ಗೆಲಕ್ಸಿಗಳು, ದೂರದ ಪ್ರಪಂಚ ನೋಡಲು ವಿಶ್ವದ ಅತ್ಯಂತ ದೊಡ್ಡ, ಪ್ರಭಾವಶಾಲಿ ದೂರದರ್ಶಕ ಜೇಮ್ಸ್​ ವೆಬ್​​ ಉಡಾವಣೆ ಮಾಡಿದ ನಾಸಾ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಇಂದು, ( ಶನಿವಾರ) ಸಂಜೆ 5:50ರ ಹೊತ್ತಿಗೆ ಜೇಮ್ಸ್​ ವೆಬ್​ ಬಾಹ್ಯಾಕಾಶ ದೂರದರ್ಶಕ (JWST-James Webb Space Telescope)ವನ್ನು ಫ್ರಾನ್ಸ್​ನ ಫ್ರೆಂಚ್​ ಗಯಾನಾದಿಂದ ಉಡಾವಣೆ ಮಾಡಿದೆ. ನಾಸಾ ಇದುವರೆಗೆ ನಿರ್ಮಿಸಿದ ಅತ್ಯಂತ ದೊಡ್ಡ ಟೆಲಿಸ್ಕೋಮ್​ ಎಂದು ತಿಳಿಸಲಾಗಿದ್ದು, ಕ್ರಿಸ್​ಮಸ್​ ದಿನವೇ ಉಡಾವಣೆಗೊಳಿಸಲಾಗಿದೆ.
ವಿಶ್ವದ ಅತ್ಯಂತ ಶಕ್ತಿಶಾಲಿ ಟೆಲಿಸ್ಕೋಪ್​ ಇದಾಗಿದ್ದು, 1990ರ ಏಪ್ರಿಲ್​ನಲ್ಲಿ ಉಡಾವಣೆಯಾಗಿ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿರುವ ಹಬಲ್​ ಸ್ಪೇಸ್​ ಟೆಲಿಸ್ಕೋಪ್​​ಗಿಂತಲೂ ಪ್ರಬಲವಾಗಿದೆ. ಜೇಮ್ಸ್​ ಬೆಬ್​ ಬಾಹ್ಯಾಕಾಶ ಟೆಲಿಸ್ಕೋಪ್​​ನ್ನು ಭೂಮಿಯಿಂದ 15 ಮಿಲಿಯನ್​ ಕಿಲೋಮೀಟರ್​(9,30,000 ಮೈಲುಗಳು)ದೂರದಲ್ಲಿ ಸ್ಥಿರಗೊಳಿಸಲಾಗುವುದು. ಅಲ್ಲಿಂದ ಅದು ವಿಶ್ವವನ್ನು ಅವಲೋಕಿಸಲಿದೆ ಎಂದು ನಾಸಾ ತಿಳಿಸಿದೆ.
ಉಡಾವಣೆ ಬೆನ್ನಲ್ಲೇ ಟ್ವೀಟ್ ಮಾಡಿರುವ ನಾಸಾ ವೆಬ್​ ಟೆಲಿಸ್ಕೋಪ್​, ಜೇಮ್ಸ್ ವೆಬ್​ ದೂರದರ್ಶಕವನ್ನು ಹೊತ್ತೊಯ್ದ ಏರಿಯನ್​ 5 ರಾಕೆಟ್​​ನಿಂದ ಎರಡು ಸಾಲಿಡ್ ರಾಕೆಟ್​ ಬೂಸ್ಟರ್​​ಗಳು ಪ್ರತ್ಯೇಕಿಸಲ್ಪಡಿಲಿವೆ ಮತ್ತು ಅವು ಸಾಗರದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುಗವೆ ಎಂದು ತಿಳಿಸಿದೆ.
ಇನ್ನೊಂದು ಟ್ವೀಟ್ ನಲ್ಲಿ, ವೆಬ್​​ ಅನ್ನು ಹೊತ್ತೊಯ್ದ ಮುಖ್ಯ ರಾಕೆಟ್​ ಏರಿಯನ್​ 5ನ ಮುಖ್ಯ ಎಂಜಿನ್​ಗಳು ಕಡಿತಗೊಂಡಿವೆ. ಮುಖ್ಯ ಭಾಗ ಪ್ರತ್ಯೇಕಗೊಂಡಿದ್ದು, ಹೊತ್ತಿ ಉರಿದಿದೆ. ಇದು ಸುಮಾರು 16 ನಿಮಿಷಗಳ ಕಾಲ ಹೊತ್ತಿ ಉರಿಯುತ್ತದೆ. ಇನ್ನು ವೆಬ್​ ಗಂಟೆಗೆ 25 ಸಾವಿರ ಮೈಲುಗಳಷ್ಟು ವೇಗದಲ್ಲಿ ಚಲಿಸುತ್ತದೆ ಎಂದು ತಿಳಿಸಿದೆ.

ಈ ಜೇಮ್ಸ್ ವೆಬ್​ ಬಾಹ್ಯಾಕಾಶ ಟೆಲಿಸ್ಕೋಪ್​ ಒಟ್ಟು ನಾಲ್ಕು ಪ್ರಮುಖ ವೈಜ್ಞಾನಿಕ ಉಪಕರಣಗಳನ್ನು ಹೊಂದಿದೆ. ನಿಯರ್​ ಇನ್​ಫ್ರಾರೆಡ್​ ಕ್ಯಾಮರಾ, ನಿಯರ್​ ಇನ್​ಫ್ರಾರೆಡ್​ ಸ್ಪೆಕ್ಟೋಗ್ರಾಫ್​, ಮಿಡ್​ ಇನ್​ಫ್ರಾರೆಡ್​ ಉಪಕರಣ ಮತ್ತು ನಿಯರ್ ಇನ್​ಫ್ರಾರೆಡ್​ ಇಮೇಜರ್ ಮತ್ತು ಸ್ಲಿಟ್‌ಲೆಸ್ ಸ್ಪೆಕ್ಟ್ರೋಗ್ರಾಪ್​​ಗಳು ಇದರಲ್ಲಿ ಸೇರಿವೆ. ಬ್ರಹ್ಮಾಂಡದ ಮೊದಲ ಗೆಲಾಕ್ಸಿಯಲ್ಲಿ ಇದುವರೆಗೂ ಪತ್ತೆಯಾಗದೆ ಉಳಿದ ಹಲವಾರು ರಚನೆಗಳನ್ನು ಈ ಉಪಕರಣಗಳ ಸಹಾಯದಿಂದ ಜೇಮ್ಸ್​ ವೆಬ್​ ಟೆಲಿಸ್ಕೋಪ್​ ಪತ್ತೆ ಹಚ್ಚಲಿದೆ. ನಕ್ಷತ್ರ ಮತ್ತು ಗ್ರಹ ವ್ಯವಸ್ಥೆ ರೂಪುಗೊಳ್ಳುವ ಧೂಳುಮೋಡದ ಒಳಗಿನ ರಚನೆಗಳ ಬಗ್ಗೆಯೂ ಗಮನಹರಿಸಲಿದೆ ಎಂದು ನಾಸಾ ಹೇಳಿದೆ.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement