ಬೂಸ್ಟರ್ ಡೋಸ್ ಗಳು ಈ ಹಿಂದಿನ ಲಸಿಕಾ ಬ್ರಾಂಡಿನದ್ದೇ ಆಗಿದ್ದರೆ ಉತ್ತಮ: ತಜ್ಞರ ಅಭಿಪ್ರಾಯ

ಬೆಂಗಳೂರು: ಬೂಸ್ಟರ್ ಡೋಸ್ ನೀಡುವ ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಬೂಸ್ಟರ್ ಡೋಸ್ ಗಳು ಈ ಹಿಂದಿನ ಲಸಿಕಾ ಬ್ರಾಂಡಿನದ್ದೇ ಆಗಿರಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೂಸ್ಟರ್ ಡೋಸ್ ಲಭ್ಯತೆ ಸಮಸ್ಯೆಯಾಗದ ಹೊರತು ಸಾಮಾನ್ಯವಾಗಿ ಹಿಂದೆ ನೀಡಿದ ಅದೇ ಲಸಿಕೆ ಬ್ರಾಂಡ್‌ನದ್ದೇ ನೀಡಿದರೆ ಉತ್ತಮ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಕೋವಿಡ್-19 ವ್ಯಾಕ್ಸಿನೇಷನ್ ಬೂಸ್ಟರ್ ಶಾಟ್‌ಗಳಿಗಾಗಿ ಸರ್ಕಾರಕ್ಕೆ ಅದೇ ಸಲಹೆ ನೀಡಲಾಗುತ್ತಿದೆ. ಜನವರಿ 10 ರಂದು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಕೊಮೊರ್ಬಿಡಿಟಿ ಹೊಂದಿರುವವರಿಗೆ ಲಸಿಕೆ ಬೂಸ್ಟರ್ ಡೋಸ್ ಗಳನ್ನು ನೀಡುವುದಾಗಿ ರಾಜ್ಯ ಸರ್ಕಾರ ಭಾನುವಾರ ತಿಳಿಸಿದೆ.
ಅಲ್ಲದೆ, ಜನವರಿ 3ರಿಂದ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸಲಾಗುವುದು. ರಾಜ್ಯದಲ್ಲಿ 43 ಲಕ್ಷ ಮಕ್ಕಳು ಲಸಿಕೆ ತೆಗೆದುಕೊಳ್ಳಲು ಅರ್ಹರಾಗಿದ್ದಾರೆ ಎಂದು ತಿಳಿಸಲಾಗಿದೆ.
ಸಾಮಾನ್ಯವಾಗಿ, ಪ್ರತಿರಕ್ಷಣೆಯಲ್ಲಿನ ಬೂಸ್ಟರ್ ಡೋಸ್ ಗಳು ಫಲಾನುಭವಿಗೆ ಹಿಂದೆ ನೀಡಿದ ಅದೇ ಬ್ರಾಂಡ್‌ನದ್ದಾಗಿದ್ದರೆ ಉತ್ತಮ ಎಂದು ನಾವು ಸರ್ಕಾರದೊಂದಿಗೆ ಮಾಹಿತಿ ಹಂಚಿಕೊಂಡಿದ್ದೇವೆ. ಹೆಚ್ಚಿನ ಭಾರತೀಯರು ಕೋವಿಶೀಲ್ಡ್ ತೆಗೆದುಕೊಂಡಿದ್ದಾರೆ ಮತ್ತು ಕೋವಾಕ್ಸಿನ್ ಉತ್ಪಾದನೆ ಮತ್ತು ಪೂರೈಕೆ ತುಂಬಾ ಕಡಿಮೆಯಾಗಿದೆ. ಎರಡು ಡೋಸ್ ಕೋವಿಶೀಲ್ಡ್ ತೆಗೆದುಕೊಂಡ ಎಲ್ಲ ಫಲಾನುಭವಿಗಳಿಗೆ ಇದು ಸಾಕಾಗದಿರಬಹುದು. ಬ್ರಾಂಡ್‌ ಅನ್ನು ಸಾಮಾನ್ಯವಾಗಿ ಅಲಭ್ಯತೆಯ ಕಾರಣದಿಂದಾಗಿ ಬದಲಾಯಿಸಲಾಗುತ್ತದೆ. ಆದರೆ ಬದಲಾವಣೆ ಬೇಡ ಎಂದು ರಾಜ್ಯ ಸರ್ಕಾರದ ಸಲಹೆಗಾರರಾಗಿರುವ ವೈದ್ಯರು ಹೇಳಿದ್ದಾರೆ.
ಕೋವಾಕ್ಸಿನ್ ಅನ್ನು ಈಗ ಮಕ್ಕಳ ಜನಸಂಖ್ಯೆಗೆ ನೀಡಬೇಕು ಎಂದು ತಜ್ಞರು ಹೇಳಿದ್ದಾರೆ. ಟೈಫಾಯಿಡ್ ಮತ್ತು ರೇಬೀಸ್‌ನಂತಹ ರೋಗಗಳ ವಿರುದ್ಧ ವ್ಯಾಕ್ಸಿನೇಷನ್ ಮಾಡಲು, ಬೂಸ್ಟರ್ ಡೋಸ್‌ಗಳು ಈ ಹಿಂದೆ ನೀಡಿದ ಅದೇ ಬ್ರಾಂಡ್‌ನದ್ದಾಗಿರುತ್ತಿತ್ತು. ಏಕೆಂದರೆ ಅವುಗಳು ಒಂದೇ ರೀತಿಯ ಪ್ರತಿಕಾಯಗಳನ್ನು ಘಟಕಗಳನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ.
ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಮತ್ತು ವೈರಾಲಜಿ ವಿಭಾಗದ ಮುಖ್ಯಸ್ಥ ಡಾ. ಟಿ ಜಾಕೋಬ್ ಜಾನ್ ಈ ಬಗ್ಗೆ ಮಾತನಾಡಿದ್ದು, ಕ್ರಾಸ್ಒವರ್ ಲಸಿಕೆಗಳು ಉತ್ತಮ ಫಲಿತಾಂಶಗಳನ್ನು ತೋರಿಸುತ್ತವೆ ಎಂದು ತೋರಿಸುವ ಕೆಲವು ಅಧ್ಯಯನಗಳು ಮತ್ತು ಸಂಶೋಧನೆಗಳಿವೆ. ಆದರೆ ಆ ಅಧ್ಯಯನಗಳಲ್ಲಿ ಯಾವುದೇ ಭಾರತೀಯರೂ ಇಲ್ಲ. ಆದ್ದರಿಂದ, ಹಿಂದೆ ಬಳಸಿದ ಅದೇ ಲಸಿಕೆಯನ್ನು ಬಳಸುವುದು ಸುರಕ್ಷಿತ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾವು ಲಸಿಕೆ ಕ್ರಾಸ್ಒವರ್ ಮಾಡಬೇಕಾದರೆ, ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ ಲಸಿಕೆಗಳನ್ನು ಮಾತ್ರ ಬಳಸುವುದು ಉತ್ತಮ. ಸ್ಪುಟ್ನಿಕ್ ಅನ್ನು ಅವರು ಶಿಫಾರಸು ಮಾಡದ ಕಾರಣ, ಕೋವಾಕ್ಸಿನ್ ಎಂಬ ಸುರಕ್ಷಿತ ಲಸಿಕೆಯನ್ನು ಬಳಸುವುದು ಸೂಕ್ತವಾಗಿದೆ. ಈಗಾಗಲೇ Covishield, Covaxin ಮತ್ತು Sputnik ತೆಗೆದುಕೊಂಡಿರುವವರು Covaxin ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಆಯ್ಕೆ ಮಾಡಿಕೊಳ್ಳಬಹುದು ಎಂದು ಡಾ. ಜಾನ್ ಹೇಳಿದ್ದಾರೆ.
ಒಂದೇ ರೀತಿಯ ಮತ್ತು ವಿಭಿನ್ನ ಬೂಸ್ಟರ್‌ಗಳನ್ನು ಬಳಸುವ ಕುರಿತು ಅಧ್ಯಯನಗಳು ನಡೆಯುತ್ತಿವೆ. ಕೆಲವು ವಾರಗಳಲ್ಲಿ ಫಲಿತಾಂಶಗಳನ್ನು ನಿರೀಕ್ಷಿಸಲಾಗುವುದು. ಇಲ್ಲಿಯವರೆಗೆ ವಿದೇಶದಿಂದ ಲಭ್ಯವಿರುವ ಪುರಾವೆಗಳು ಎರಡೂ ಆಯ್ಕೆಗಳು ಉತ್ತಮ ಇಮ್ಯುನೊಜೆನಿಕ್ ಪ್ರತಿಕ್ರಿಯೆಗಳಿಗೆ ಕಾರಣವಾಗಿವೆ ಎಂದು ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಕೋವಾಕ್ಸಿನ್ ದಾಸ್ತಾನುಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿರುವ ತಜ್ಞರು, ‘ಹೆಚ್ಚಿನ ಜನರು ಕೋವಿಶೀಲ್ಡ್ ಅನ್ನು ತಮ್ಮ ಮೊದಲ ಮತ್ತು ಎರಡನೇ ಡೋಸ್‌ಗಳಾಗಿ ತೆಗೆದುಕೊಂಡಿರುವುದರಿಂದ, ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್‌ಗಳಿಗೆ ಮಿಶ್ರಣ-ಹೊಂದಾಣಿಕೆಯ ನೀತಿಯನ್ನು ಅಳವಡಿಸಿಕೊಂಡರೆ, ಕೋವಾಕ್ಸಿನ್ ದೊಡ್ಡ ಪ್ರಮಾಣದ ಲಭ್ಯತೆಯನ್ನು ಕೇಂದ್ರವು ಖಚಿತಪಡಿಸಿಕೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಭಾನುವಾರ ಹೇಳಿದೆ.

ಪ್ರಮುಖ ಸುದ್ದಿ :-   ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್‌ ಆಪರೇಷನ್‌ ಪ್ರಕರಣ: ದೆಹಲಿಯ ವ್ಯಕ್ತಿಯ ಬಂಧನ

4 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement