ಯುವ ಕುಸ್ತಿಪಟುವಿಗೆ ವೇದಿಕೆ ಮೇಲೆಯೇ ಕಪಾಳ ಮೋಕ್ಷ ಮಾಡಿದ ಸಂಸದ-ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ..! ವೀಕ್ಷಿಸಿ

ರಾಂಚಿ: ರಾಂಚಿಯಲ್ಲಿ ನಡೆದ 15 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಮತ್ತು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಯುವ ಕುಸ್ತಿಪಟುವಿನ ವಿರುದ್ಧ ಆಘಾತಕಾರಿ ವರ್ತನೆಯಿಂದ ಶನಿವಾರ ಸುದ್ದಿಯಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ವಿಡಿಯೊದಲ್ಲಿ, ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷರು ವಯೋಮಿತಿ ಮೀರಿದ ಕುಸ್ತಿಪಟು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ತನಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ ನಂತರ ವೇದಿಕೆಯ ಮೇಲೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ.

ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಎಷ್ಟೇ ಹೇಳಿದರೂ ವಯೊಮೀತಿ ಮೀರಿದ ಕುಸ್ತಿಪಟು ವೇದಿಕೆಯ ಮೇಲೆ ಭಾಗವಹಿಸಲು ಅನುಮತಿ ನೀಡಬೇಕೆಂದು ಬಲವಂತ ಮಾಡದಾಗ ನಂತರ ತಾಳ್ಮೆ ಕಳೆದುಕೊಂಡರು ಹಾಗೂ ಕುಸ್ತಿಪಟುವಿಗೆ ಕಪಾಳಮೋಕ್ಷ ಮಾಡಿದರು. ರಾಂಚಿಯ ಶಹೀದ್ ಫನ್ಪತ್ ರಾಯ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 15 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಈ ಘಟನೆ ನಡೆದಿದೆ.

ಉತ್ತರ ಪ್ರದೇಶ ಮೂಲದ ಕುಸ್ತಿಪಟು 15 ವರ್ಷ ವಯೋಮಿತಿ ಮೀರಿದ ಕಾರಣ ಸ್ಪರ್ಧೆಯಲ್ಲಿ ಭಾಗವಹಿಸದಂತೆ ತಡೆಯಲಾಗಿದೆ ಎಂದು ವರದಿಯಾಗಿದೆ. ಬಿಜೆಪಿ ಸಂಸದರು ವೇದಿಕೆಗೆ ಆಗಮಿಸಿದಾಗ ಕುಸ್ತಿಪಟು ಅವರೊಂದಿಗೆ ವಾಗ್ವಾದಕ್ಕಿಳಿದು ವೇದಿಕೆಯಿಂದ ಇಳಿಯಲು ನಿರಾಕರಿಸಿದ ನಂತರ ಡಬ್ಲ್ಯುಎಫ್‌ಐ ಅಧ್ಯಕ್ಷರು ತಮ್ಮ ಶಾಂತತೆ ಕಳೆದುಕೊಂಡರು ಮತ್ತು ಕುಸ್ತಿಪಟುವಿಗೆ ಕಪಾಳ ಮೋಕ್ಷ ಮಾಡಿದರು.
ಆದರೆ, ಜಾರ್ಖಂಡ್ ಕುಸ್ತಿ ಸಂಸ್ಥೆಯ ಅಧ್ಯಕ್ಷ ಭೋಲಾನಾಥ್ ಸಿಂಗ್ ಮತ್ತು ಇತರ ಸದಸ್ಯರು ವೇದಿಕೆಗೆ ಧಾವಿಸಿ ಸಿಂಗ್ ಅವರನ್ನು ಸಮಾಧಾನಪಡಿಸಿದರು.ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳ ಅನೇಕ ಕುಸ್ತಿಪಟುಗಳು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು ಮತ್ತು ಡಬ್ಲ್ಯುಎಫ್‌ಐ ಅಧ್ಯಕ್ಷರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement