾಂತರಗಳಿಗಿಂತ ಓಮಿಕ್ರಾನ್ ಹರಡುವಿಕೆ ಮತ್ತು ರೋಗದ ತೀವ್ರತೆ ಬಗ್ಗೆ ಅರ್ಥಮಾಡಿಕೊಳ್ಳಲು ಸಂಶೋಧಕರು ಉಸಿರಾಟದ ಪ್ರದೇಶದ ಎಕ್ಸ್‌ ವಿವೊ ಕಲ್ಚರ್‌ಗಳನ್ನು ಬಳಸಿದ್ದಾರೆ.
ಈ ವಿಧಾನದಲ್ಲಿ ಉಸಿರಾಟದ ಪ್ರದೇಶದ ವೈರಲ್ ರೋಗಗಳನ್ನು ಪತ್ತೆ ಮಾಡಲು ಶ್ವಾಸಕೋಶದ ಅಂಗಾಂಶವನ್ನು ಬಳಸಲಾಗುತ್ತದೆ. ಹಾಂಗ್‌ಕಾಂಗ್ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಮೈಕಲ್ ಚಾನ್ ಚಿ ವಾಯ್ ತಂಡವು, ಓಮಿಕ್ರಾನ್ ತಳಿಯನ್ನು ಪ್ರತ್ಯೇಕಗೊಳಿಸಿ ಸಾರ್ಸ್-ಕೋವ್-2 ಲಕ್ಷಣಗಳ ಜೊತೆಗೆ ತುಲನಾತ್ಮಕ ಅಧ್ಯಯನ ಮಾಡಿದ್ದಾರೆ.
ಸೋಂಕು ತಗುಲಿದ 24 ಗಂಟೆಗಳ ನಂತರ, ಓಮಿಕ್ರಾನ್ ರೂಪಾಂತರವು ಡೆಲ್ಟಾ ರೂಪಾಂತರ ಮತ್ತು ಮೂಲ ವೈರಸ್‌ಗಿಂತಲೂ ಸುಮಾರು 70 ಪಟ್ಟು ಹೆಚ್ಚು ಬಾರಿ ಪುನರಾವರ್ತನೆಯಾಗುತ್ತದೆ.ಆದರೆ, ಓಮೈಕ್ರಾನ್ ತಳಿಯ ರೋಗದ ಪರಿಣಾಮವು ಇತರೆ ತಳಿಗಳಿಗಿಂತ 10 ಪಟ್ಟು ಕಡಿಮೆಯಿದೆ ಎಂದು ಸಂಶೋಧಕರ ತಂಡ ಹೇಳಿದೆ.
ರೋಗದ ತೀವ್ರತೆಯನ್ನು ವೈರಸ್ ಪುನರಾವರ್ತನೆಯಿಂದ ಮಾತ್ರ ನಿರ್ಧರಿಸಲಾಗುವುದಿಲ್ಲ. ಆದರೆ, ಸೋಂಕಿಗೆ ಒಳಗಾದ ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆಯ ಪ್ರತಿಕ್ರಿಯೆಯಿಂದ ನಿರ್ಧರಿಸಲಾಗುತ್ತದೆ ಎಂಬುದನ್ನು ಗಮನಿಸಬೇಕು ಎಂದು ಚಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದರೆ, ಹೆಚ್ಚು ಹೆಚ್ಚು ಜನರಿಗೆ ಹರಡುವ ಮೂಲಕ ಕಡಿಮೆ ರೋಗಕಾರಕ ಮತ್ತು ಹೆಚ್ಚು ಸಾಂಕ್ರಾಮಿಕವಾದ ವೈರಸ್ ಸಾವುಗಳ ಹೆಚ್ಚಳಕ್ಕೂ ಕಾರಣವಾಗಬಹುದು ಎಂಬುದನ್ನೂ ಗಮನಿಸಬೇಕು’ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement