22 ವರ್ಷಗಳ ನಂತರ ಮೊದಲ ಬಾರಿಗೆ ಅಪರೂಪದ ಗುಲಾಬಿ ಬಣ್ಣದ ನಡೆದಾಡುವ ಮೀನು ಪತ್ತೆ

ಆಸ್ಟ್ರೇಲಿಯಾದ ಟಾಸ್ಮೇನಿಯನ್ ಕರಾವಳಿಯ ಬಳಿ 22 ವರ್ಷಗಳ ಬಳಿಕ ಅಪರೂಪದ ನಡೆದಾಡುವ ಮೀನು ಪತ್ತೆಯಾಗಿದೆ…!
ಆಸ್ಟ್ರೇಲಿಯಾದ ಕಾಮನ್​ವೆಲ್ತ್​ ಸೈಂಟಿಫಿಕ್​ ಆ್ಯಂಡ್​ ಇಂಡಸ್ಟ್ರಿಯಲ್​ ರಿಸರ್ಚ್​ ಆರ್ಗನೈಸೇಶನ್​​ನ ಸಂಶೋಧಕರ ತಂಡವು ಈ ಮೀನನ್ನು ಪತ್ತೆ ಮಾಡಿದೆ. 1999ರಲ್ಲಿ ಈ ಗುಲಾಬಿ ಹ್ಯಾಂಡ್​ ಫಿಶ್​ ಕಂಡುಬಂದಿತ್ತು. ಈಗ 22 ವರ್ಷಗಳ ಕಾಣಿಸಿಕೊಂಡಿದೆ. ಪುಟ್ಟ ಕೈಗಳ ಮೂಲಕ ಸಮುದ್ರದಲ್ಲಿ ನಡೆದಾಡುವ ಈ ಮೀನು ತಿಳಿ ಗುಲಾಬಿ ಬಣ್ಣದಲ್ಲಿ ಇರುತ್ತದೆ. ಆಂಗ್ಲರ್​ ಫಿಶ್​ ಎನ್ನುವ ಕುಟುಂಬಕ್ಕೆ ಇದು ಸೇರಿದೆ. ಅಷ್ಟಾಗಿ ಕಾಣಿಸಿಕೊಳ್ಳದ ಕಾರಣದ ಅಳಿವಿನಂಚಿನಲ್ಲಿರುವ ಜೀವಿ ಎಂದು ಸಂಶೋಧಕರು ಹೇಳಿದ್ದಾರೆ.
ಫೆಬ್ರುವರಿಯಲ್ಲಿ ಸಂಶೋಧಕರ ತಂಡ ಟಾಸೈನ್​ ಸಮುದ್ರದ ಒಳಗೆ ಕ್ಯಾಮಾರಾವನ್ನು ಇಳಿಸಿದ್ದರು. 4 ಸಾವಿರ ಮೀಟರ್​ ಅಡಿಯವರೆಗೆ ಕ್ಯಾಮರಾವನ್ನು ಇಳಿಬಿಟ್ಟಿದ್ದರು . ಒಂದು ವರ್ಷದ ನಂತರ ಕ್ಯಾಮರಾವನ್ನು ಹೊರತೆಗೆದು ದೃಶ್ಯಗಳನ್ನು ಪರೀಕ್ಷಿಸಿದಾಗ ಗುಲಾಬಿ ಹ್ಯಾಂಡ್​ ಫಿಶ್​ ಕಂಡುಬಂದಿದೆ. ಸಮುದ್ರದ ಆಳದಲ್ಲಿ ಕಂಡುಬರುವ ಈ ಮೀನು ಈ ಬಾರಿ ಕೇವಲ 150 ಅಡಿ ಆಳದಲ್ಲಿ ಕಂಡುಬಂದಿದೆ.

ಸಮುದ್ರದ ತಳದಲ್ಲಿ ನಡೆದಾಡಲು ಪುಟ್ಟ ಕೈಗಳನ್ನು ಹೊಂದಿರುವ ಈ ಮೀನು, ತಿಳಿ ಗುಲಾಬಿ ಬಣ್ಣದಲ್ಲಿದ್ದು ನೋಡಲೂ ಸುಂದರ. ಸದ್ಯ ಸಂಶೋಧಕರ ತಂಡ ಗುಲಾಬಿ ಹ್ಯಾಂಡ್​ ಫಿಶ್ ಕಾಣಿಸಿಕೊಂಡ 35 ಸೆಕೆಂಡುಗಳ ವಿಡಿಯೋವನ್ನು ಅಧಿಕೃತ್ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement