ಸಿಡಿಲು ಬಡಿದ ವ್ಯಕ್ತಿ ಪವಾಡ ಸದೃಶವಾಗಿ ಬದುಕುಳಿದ ದೃಶ್ಯ ವಿಡಿಯೊದಲ್ಲಿ ಸೆರೆ…

ವ್ಯಕ್ತಿಯೊಬ್ಬನಿಗೆ ಸಿಡಿಲು ಬಡಿದ ಆಘಾತಕಾರಿ ಕ್ಷಣ ವಿಡಿಯೊದಲ್ಲಿ ಸೆರೆಯಾಗಿದೆ. ಈ ಘಟನೆ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದಿದ್ದು, ವ್ಯಕ್ತಿ ಬದುಕುಳಿದಿದ್ದಾನೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಜಕಾರ್ತಾದ ಉತ್ತರದಲ್ಲಿ ಭಾರೀ ಯಂತ್ರೋಪಕರಣಗಳೊಂದಿಗೆ ವ್ಯವಹರಿಸುವ ಕಂಪನಿಯೊಂದರಲ್ಲಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ 35 ವರ್ಷದ ವ್ಯಕ್ತಿ ಕರ್ತವ್ಯದಲ್ಲಿದ್ದಾಗ ಆತನಿಗೆ ಸಿಡಿಲು ಬಡಿದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಮಳೆಯ ಸಮಯದಲ್ಲಿ ವ್ಯಕ್ತಿ ಕೈಯಲ್ಲಿ ಕೊಡೆ ಹಿಡಿದುಕೊಂಡು ತೆರೆದ ಪ್ರದೇಶದಲ್ಲಿ ಛತ್ರಿ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. ಕೆಲವು ಸೆಕೆಂಡುಗಳ ನಂತರ, ಮಿಂಚು ಈ ವ್ಯಕ್ತಿಗೆ ಬಡಿಯುತ್ತದೆ ಮತ್ತು ಕಿಡಿಗಳು ಭಾರೀ ಪ್ರಮಾಣದಲ್ಲಿ ಸಿಡಿಯುತ್ತ ಹಾರಿಹೋಗುವುದನ್ನು ವಿಡಿಯೊದಲ್ಲಿ ಕಾಣಬಹುದು. ಪರಿಣಾಮವಾಗಿ, ಆತನ ಸಹೋದ್ಯೋಗಿಗಳು ನೆಲಕ್ಕೆ ಬಿದ್ದ ವ್ಯಕ್ತಿಯ ಸಹಾಯಕ್ಕೆ ತಕ್ಷಣವೇ ಧಾವಿಸುತ್ತಾರೆ.
ಅದೃಷ್ಟವಶಾತ್, ಆ ವ್ಯಕ್ತಿ ಮಾರಣಾಂತಿಕ ಮಿಂಚಿನ ಹೊಡೆತದಿಂದ ಬದುಕುಳಿದ್ದಾನೆ, ಆದರೆ ಡೆಟಿಕ್ ನ್ಯೂಸ್ ಪ್ರಕಾರ ಆ ವ್ಯಕ್ತಿಯ ಕೈಗಳಿಗೆ ಸುಟ್ಟಗಾಯಗಳು ಉಂಟಾಗಿವೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಇದೀಗ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಕಂಪನಿಯಲ್ಲಿ ಕಾವಲುಗಾರನಾಗಿದ್ದ ಆತನ ಕೈಯಲ್ಲಿದ್ದ ವಾಕಿ-ಟಾಕಿಯು ಮಿಂಚನ್ನು ಆಕರ್ಷಿಸಿತು ಎಂದು ನಂಬಲಾಗಿದೆ. ಛತ್ರಿಯನ್ನು ಹಿಡಿದು ಆತ ಹೊರಗೆ ಹೋಗುತ್ತಿರುವುದು ಸಹ ಸಿಡಿಲು ಬಡಿಯುವ ಸಾಧ್ಯತೆಯನ್ನು ಹೆಚ್ಚಿಸಿರಬಹುದು ಎಂದು ಊಹಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಜನರು ದೃಶ್ಯಕ್ಕೆ ಕಂಗಾಲಾಗಿದ್ದಾರೆ.

3 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement